ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಸಾಂಸ್ಕೃತಿಕ ಪಯಣ 4 ಬದಿಯಡ್ಕದಲ್ಲಿ ಸೋಮವಾರ
ಕನರ್ಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಿಂದ ಉದ್ಘಾಟನೆ
ಬದಿಯಡ್ಕ: ಕಾಸರಗೋಡಿನ ಗಡಿನಾಡ ಸಾಹಿತ್ಯ - ಸಾಂಸ್ಕೃತಿಕ ಅಕಾಡೆಮಿ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಸಾಹಿತ್ಯ - ಸಾಂಸ್ಕೃತಿಕ ಪಯಣದ ನಾಲ್ಕನೇ ಪಯಣ ಸಮಾರಂಭ ನ. 20 ರಂದು ಸೋಮವಾರ ಸರಕಾರಿ ಫ್ರೌಢಶಾಲೆ ಬದಿಯಡ್ಕದಲ್ಲಿ ಬೆಳಿಗ್ಗೆ 10 ರಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ನಿವೃತ್ತ ಪ್ರಾಂಶುಪಾಲ ಪ್ರ.ಎ.ಶ್ರೀನಾಥ್ ಕಾಸರಗೋಡು ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಉದ್ಘಾಟಿಸುವರು. ಬದಿಯಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೊಟ್ ಹಾಗು ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್.ರೈಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಬದಿಯಡ್ಕ ಗ್ರಾ.ಪಂ. ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಸದಸ್ಯೆ ಶಾಂತ, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಸುಬ್ಬಯ್ಯ ಕಟ್ಟೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ, ಮುಖ್ಯೋಪಾಧ್ಯಾಯ ರಾಜಗೋಪಾಲ.ಕೆ, ಕವಯಿತ್ರಿ, ಶಿಕ್ಷಕಿ ಜೋತ್ಸ್ನಾ ಎಂ. ಕಡೆಂದೇಲು ಉಪಸ್ಥಿತರಿದ್ದು ಶುಭಾಶಂಸನೆಗೈಯುವರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸದಸ್ಯೆ ಜಯಲಕ್ಷ್ಮಿ ಮುಳ್ಳೇರಿಯಾ, ಸಂಧ್ಯಾಗೀತಾ ಬಾಯಾರು, ಸಂಘಟನೆಯ ಪ್ರಧಾನ ಕಾರ್ಯದಶರ್ಿ ಅಖೀಲೇಶ್ ನಗುಮುಗಂ ಉಪಸ್ಥಿತರಿರುವರು.
ಸಮಾರಂಭದಲ್ಲಿ ಬಾಲಪ್ರತಿಭೆಗಳಾದ ಸಿಂಧೂರ ಕುಂಜಾರು, ಸ್ವಸ್ತಿಕ್ ಶರ್ಮರನ್ನು ಅಭಿನಂದಿಸಲಾಗುವುದು. ಜೊತೆಗೆ ಖ್ಯಾತ ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ, ಚಲನಚಿತ್ರ ಉಪನಿದರ್ೇಶಕ ಕೃಷ್ಣ ಕುಮಾರ್, ಪಕ್ಷಿಪ್ರೇಮಿ ರಾಜು ಕಿದೂರುರವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು.
ಬಳಿಕ ವಿದ್ಯಾಥರ್ಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಕವಯಿತ್ರಿ, ಲೇಖಕಿ ಅಕ್ಷತಾ ರಾಜ್ ಪೆರ್ಲ ಸಂಪನ್ಮೂಲ ವ್ಯಕ್ತಿಯಾಗಿ ಬರಹ ಬದುಕು ಹಾಗೂ ನಾವು ವಿಷಯದಲ್ಲಿ ಮಾತನಾಡುವರು.

