HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸವಾಕ್ ಜಿಲ್ಲಾ ಸಮಿತಿ ಸಭೆ=ಸಮ್ಮೇಳನ ಸಿದ್ದತೆ ಅವಲೋಕನ ಕಾಸರಗೋಡು: ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್(ಸವಾಕ್) ನ ಕಾಸರಗೋಡು ಜಿಲ್ಲಾ ಸಮಿತಿಯ ವಿಶೆಷ ಸಭೆ ಶುಕ್ರವಾರ ಸಂಜೆ ವೆಂಕಟರಮಣ ದೇವಸ್ಥಾನ ಬಳಿಯ ಜಿಲ್ಲಾ ಕಾಯರ್ಾಲಯದಲ್ಲಿ ನಡೆಯಿತು. ಸವಾಕ್ ಜಿಲ್ಲಾ ಅಧ್ಯಕ್ಷ, ರಂಗಕಮರ್ಿ ಎಂ.ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮುಂದಿನ ಜನವರಿ 20 ರಂದು ನಡೆಸಲು ಉದ್ದೇಶಿಸಿರುವ ಸವಾಕ್ ಜಿಲ್ಲಾ ಕುಟುಂಬ ಸಂಗಮ ಮತ್ತು ಬೃಹತ್ ಸಮ್ಮೇಳನದ ಬಗ್ಗೆ ವಿಸ್ಕೃತ ಚಚರ್ೆ ನಡೆಸಲಾಯಿತು. ರಾಜ್ಯದಲ್ಲಿ ಕಳೆದ 19 ವರ್ಷಗಳಿಂದ ಸಕ್ರೀಯವಾಗಿ ಕಾಯರ್ಾಚರಿಸುತ್ತಿರುವ ಸವಾಕ್ ಸಂಘಟನೆ ಜಿಲ್ಲೆಯಲ್ಲಿ ರೂಪುಗೊಂಡು ಅತಿ ಕಡಿಮೆ ಅವಧಿಯಲ್ಲಿ ವಿವಿಧ ವಿಭಾಗಗಳ ಕಲಾವಿದರ, ಕಲಾ ಸಂಬಂಧಿ ವಿಷಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿರುವುದರ ಬಗ್ಗೆ ಸಭೆಯಲ್ಲಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಮೆಚ್ಚುಗೆ ವ್ಯಕ್ತಪಡಿಸಿ ಸಂಘಟನೆಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇತ್ತೀಚೆಗೆ ವಿವಿಧ ಉಪಜಿಲ್ಲೆಗಳಲ್ಲಿ ನಡೆದ ಶಾಲಾ ಕಲೋತ್ಸವದ ಸಂದರ್ಭ ವಿವಿಧ ಕಲಾ ಸಾಂಸ್ಕೃತಿಕ ಸ್ಪಧರ್ೆಗಳಿಗೆ ತೀಪರ್ುಗಾರರಾಗಿ ಸವಾಕ್ ನಿದರ್ೇಶಾನುಸಾರ ವಿಷಯಾಧಾರಿತ ಪರಿಣತರನ್ನು ಕಳಿಸಿಕೊಡುವಲ್ಲಿ ಸವಾಕ್ ನ ಪ್ರಯತ್ನಗಳನ್ನು ನೆನಪಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಮೇಲ್ಮಟ್ಟದ ಕಾರ್ಯಚಟುವಟಿಕೆಗಳಿಗೆ ಕರೆನೀಡಿದರು. ಸವಾಕ್ ಸಾಂಸ್ಕೃತಿಕ ಸಂಗಮ 2018 ಜನವರಿ 20 ರಂದು ಜಿಲ್ಲೆಯ ಎಲ್ಲಾ ಕಲಾವಿದರು, ಕಲಾವಿಭಾಗದ ಇತರರನ್ನು ಒಟ್ಟುಗೂಡಿಸಿ ಕಾಸರಗೋಡು ನಗರದಲ್ಲಿ ನಡೆಯಲಿದ್ದು, ಈ ನಿಟ್ಟಿನ ವಿವಿಧ ಕಾರ್ಯಕ್ರಮಗಳ ಬಗ್ಗೆ ಚಚರ್ಿಸಲಾಯಿತು. ಸವಾಕ್ ಸದಸ್ಯತನ ಪಡೆದ ನೂತನ ಸದಸ್ಯರಿಗೆ ಗುರುತು ಪತ್ರ ನೀಡಿ ಈ ಸಂದರ್ಭ ಸ್ವಾಗತಿಸಲಾಯಿತು. ಸಭೆಯಲ್ಲಿ ಸವಾಕ್ನ ಕಾರ್ಯನಿವರ್ಾಹಕ ಕಾರ್ಯದಶರ್ಿ ತುಳಸೀಧರನ್, ಉಮೇಶ್ ಮಾಸ್ತರ್ ಫ್ಯೂಷನ್, ವಿ.ಜಿ.ಕಾಸರಗೋಡು, ದಿವಾಣ ಶಿವಶಂಕರ ಭಟ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries