ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ನೆಕ್ರಾಜೆ: 3ರಂದು ಜೀಣರ್ೋದ್ಧಾರ ಸಮಿತಿ ಸಭೆ
ಬದಿಯಡ್ಕ: ನೆಕ್ರಾಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀಣರ್ೋದ್ಧಾರ ಸಮಿತಿ ರಚನೆಗಾಗಿ ಡಿ.3ರಂದು ಬೆಳಗ್ಗೆ 9.30ಕ್ಕೆ ಸಭೆ ಕರೆಯಲಾಗಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀಗೋಪಾಲಕೃಷ್ಣ ದೇವರ ವಿಗ್ರಹದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಗರ್ಭಗುಡಿ ಹಾಗೂ ಗೋಪುರಗಳನ್ನು ದುರಸ್ತಿಗೊಳಿಸಿ ಬ್ರಹ್ಮಕಲಶೋತ್ಸವ ನಡೆಯುವುದು. ಅಲ್ಲದೇ ಕ್ಷೇತ್ರದ ಸುತ್ತಲೂ ಶಾಶ್ವತ ಚಪ್ಪರ, ಅಡುಗೆ ಶಾಲೆ, ಕಾಯರ್ಾಲಯ, ವೇದಿಕೆ, ಶೌಚಾಲಯ ಇತ್ಯಾದಿ ಕಾಮಗಾರಿಗಳೊಂದಿಗೆ ಊರ ಪರವೂರ ಭಕ್ತರ ಕೂಡುವಿಕೆಯೊಂದಿಗೆ ಜೀಣರ್ೋದ್ಧಾರ ಸಮಿತಿ ರಚಿಸಲಾಗುವುದು.
ಅಂದು ಬೆಳಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ಮಣಿಯಾಣಿ ನೆಲ್ಲಿತ್ತಲ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ ನಡೆಯುವುದು.

