HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕನ್ನಡ ಭಾಷೆ, ನುಡಿ ಹೃದಯಾಂತರಾಳದಲ್ಲಿ ಉಳಿಯಬೇಕು : ವೈ.ಕೆ.ಮುದ್ದುಕೃಷ್ಣ ಕಾಸರಗೋಡು: ಅಂತರಾಳದ ಕನ್ನಡ ಅಭಿಮಾನ ಆನಂದ ನೀಡುತ್ತದೆ. ಕಾಸರಗೋಡು ಕನರ್ಾಟಕದ ಅವಿಭಾಜ್ಯ ಅಂಗವಾಗಿದ್ದು, ಭಾವನಾತ್ಮಕ ಸಂಬಂಧ ಹೊಂದಿದೆ. ಕನ್ನಡವನ್ನು ಅಂತರಾಳದಲ್ಲಿ ಅರಗಿಸಿಕೊಂಡು ಗಾಯಕರಾಗಬೇಕು. ಈ ಕಾಯರ್ಾಗಾರದಲ್ಲಿ ಭಾಗವಹಿಸಿದ ಗಾಯಕರಿಗೆ ಕಾಸರಗೋಡು ಚಿನ್ನಾ ಅವರ ನೇತೃತ್ವದಲ್ಲಿ ಆಯೋಜಿಸುವ ಸುಗಮ ಸಂಗೀತ ಸಮ್ಮೇಳನದಲ್ಲಿ ಅವಕಾಶ ನೀಡಲಾಗುವುದು ಎಂದು ಕನರ್ಾಟಕ ಸುಗಮ ಸಂಗೀತ ಪರಿಷತ್ತು ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅವರು ಹೇಳಿದರು. ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಕಾರದೊಂದಿಗೆ ಏರ್ಪಡಿಸುವ ಗಡಿ ಪ್ರದೇಶವಾದ ಕಾಸರಗೋಡಿನ ಇಪ್ಪತ್ತು ಕನ್ನಡ ಶಾಲೆಗಳ ಎರಡು ಸಾವಿರ ವಿದ್ಯಾಥರ್ಿಗಳಿಗೆ ನಾಡಗೀತೆ ಹಾಗೂ ಭಾವಗೀತೆ ಕಲಿಕೆ ಕಾಯರ್ಾಗಾರ `ಕನ್ನಡ ಸ್ವರ' ಕಾರ್ಯಕ್ರಮವನ್ನು ನಗರದ ಬಿ.ಇ.ಎಂ. ಹೈಸ್ಕೂಲ್ನಲ್ಲಿ ಶನಿವಾರ ಬೆಳಿಗ್ಗೆ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕವಿಯ ಭಾವವನ್ನು ಗೆಲಿಸಿಕೊಡುವಲ್ಲಿ ಗಾಯನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಕವಿ ಮತ್ತು ಕೇಳುಗರಿಗೆ ನ್ಯಾಯ ದೊರಕಿದಂತೆ ಎಂದು ತಿಳಿಸಿದ ಅವರು, ಕನ್ನಡ ನಾಡು, ನುಡಿ ಬೆಳೆಸಿಕೊಂಡಿರುವ ಕಾಸರಗೋಡು ಯಾವತ್ತೂ ಆಕರ್ಷಣೆ. ತವರು ಮನೆಗೆ ಹೋದ ಅನುಭವವೇ ಆಗುತ್ತಿದೆ ಎಂದರು. 2000 ನೇ ಇಸವಿಯಲ್ಲಿ ಕಾಸರಗೋಡಿನ 18 ಊರುಗಳಲ್ಲಿ ನಡೆಸಿದ ಸಂಗೀತ ರಥಯಾತ್ರೆ ಬದುಕಿನ ಸಾರ್ಥಕ ಕ್ಷಣ ಎಂದ ಅವರು ಕನ್ನಡದ ಅಂತರಾಳದಿಂದ ಚಿಕ್ಕಂದಿನಿಂದಲೇ ಅಥರ್ೈಸುವ ಅವಕಾಶ ವಿದ್ಯಾಥರ್ಿಗಳಿಗೆ ಲಭಿಸಿರುವುದು ಸೌಭಾಗ್ಯ ಎಂದು ಅವರು ತಿಳಿಸಿದರು. ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಕಾಸರಗೋಡಿನಲ್ಲಿ ಸುಗಮ ಸಂಗೀತ ಸಮ್ಮೇಳನವನ್ನು ಆಯೋಜಿಸುವ ಭರವಸೆ ನೀಡಿದ ಅವರು ಈ ಸಮಾವೇಶದಲ್ಲಿ ಇಲ್ಲಿ ಸಂಗೀತ ಕಲಿತ ವಿದ್ಯಾಥರ್ಿಗಳು ಭಾಗವಹಿಸುವಂತಾಗಬೇಕೆಂದರು. ಅತಿಥಿಯಾಗಿ ಭಾಗವಹಿಸಿದ ಪ್ರಶಸ್ತಿ ವಿಜೇತ ಗಾಯಕ ಪುತ್ತೂರು ನರಸಿಂಹ ನಾಯಕ್ ಅವರು ಮಾತನಾಡಿ ಒಳ್ಳೆಯ ಗಾಯಕನಾಗಬೇಕಾದರೆ ಅಭಿನಯ, ಸಂಭಾಷಣೆ ಮಾತುಗಳಲ್ಲಿ ಕೂಡ ಪರಿಣಿತರಿದ್ದರೆ ಮಾತ್ರ ಅದು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯೋಪಾಧ್ಯಾಯ ರಾಜೇಶ್ಚಂದ್ರ ಅವರು ಮಾತನಾಡಿ ಎಲ್ಲಾ ಮಕ್ಕಳು ತರಬೇತಿ ಪಡೆದು ಉತ್ತಮ ಗಾಯಕರಾಗಿ ಬೆಳೆಯಬೇಕೆಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ಕೆ.ಎಸ್.ಸುರೇಖಾ, ಖ್ಯಾತ ಸುಗಮ ಸಂಗೀತ ಗಾಯಕ ಪಂಚಮ್ ಹಳೆಬಂಡಿ ಉಪಸ್ಥಿತರಿದ್ದರು. ರಂಗಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ಮಾತನಾಡಿದರು. ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ನಿದರ್ೇಶಕ ಕೆ.ಸತ್ಯನಾರಾಯಣ ವಂದಿಸಿದರು. ಖ್ಯಾತ ಗಾಯಕ ಕೆ.ವಿ.ರಮಣ್, ಕಿಶೋರ್ ಪೆರ್ಲ ತರಬೇತು ನೀಡಿದರು. ಫೆಬ್ರವರಿ ತಿಂಗಳಲ್ಲಿ ಸಮಾರೋಪ : ಗಡಿಪ್ರದೇಶವಾದ ಕಾಸರಗೋಡಿನ ಕನ್ನಡ ವಿದ್ಯಾಥರ್ಿಗಳಿಗೆ ರಾಷ್ಟ್ರಕವಿ ಕುವೆಂಪು ರಚಿಸಿದ `ಜಯ ಭಾರತ ಜನನಿಯ ತನುಜಾತೆ' (ನಾಡಗೀತೆ) ಮತ್ತು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ `ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ' ಗೀತೆಗಳನ್ನು ಕನ್ನಡದ 20 ಶಾಲೆಗಳ 2000 ಕ್ಕೂ ಅಧಿಕ ವಿದ್ಯಾಥರ್ಿಗಳಿಗೆ ಕಲಿಸಿಕೊಡುವ ಐತಿಹಾಸಿಕ `ಕನ್ನಡ ಸ್ವರ' ಕಾಯರ್ಾಗಾರದ ಮೂಲಕ ಕನ್ನಡದ ಬೇರನ್ನು ಗಟ್ಟಿಗೊಳಿಸುವ ಮತ್ತು ಆ ಮೂಲಕ ಕನ್ನಡವನ್ನು ಜೀವಂತವಾಗಿರಿಸುವ ಪ್ರಯತ್ನವಾಗಿದೆ. 2000 ಕ್ಕೂ ಅಧಿಕ ವಿದ್ಯಾಥರ್ಿಗಳಿಗೆ ನಾಡಗೀತೆ ಮತ್ತು ಭಾವಗೀತಗಳನ್ನು ಕಲಿಸಿಕೊಟ್ಟು ಅವರಲ್ಲಿ ಸುಮಾರು 1000 ವಿದ್ಯಾಥರ್ಿಗಳು ಸಾಮೂಹಿಕವಾಗಿ ಹಾಡುವ ಮೂಲಕ ಇತಿಹಾಸ ನಿಮರ್ಿಸಲಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಗ್ರಾಮೀಣ ಪ್ರದೇಶದ ಶಾಲೆಯೊಂದರಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿದ್ಯಾಥರ್ಿಗಳ ಸಾಮೂಹಿಕ ಗಾಯನ ನಡೆಯಲಿದೆ. * ಈ ಶಿಬಿರದಲ್ಲಿ ಪಾಲ್ಗೊಂಡ 30 ಭರವಸೆ ಮೂಡಿಸುವ ವಿದ್ಯಾಥರ್ಿಗಳನ್ನು ಫೆಬ್ರವರಿಯಲ್ಲಿ ನಡೆಯುವ ಸುಗುಮ ಸಂಗೀತ ಗಾಯಕರ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಲು ಅವಕಾಶ ನೀಡಲಾಗುವುದು. ಕೆಲವು ವರ್ಷಗಳ ಹಿಂದೆ ಪ್ರಥಮ ಹಂತದಲ್ಲಿ ಕಾಸರಗೋಡು ಜಿಲ್ಲೆಯ ಕನ್ನಡದ ಶಾಲೆಗಳ ಸುಮಾರು 5000 ವಿದ್ಯಾಥರ್ಿಗಳಿಗೆ ಕನ್ನಡ ಗೀತೆ ಮತ್ತು ಭಾವಗೀತೆಯನ್ನು ಕಲಿಸಿಕೊಡಲಾಗಿತ್ತು. ಈ ವಿದ್ಯಾಥರ್ಿಗಳು ಜೊತೆಯಾಗಿ ಹಾಡುವ ಐತಿಹಾಸಿಕ ಸಂದರ್ಭವು ಒದಗಿಬಂದಿತ್ತು. ಈ ಕಾರ್ಯಕ್ರಮ ಹಾಡುಗಾರಿಕೆ, ಸುಗಮ ಸಂಗೀತ ಕ್ಷೇತ್ರದ ಹೊಸ ದಾಖಲೆಯಾಗಿ ಗುರುತಿಸಿಕೊಂಡಿದ್ದು, ಈವರೆಗೆ ಆ ದಾಖಲೆಯನ್ನು ಮುರಿದು ಬೇರೊಂದು ಕಾರ್ಯಕ್ರಮ ನಡೆದಿಲ್ಲ. ಭಾವಗೀತೆ ಶಿಬಿರ : ಫೆಬ್ರವರಿ ತಿಂಗಳಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಮೂಹಿಕವಾಗಿ ಹಾಡುವ ವಿದ್ಯಾಥರ್ಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಟರ್ಿಫಿಕೇಟ್ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಆಯ್ದ 250 ಮಂದಿ ವಿದ್ಯಾಥರ್ಿಗಳಿಗೆ ಭಾವಗೀತೆ ಶಿಬಿರ ನಡೆಸಲಾಗುವುದು ಎಂದು ರಂಗಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries