ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಯಕ್ಷಗಾನ ತಾಳಮದ್ದಳೆ
ಮುಳ್ಳೇರಿಯ: ದೇಲಂಪಾಡಿ ಬನಾರಿಯ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ನೇತೃತ್ವದಲ್ಲಿ ಕೀರಿಕ್ಕಾಡು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ವಾಲಿಮೋಕ್ಷ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
ಶ್ರೀಗೋಪಾಲಕೃಷ್ಣ ಪೂಜೆ ಹಾಗೂ ಸಂಕಲ್ಪದೊಂದಿಗೆ ಪ್ರಾರ್ಥನೆ ಸಲ್ಲಿಸಿ ಆರಂಭಗೊಂಡ ಸಮಾರಂಭದಲ್ಲಿ ಕೀರಿಕ್ಕಾಡು ವನಮಾಲಾ ಕೇಶವ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿನೋದ ಬನಾರಿಯವರ ನಿದರ್ೇಶನದಲ್ಲಿ ನಡೆದ ತಾಳಮದ್ದಳೆಯಲ್ಲಿ ದಿವಾಣ ಶಿವಶಂಕರ ಭಟ್, ಶಂಕರಮೂತರ್ಿ ತೆಕ್ಕುಂಜ, ದೇಲಂಪಡಿ ವೆಂಕಟರಮಣ ಮಾಸ್ತರ್, ಕಲ್ಲಡ್ಕ ಗುತ್ತು ರಾಮಯ್ಯ ರೈ, ಎಂ.ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ನಡುಬೈಲು, ಬಿ.ಎಚ್.ವೆಂಕಪ್ಪ ಗೌಡ, ನಾರಾಯಣ ಪಾಟಾಳಿ ಮಯ್ಯಾಳ ವಿವಿಧ ಪಾತ್ರಗಳಿಗೆ ಅರ್ಥಧಾರಿಗಳಾಗಿ ಜೀವತುಂಬಿದರು.ಹಿಮ್ಮೇಳದಲ್ಲಿ ಭಾಗವತರಾಗಿ ರೋಹಿಣಿ ದಿವಾಣ, ನಿತೀಶ್ ಕುಮಾರ್ ಎಂಕಣಮೂಲೆ, ವಿದ್ಯಾಭೂಷಣ ಪಂಜಾಜೆ, ಹಾಗೂ ಚೆಂಡೆಮದ್ದಳೆಯಲ್ಲಿ ವಿಷ್ಣುಶರಣ ಬನಾರಿ, ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ಗೋಪಾಲಕೃಷ್ಣ ರೈ ಮುದಿಯಾರು ಸಹಕರಿಸಿದರು. ನಂದಕಿಶೋರ್ ಬನಾರಿ ಸ್ವಾಗತಿಸಿ, ಚೈತ್ರಚಂದ್ರಶೇಖರ ಗೌಡ ವಂದಿಸಿದರು.


