ಕೇರಳದ ವೇಳಾಪಟ್ಟಿಯನ್ನು ಮೊದಲೇ ಪರಿಷ್ಕರಿಸಲಾಗಿತ್ತು.
ಎಣಿಕೆ ಫಾರಂ ಸಲ್ಲಿಕೆ ಗಡುವನ್ನು ಡಿಸೆಂಬರ್ 18ಕ್ಕೆ ಮುಂದೂಡಲಾಗಿದೆ. ಕರಡು ಮತದಾರರ ಪಟ್ಟಿ ಸಲ್ಲಿಕೆ ಡಿಸೆಂಬರ್ 23ರಂದು ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಪರಿಷ್ಕೃತ ಗಡುವನ್ನು ಡಿಸೆಂಬರ್ 26ಕ್ಕೆ ಮಾರ್ಪಡಿಸಲಾಗಿದೆ.
ಬಾರಾಬಂಕಿ ಸಂಸದ ತನುಜ್ ಪುನಿಯಾ ಸೇರಿದಂತೆ ಉತ್ತರ ಪ್ರದೇಶದಲ್ಲಿ ಎಸ್‌ಐಆರ್ ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, 2027ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದೆ. ಈ ಪ್ರಕ್ರಿಯೆ ನಡೆಸಲು ನಿಮಗೆ ಯಾಕೆ ಇಷ್ಟು ಆತುರ ಎಂದು ಪ್ರಶ್ನಿಸಿದ್ದಾರೆ.

