HEALTH TIPS

ಕನಸು ಕೆಡವಿದ ಕಮ್ಯೂನಿಸ್ಟ್ ಭ್ರಷ್ಟ ಆಡಳಿತ ಅಂತ್ಯಗೊಳಿಸಿ ಕೇರಳದಲ್ಲಿ ಬಿಜೆಪಿ ಅರಳಿಸಿದ ಅತುಲ್ ಸ್ಪೂರ್ತಿಯ ಕತೆ

ತ್ರಿಶೂರ್:  ವಿದ್ಯಾಭ್ಯಾಸ, ಕೋರ್ಸ್ ಮುಗಿಸಿದ ಬಳಿಕ ವೃತ್ತಿ ಜೀವನ ಅಥವಾ ಸ್ವಂತ ಉದ್ಯಮ ಮಾಡಲು ಎಲ್ಲರು ಪ್ರಯತ್ನಿಸುತ್ತಾರೆ. ಈ ಪೈಕಿ ಸ್ವಂತ ಉದ್ಯಮ ಆರಂಭಿಸಲು ಹಲವರು ಕನಸು ಕಾಣುತ್ತಾರೆ. ಆದರೆ ಬಹುತೇಕರ ಕನಸು ಆರಂಭದಲ್ಲೇ ಮೊಟಕುಗೊಳ್ಳುತ್ತದೆ. ಪಂಚಾಯಿತಿ ಲೈಸೆನ್ಸ್, ಇತರ ಕ್ಲೀಯರೆನ್ಸ್, ಲಂಚ ಹೀಗೆ ಹಲವು ಕಾರಣಗಳಿಂದ ಕನಸು ಮುಚ್ಚಿ ಹೋಗುತ್ತಿದೆ.

ಹೀಗೆ ಸಿವಿಲ್ ಎಂಜಿನೀಯರಿಂಗ್ ಪೂರೈಸಿ ಕಟ್ಟಡ ನಿರ್ಮಾಣ ಕಂಪನಿ ಆರಂಭಿಸಿದ ಯವಕನಿಗೆ ಕಮ್ಯೂನಿಸ್ಟ್ ಭ್ರಷ್ಟ ಆಡಳಿತದ ಪಂಚಾಯತ್ ಲೈಸೆನ್ಸ್, ಕ್ಲೀಯರೆನ್ಸ್ ಸೇರಿದಂತೆ ಹಲವು ಕಾರಣ ನೀಡಿ ಉದ್ಯಮ ಮುಚ್ಚಿಸಲು ನೋಟಿಸ್ ನೀಡಿತ್ತು. ಉದ್ಯಮ ಮುಚ್ಚಿದ ಈ ಯುವಕ ಇದೀಗ ಅದೇ ಪಂಚಾಯತ್‌ನಲ್ಲಿ ಕಮ್ಯೂನಿಸ್ಟರ ಭ್ರಷ್ಟ ಆಡಳಿತ ಅಂತ್ಯಗೊಳಿಸಿದ್ದಾನೆ. ಇಷ್ಟೇ ಅಲ್ಲ ಇದೇ ಪಂಚಾಯತ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಇದೀಗ ಅಧಿಕಾರಕ್ಕೇರಿದ ಸಾಹಸ ಹಾಗೂ ಸ್ಪೂರ್ತಿಯ ಕತೆ ಇದು. ಈ ಸಾಹಸಿ ಬಿಜಿಪಿ ಸ್ಛಳೀಯ ಮುಖಂಡ ಅತುಲ್ ಕೃಷ್ಣ.

ಅತುಲ್ ಕೃಷ್ಣ ಹೋರಾಟದ ಬದುಕು

ಅತುಲ್ ಕೃಷ್ಣ ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಕಟ್ಟಡ ನಿರ್ಮಾಣ ಕಂಪನಿ ಆರಂಭಿಸಿದ್ದರು. ಇದಕ್ಕಾಗಿ ಆಫೀಸ್ ತೆರೆಯಲು ಕೆಲಸಗಳು ಆರಭಗೊಂಡಿತ್ತು. ಆದರೆ ಕಮ್ಯೂನಿಸ್ಟ್ ಆಡಳಿತದ ಪಂಚಾಯತ್ , ಧೂಳು, ಪರಿಸರ ಮಾಲಿನ್ಯ ಸೇರಿದಂತೆ ಹಲವು ಆರೋಪ ಮಾಡಿತ್ತು. ಜೊತೆಗೆ ಇಲ್ಲಿಗೆ ಕಂಪನಿ ಆರಂಭಿಸಲು ಲೈಸೆನ್ಸ್ ಇಲ್ಲ ಎಂದು ನೋಟಿಸ್ ನೀಡಿ ಮುಚ್ಚಲು ಹೇಳಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಆಫೀಸ್ ಮುಚ್ಚಲಾಯಿತು. ಕನಸಿನ ಗೂಪುರ ನುಚ್ಚು ನೂರಾಯಿತು.

ಬಳಿಕ ಪ್ರತಿ ದಿನ ಪಂಚಾಯತ್ ಅಲೆದು ಅನುಮತಿಗಾಗಿ ಪರದಾಡಿದರು. ಎಲ್ಲೆಡೆ ಲಂಚ ನೀಡಬೇಕಿತ್ತು. ಲಂಚ ನೀಡಿದರೂ ಪರವಾನಗೆ ಸಿಗುತ್ತೆ ಅನ್ನೋದ ಖಚಿತತೆ ಇರಲಿಲ್ಲ. ಪ್ರತಿ ದಿನ ಪಂಚಾಯತ್ ಅಲೆದ ಕಾರಣ ಪಂಚಾಯತ್ ಭ್ರಷ್ಟಾಚಾರ ಅರಿವಾಗಿತ್ತು. ಇದೇ ವೇಳೆ ಸ್ಥಳೀಯರಿಗೆ ಪಂಚಾಯತ್ ದುರಾಡಳಿತದಿಂದ ಆಗುವ ಸಮಸ್ಯೆಗಳು ಅರಿವಿಗೆ ಬಂದಿತ್ತು. ಪಂಚಾಯತ್ ಸಂಗ್ರಹಿಸುವ ಕಸಗಳನ್ನು ಪಕ್ಕದಲ್ಲೇ, ಹಳೇ ಕಟ್ಟಡಗಳ ಪಕ್ಕ, ನಿರ್ಜನ ಪ್ರದೇಶ, ತೋಟಗಳಲ್ಲಿ ಡಂಪ್ ಮಾಡಲಾಗುತ್ತಿತ್ತು. ಈ ಕುರಿತು ವಿಡಿಯೋ ಮಾಡಿ ಹರಿಬಿಟ್ಟ ಅತುಲ್ ಕೃಷ್ಣಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೇ ವೇಳೆ ವಿದ್ಯಾರ್ಥಿಗಳಿಗೆ ನೀಡಿರುವ ಆಟದ ಮೈದಾನದ ದುರಾವಸ್ಥೆ, ನೀರಿನ ಸಮಸ್ಯೆ, ಒಳಚರಂಡಿ ಸೇರಿದಂತೆ ಹಲವು ವಿಡಿಯೋಗಳು ಹಾಗೂ ಪಂಚಾಯತ್ ಅಸಮಪರ್ಕ ವ್ಯವಸ್ಥೆಗಳ ಕುರಿತು ವಿಡಿಯೋ ಮಾಡಿ ವ್ಲಾಗರ್ ಆಗಿ ಗುರುತಿಸಿಕೊಂಡಿದ್ದರು. ಯುವ ಸಾಹಸಿಗೆ ಅಪೂರ್ವ ಬೆಂಬಲ ವ್ಯಕ್ತವಾಗಿತ್ತು.

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿದ ಅತುಲ್

ಅತುಲ್ ಕೃಷ್ಣ ಸಾಮಾಜಿಕ ಕಾರ್ಯಗಳನ್ನು ಗಮನಿಸಿದ ಬಿಜೆಪಿ ಇತ್ತೀಚೆಗ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿದ್ದರೆ. ಅತುಲ್ ಭರ್ಜರಿಯಾಗಿ ಗೆಲುವು ದಾಖಲಿಸಿದ್ದು ಮಾತ್ರವಲ್ಲ, ಬಿಜೆಪಿ ಒಟ್ಟು ನಾಲ್ಕು ಸ್ಥಾನ ಗೆದ್ದುಕೊಂಡಿತು. ಇಲ್ಲಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಾರ್ಟಿ ಅತೀ ಹೆಚ್ಚಿನ ಸ್ಥಾನ ಗೆದ್ದುಕೊಂಡು ಸಂಭ್ರಮಿಸಿತ್ತು. ಆದರೆ ಕಾಂಗ್ರೆಸ್ ಗೆದ್ದ ಅಭ್ಯರ್ಥಿಗಳು ರಾಜೀನಾಮೆ ನೀಡಿ, ಬಿಜೆಪಿ ಬೆಂಬಲಿಸಿದ್ದಾರೆ. ಇದೀಗ ಈ ಪಂಚಾಯತ್‌ನಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಇದರಲ್ಲಿ ಅತುಲ್ ಕೃಷ್ಣ ಪಾತ್ರ ದೊಡ್ಡದು. ಹಲವು ದಶಕಗಳಿಂದ ಇಲ್ಲಿ ಕಮ್ಯೂನಿಸ್ಟ್, ಕಾಂಗ್ರೆಸ್ ಆಡಳಿತ ನಡೆಸಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ನಡೆಸುತ್ತಿದೆ.

ಸಿವಿಲ್ ಎಂಜಿನೀಯರಿಂಗ್ ಸ್ಕೂಲ್

ಇಟ್ಟಿಗೆ ಸೇರಿದಂತೆ ಮನೆ ನಿರ್ಮಣ ಉತ್ಪನ್ನ, ಕಟ್ಟಡ ನಿರ್ಮಾಣ ಕಂಪನಿ ಆರಂಭಿಸಿದಾಗ ಪರಿಸರ ಮಾಲಿನ್ಯ ಎಂದು ಕಂಪನಿ ಮುಚ್ಚಿಸಲಾಗಿತ್ತು. ಇದೇ ಆಫೀಸ್ ಕಚೇರಿಯನ್ನು ಸಿವಿಲ್ ಎಂಜಿನಿಯರಿಂಗ್ ಸ್ಕೂಲ್ ಆಗಿ ಮಾರ್ಪಾಡ ಮಾಡಲಾಗಿದೆ. ಇದೀಗ ಸರಿಸುಮಾರು 200 ಸಿವಿಲ್ ಎಂಜಿನೀಯರಿಂಗ್ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.ಜೊತೆಗೆ ಕಟ್ಟಡ ನಿರ್ಮಾಣ, ಡಿಸೈನ್ ಸರಿದಂತೆ ಹಲವು ಕಾರ್ಯಗಳಲ್ಲಿ ಅತುಲ್ ಕೃಷ್ಣ ತೊಡಗಿಸಿಕೊಂಡಿದ್ದಾರೆ.

ಅತುಲ್ ತನ್ನ ಸಿವಿಲ್ ಎಂಜಿನೀಯರಿಂಗ್ ಸ್ಕೂಲ್‌ನಲ್ಲಿ ಅಂದು ಪಂಚಾಯತ್ ತನಗೆ ನೀಡಿದ ನೋಟಿಸ್‌ನ್ನು ಪ್ರಶಸ್ತಿ ಪ್ರಮಾಣ ಪತ್ರದಂತೆ ಫ್ರೇಮ್ ಹಾಕಿ ಇಟ್ಟಿದ್ದಾರೆ. ಈ ರೀತಿಯ ನೋಟಿಸ್, ಅಡೆ ತಡೆಗಳು ಬಂದರೆ ವಿದ್ಯಾರ್ಥಿಗಳು, ಯುವ ಸಮೂಹ ಯಾವತ್ತು ಕುಗ್ಗದೇ ಮುನ್ನಗ್ಗ ಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries