ಪೆರ್ಲ : ಧರ್ಮಸ್ಥಳ ಗ್ತಾಮಾಭಿವೃದ್ಧಿ ಯೋಜನೆ ಮಂಜೇಶ್ವರ ತಾಲೂಕಿನ ಪೆರ್ಲ ವಲಯದ ನೇತೃತ್ವದಲ್ಲಿ ಕಾಸರಗೋಡು ವಿನ್ ಟಚ್ ಆಸ್ಪತ್ರೆಯ ಸಹಯೋಗದೊಂದಿಗೆ ಜ್ಞಾನವಿಕಾಸ ಕೇಂದ್ರದ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಪೆರ್ಲದ ವ್ಯಾಪಾರಿ ಸಭಾ ಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಯೋಜನಾಧಿಕಾರಿ ಶಶಿಕಲಾ ಸುವರ್ಣ ಉದ್ಘಾಟಿಸಿದರು. ವಿನ್ ಟಚ್ ಆಸ್ಪತ್ರೆಯ ಸಿಇಒ ಟಿ.ಪಿ. ರಂಜಿತ್, ವೈದ್ಯರಾದ ಅಜೀಜ್ ಮತ್ತು ಮುಫಾಸಿರ್, ಜನಜಾಗೃತಿ ವಲಯಾಧ್ಯಕ್ಷ ಬಿ. ಪಿ. ಶೇಣಿ, ಜನಜಾಗೃತಿ ಮಾಜಿ ಅಧ್ಯಕ್ಷ ಟಿ. ಪ್ರಸಾದ್, ವಲಯಾಧ್ಯಕ್ಷ ಶ್ರೀಧರ ಮಣಿಯಾಣಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಸುರೇಂದ್ರ, ವಲ ಮೇಕ್ವಿಚಾರಕಿ ಜಯಶ್ರೀ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಪತ್ತು ಘಟಕದ ಸದಸ್ಯರು, ಜ್ಞಾನವಿಕಾಸ ಕೇಂದ್ರ ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುನಿತಾ ಸ್ವಾಗತಿಸಿ, ಧರ್ಮತ್ತಡ್ಕ ವಲಯ ಸೇವಾಪ್ರತಿನಿಧಿ ಚಂದ್ರಾವತಿ ವಂದಿಸಿದರು.

.jpg)
