ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಹೀಗೂ ಉಂಟು!= ಆಸ್ಪತ್ರೆಗೆ ತೆರಳಲು ಆಂಬುಲೆನ್ಸ್ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ
ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಿಂಜ ಶಾಂತಿಮೂಲೆಯ ಕಲ್ಯಾಣಿ ಎಂಡೋಸಲ್ಫಾನ್ ರೋಗ ಪೀಡಿತರಾಗಿದ್ದು ಆಸ್ಪತ್ರೆಗೆ ಹೋಗಲು ಅಸಾಧ್ಯ ಸ್ಥಿತಿ ಉಂಟಾಗಿದ್ದು ಇದಕ್ಕಾಗಿ ಗ್ರಾಮ ಪಂಚಾಯಿತಿಗೆ ಆಂಬುಲೆನ್ಸ್ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಶಾಂತಿಮೂಲೆಯ ನಾರಾಯಣ ಎಂಬವರ ಪತ್ನಿ ಕಲ್ಯಾಣಿ ಎಂಡೋಸಲ್ಫಾನ್ ರೋಗ ಪೀಡಿತರಾಗಿದ್ದು ಈ ಪಟ್ಟಿಯಲ್ಲಿರುವವರಿಗಾಗಿರುವ ಸ್ನೇಹ ಸಾಂತ್ವನ ಕಾಡರ್್ ಹೊಂದಿದ್ದಾರೆ. ಅಸೌಖ್ಯದಿಂದ ಮಲ ಮೂತ್ರ ವಿಸರ್ಜನೆಯನ್ನೂ ಮಲಗಿದಲ್ಲಿಯೇ ಮಾಡಬೇಕಾದ ಸ್ಥಿತಿ ಎದುರಾಗಿದೆ. ಸುಮಾರು 5 ವರ್ಷಗಳಿಂದ ಇವರಿಗೆ ಪರರ ಸಹಾಯವಿಲ್ಲದೆ ಎದ್ದು ನಡೆಯಲೂ ಅಸಾಧ್ಯವಾಗಿದೆ. ಈಗ ಕಿಡ್ನಿ ವೈಫಲ್ಯವೂ ಬಾಧಿಸಿದೆ. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅಲ್ಲಿಂದ ಬಿಡುಗಡೆಗೊಂಡು ಪುನಃ ಆಸ್ಪತ್ರೆಗೆ ಬರಲು ಪಂಚಾಯಿತಿಯ ಆಂಬುಲೆನ್ಸ್ಗಾಗಿ ಎಂಡೋಸಲ್ಫಾನ್ ಸೆಲ್ಗೆ ಸಂಪಕರ್ಿಸಿದಾಗ ಆಂಬುಲೆನ್ಸನ್ನು ನೀಡಲು ಅಸಾಧ್ಯವೆಂದೂ, ಬೇಕಾದರೆ ಜೀಪನ್ನು ಕಳುಹಿಸಲಾಗುವುದು ಎಂಬ ಉತ್ತರ ಲಭಿಸಿತ್ತು. ಬಿದ್ದು ಕಾಲು ಮುರಿತಕ್ಕೊಳಗಾದ ಅವರು ಜೀಪಿನಲ್ಲಿ ಪ್ರಯಾಣ ಮಾಡಲು ಅಸಾಧ್ಯ ಸ್ಥಿತಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಎರಡು ದಿನಕ್ಕೊಮ್ಮೆ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತೆರಳಿ ಡಯಾಲಿಸಿಸ್ಗೆ ಒಳಗಾಗಬೇಕಾಗುತ್ತದೆ. ಸರಕಾರಿ ಆಸ್ಪತ್ರೆಗೆ ಹೋದಾಗ ಎರಡು ದಿನಗಳಿಗೊಮ್ಮೆ ಅಸಾಧ್ಯವೆಂದೂ, ಜಿಲ್ಲಾಧಿಕಾರಿಯವರ ಅನುಮತಿ ಇದ್ದರೆ ಮಾತ್ರ ಸಾಧ್ಯವೆಂದೂ ತಿಳಿಸಿದರು. ಗ್ರಾಮ ಪಂಚಾಯಿತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇದ್ದರೂ ಅಗತ್ಯವಿದ್ದಾಗ ಲಭ್ಯವಾಗುತ್ತಿಲ್ಲ. ಹಣ ನೀಡಿ ಖಾಸಗಿ ಆಂಬುಲೆನ್ಸಿಗೆ ಮೊರೆ ಹೋಗಬೇಗಾದ ಗತಿಗೇಡು ಉಂಟಾಗಿದೆ. ಚಿಕಿತ್ಸೆ ಮತ್ತು ವಾಹನ ಬಾಡಿಗೆಗೆ ಹಣ ಹೊಂದಿಸಲು ತುಂಬಾ ಕಷ್ಟಪಡುತ್ತಿರುವ ಈ ಕುಟುಂಬ ದಿನಂಪ್ರತಿ ಔಷಧಿ ಸಹಿತ ಖಚರ್ಿಗೆ ಮಕ್ಕಳು ಕೂಲಿ ಕೆಲಸದಿಂದ ಗಳಿಸಿದ ಹಣದಿಂದ ನಿರ್ವಹಿಸಬೇಕಾಗಿದೆ. ಇಂತಹಾ ಸಂಧಿಗ್ದತೆಯ ಮಧ್ಯೆ ಮನೆಗೆ ರಸ್ತೆ ಸೌಕರ್ಯವಿಲ್ಲದ ಕಾರಣ ಮಕ್ಕಳು ಇವರನ್ನು ಎತ್ತಿಕೊಂಡು ರಸ್ತೆಯ ತನಕ ಹೋಗಬೇಕಾಗುತ್ತಿದೆ.
ಈ ಸ್ಥಿತಿಯಲ್ಲಿ ಎಂಡೋಸಲ್ಫಾನ್ ಪಟ್ಟಿಯಲ್ಲಿರುವವರ ಚಿಕಿತ್ಸೆಗಾಗಿ ಪ್ರಯಾಣ ಮಾಡಲು ಪಂಚಾಯಿತಿನಲ್ಲಿ ಏರ್ಪಡಿಸಿರುವ ಆಂಬುಲೆನ್ಸ್ ವ್ಯವಸ್ಥೆಯನ್ನು ಆಸ್ಪತ್ರೆಗೆ ತೆರಳುವ ಸೌಕರ್ಯಕ್ಕಾಗಿ ಒದಗಿಸಲು ಬೇಕಾದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿಯ ಮೂಲಕ ವಿನಂತಿಸಿದ್ದಾರೆ.
ಏನಂತೆ ಗೊತ್ತಾ:
ರಾಜ್ಯ ಸರಕಾರ ಈ ಹಿಂದೆ ಗ್ರಾ.ಪಂ. ಗಳಿಗೆ ತುತರ್ು ಸೇವೆಗಳಿಗೆ ಆಂಬುಲೆನ್ಸ್ ಸೌಕರ್ಯ ನೀಡಿದ್ದರೂ ನಿರ್ವಹಣೆಯ ಬಗ್ಗೆ ಯಾವುದೇ ನಿದರ್ೇಶನ ನೀಡಿಲ್ಲ. ಕುಂಬ್ಡಾಜೆ ಗ್ರಾ.ಪಂ. ಅತ್ಯಂತ ಒಳ ಪ್ರದೇಶವಾದ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿಗೆ ನೀಡಲಾದ ಆಂಬುಲೆನ್ಸ್ ವಾಹನಕ್ಕೆ ಚಾಲಕ, ಇಂಧನ ನಿರ್ವಹಣೆಯ ಬಗ್ಗೆ ಈ ವರೆಗೆ ಸರಕಾರ ಯಾವುದೇ ನಿದರ್ೇಶನ ನೀಡಿಲ್ಲ. ಗ್ರಾ.ಪಂ. ಯಾವುದಾದರೂ ವಿಭಾಗದಲ್ಲಿ ಅಳವಡಿಸಿ ನಿಧಿ ಮೀಸಲಿರಿಸಿ ಅದನ್ನು ನಿರ್ವಹಿಸಲು ಅವಕಾಶ ಹೊಂದಿಲ್ಲ. ಈ ಬಗ್ಗೆ ಸಹಾಯಕ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಲಾಗಿದ್ದರೂ ಅವರು ಇದಕ್ಕೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಆಂಬುಲೆನ್ಸ್ ಇದ್ದೂ ಬಳಸಲು ಆಗದೆ ಉಪಯೋಗಶೂನ್ಯವಾಗಿದೆ.
ಆನಂದ ಕೆ.ಮವ್ವಾರು.
ಉಪಾಧ್ಯಕ್ಷರು. ಕುಂಬ್ಡಾಜೆ ಗ್ರಾಮ ಪಂಚಾಯತು.



