ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಮಯಪೊಲಿಮ ಕಾರಡ್ಕಕ್ಕೆ ಪ್ರಶಸ್ತಿ
ಮುಳ್ಳೇರಿಯ: ನಮ್ಮಿಂದ ದೂರವಾಗುತ್ತಿರುವ ಕೃಷಿ ಸಂಸ್ಕೃತಿಯನ್ನು ಪುನಃ ಸ್ಥಾಪಿಸಲು, ಆಹಾರ ಸುರಕ್ಷತೆಯನ್ನು ದೃಢಗೊಳಿಸಲು, ನೀರು, ಮಣ್ಣು, ಪ್ರಕೃತಿ, ಬಯಲನ್ನು ಸಂರಕ್ಷಿಸುವ ಗುರಿಯೊಂದಿಗೆ ಕಾರಡ್ಕ ಗ್ರಾಮ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ಆಯೋಜಿಸಿದ ಮಯಪೊಲಿಮ-2017ರಲ್ಲಿ ಚೋರಾಣ್ ಚೋರ್ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಲಭಿಸಿದೆ.
ಪಂಚಾಯಿತಿನ ಕುಟುಂಬಶ್ರೀ ಸಹಕಾರದಲ್ಲಿ ಕೊಳ್ಳಾಡಿ ಬಯಲಿನಲ್ಲಿ ವೈವಿಧ್ಯಮಯ ರೀತಿಯಲ್ಲಿ ಮಯಪೊಲಿಮ ನಡೆಸಲಾಯಿತು. ಗ್ರಾಮ ಪಂಚಾಯಿತಿ, ಬ್ಲಾಕ್ ಪಂಚಾಯಿತಿ, ಕೃಷಿ ಭವನ, ಗದ್ದೆ ಬಯಲು ಸಮಿತಿ, ಕ್ಲಬ್ಬುಗಳು, ಸ್ವಯಂ ಸಹಾಯ ಸಂಘಗಳು, ಶಾಲೆಯ ಎನ್ಎಸ್ಎಸ್ ವಿದ್ಯಾಥರ್ಿಗಳು, ಶಿಕ್ಷಕರು, ಕೃಷಿಕರು, ಅಂಗನವಾಡಿ ಮಕ್ಕಳು, ಜಿಲ್ಲಾಧಿಕಾರಿಯವರು ಸಹಕಾರ ನೀಡಿದ್ದರು. ಪಳ್ಳಿಕ್ಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಜಲೀಲ್ ಕಾರಡ್ಕ ಸಿಡಿಎಸ್ ಅಧ್ಯಕ್ಷೆ ಗೀತಾ ದಾಮೋದರನ್ ಬಹುಮಾನ ಹಸ್ತಾಂತರಿಸಿದರು.

