ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವ ಸಮಿತಿ ಸಭೆ
ಮುಳ್ಳೇರಿಯ: 2017-18ನೇ ಸಾಲಿನ ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವ, ಗಣಿತ ಶಾಸ್ತ್ರ, ಸಮಾಜ ವಿಜ್ಞಾನ, ಗಣಿತ ಶಾಸ್ತ್ರ, ಐಟಿ ಮತ್ತು ವೃತ್ತಿ ಪರಿಚಯ ಮೇಳದ ಅವಲೋಕನಾ ಸಭೆ ಬುಧವಾರ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ನಡೆಯಿತು.
ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ ವಿಜ್ಞಾನೋತ್ಸವದ ಅವಲೋಕನ ನಡೆಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಲೆಕ್ಕಪತ್ರ ಮಂಡಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಎ.ಅಬೂಬಕರ್, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮೊಹಮ್ಮದ್ ಪಟ್ಟಾಂಗ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಸಿ.ಅಬೂಬಕರ್, ಅಭಿವೃದ್ಧಿ ಸಮಿತಿ ಸದಸ್ಯ ಎ.ಕೆ.ಅಬ್ದುಲ್ ರಹಮಾನ್ ಹಾಜಿ, ಎಚ್ಎಂ ಫೋರಂ ಕಾರ್ಯದಶರ್ಿ ವಿಷ್ಣುಪಾಲ ಮಾಸ್ಟರ್ ಉಪಸ್ಥಿತರಿದ್ದರು. ವೃತ್ತಿ ಪರಿಚಯ ಕ್ಲಬ್ಬಿನ ಕಾರ್ಯದಶರ್ಿ ಉಣ್ಣಿಕೃಷ್ಣನ್, ವಿಜ್ಞಾನ ಕ್ಲಬ್ಬಿನ ಕಾರ್ಯದಶರ್ಿ ಪ್ರಮೋದ್, ಗಣಿತ ಕ್ಲಬ್ಬಿನ ಕಾರ್ಯದಶರ್ಿ ರಾಧಾಕೃಷ್ಣ, ಸಮಾಜ ವಿಜ್ಞಾನ ಕ್ಲಬ್ಬಿನ ಕಾರ್ಯದಶರ್ಿ ಅರವಿಂದಾಕ್ಷನ್, ರವೀಂದ್ರ ರೈ ಮಲ್ಲಾವರ, ಮೋಹನ ಮಾಸ್ಟರ್ ಅನಿಸಿಕೆಗಳನ್ನು ಹೇಳಿದರು.
ಪ್ರಾಂಶುಪಾಲ ಶ್ರೀಕೃಷ್ಣ ಭಟ್ ಸ್ವಾಗತಿಸಿ, ಶಿಕ್ಷಕ ಪ್ರಕಾಶ.ಯಂ ಕಾರ್ಯಕ್ರಮ ನಿರೂಪಿಸಿದರು. ಶಾಲಾ ನೌಕರ ಸಂಘದ ಕಾರ್ಯದಶರ್ಿ ಯೂಸುಫ್.ಕೆ. ವಂದಿಸಿದರು.


