ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಸಾವಯವ ಕೃಷಿ ಅಮೃತದಂತೆ-ವೇಣುಗೋಪಾಲ್ ಇ.
ಬದಿಯಡ್ಕ: ಸಾವಯವ ಕೃಷಿ ದೇಹ ಮತ್ತು ಮನಸ್ಸುಗಳಿಗೆ ಹಿತಕರವಾಗಿ ಅಮೃತಕ್ಕೆ ಸಮಾನವಾದುದು. ರೋಗ ಮುಕ್ತ ಜೀವನಕ್ಕೆ ಸಾವಯವ ಯುಕ್ತ ಆಹಾರ ಪದ್ದತಿ ಅಗತ್ಯ ಎಂದು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ವೇಣುಗೋಪಾಲ್.ಇ. ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘ ಒಕ್ಕೂಟ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಎಡನೀರು ಶ್ರೀ ಈಶ್ವರಾನಂದ ಭಾರತೀ ಸ್ವಾಮೀಜಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಏರ್ಪಡಿಸಿದ ಸಾವಯವ ತರಕಾರಿ ಕೃಷಿ ವಿಚಾರ ಸಂಕಿರಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಜನತೆ ಹಲವು ರೋಗಗಳಿಗೆ ತುತ್ತಾಗುತ್ತಿರುವುದು ಈಗಿನ ಆಹಾರ ಪದ್ಧತಿಗಳಿಂದ ಎಂದು ಅವರು ಅಧಿಕ ಇಳುವರಿ, ಲಾಭಕೋರತನದ ವ್ಯಾಪರಿ ಬುದ್ದಿಯಿಂದ ರಸಗೊಬ್ಬರಕ್ಕೆ ಮಾರುಹೋದ ಜನರು ಬಳಿಕ ಅವುಗಳಿಂದ ಅನುಭವಿಸಿದ ಸಂಕಷ್ಟಗಳು ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದ್ದು, ಇನ್ನಾದರೂ ಎಚೆತ್ತುಕೊಳ್ಳದಿದ್ದರೆ ಆಪತ್ತು ಖಂಡಿತ ಎಂದು ತಿಳಿಸಿದರು.
ಚೆಂಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಗತಿಪರ ಕೃಷಿಕರಾದ ನಾರಾಯಣ ಭಟ್ ಬಿಲ್ಲಂಪದವು ತರಗತಿ ನಡೆಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ಅಧಿಕಾರಿ ಚೇತನಾ.ಎಂ. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕೃಷಿಕರಾದ ವಸಂತ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


