HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಅಂಗನವಾಡಿ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಯೋಜನೆ ಕಾಸರಗೋಡು: ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಂಡು ಮಕ್ಕಳನ್ನು ಬೆಳೆಸಲು ಕೇರಳದ ಅಂಗನವಾಡಿಗಳು ತಯಾರಾಗುತ್ತಿವೆ. ಇದರ ಅಂಗವಾಗಿ ಅಂಗನವಾಡಿಗಳಲ್ಲಿ ಪರಂಪರಾಗತ ಶಿಕ್ಷಣ ನೀತಿಯ ಜೊತೆಗೆ ಇಂಗ್ಲೀಷ್ ಭಾಷೆಯನ್ನು ಕಲಿಸಲು ರಾಜ್ಯ ಸರಕಾರವು ಸಿದ್ಧತೆ ನಡೆಸುತ್ತಿದೆ. ಕೇಂದ್ರ ಸರಕಾರದ ನೀತಿಯಂತೆ ಈ ಯೋಜನೆಯು ಅನುಷ್ಠಾನಕ್ಕೆ ಬರಲಿದೆ. ಈ ಯೋಜನೆಯಂತೆ ಅಗತ್ಯದ ಮೂಲಭೂತ ಸೌಲಭ್ಯಗಳು ಹೊಂದಿರುವ ರಾಜ್ಯದ 14 ಜಿಲ್ಲೆಗಳಲ್ಲಿ ಆಯ್ದ ತಲಾ ಒಂದರಂತೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ತಮ್ಮ ಮಾತೃ ಭಾಷೆಯ ಜೊತೆಗೆ ಆಂಗ್ಲ ಭಾಷೆಯನ್ನು ಕಲಿಸಲು ನಿಧಲಾಗಿದೆ. ೂಜನೆಯ ದ್ವಿತೀಯ ಹಂತದಲ್ಲಿ ಇತರ ಅಂಗನವಾಡಿಗಳಿಗೂ ಇದನ್ನು ವಿಸ್ತರಿಸಲಾಗುವುದು. ಇಂಗ್ಲೀಷ್ ಭಾಷೆಯನ್ನು ಕಲಿಸಲು ಸೌಕರ್ಯ ಹೊಂದಿರುವ ಅಂಗನವಾಡಿಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಆಯಾ ಜಿಲ್ಲಾ ಸಾಮಾಜಿಕ ನೀತಿ ನಿದರ್ೇಶಕರು ಪ್ರಸ್ತುತ ಇಲಾಖೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸ್ವಂತ ಕಟ್ಟಡ, ಆಟದ ಸ್ಥಳ, ಪ್ರಾಥಮಿಕ ಸೌಕರ್ಯ ಇತ್ಯಾದಿಗಳನ್ನು ಒಳಗೊಂಡ ಅಂಗನವಾಡಿಗಳನ್ನು ಈ ನಿಟ್ಟಿನಲ್ಲಿ ಪರಿಗಣಿಸಲಾಗುವುದು. ಸಂಯೋಜಿತ ಶಿಶು ಅಭಿವೃದ್ಧಿ ಸೇವಾ ಯೋಜನೆ (ಐಸಿಡಿಎಸ್) ಮಿಷನ್ ಪ್ರಕಾರ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸರಕಾರವು ತಿಳಿಸಿದೆ. ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಮುಂದಿನ ದಿನಗಳಲ್ಲಿ ಆರಂಭಿಸಲು ಕೂಡ ತೀಮರ್ಾನಿಸಲಾಗಿದೆ. ಆ ಮೂಲಕ ಪ್ರೀ ಸ್ಕೂಲ್ ಮಟ್ಟಕ್ಕೇರಿಸಿ, ಶಾಲಾ ಶಿಕ್ಷಣ ಪ್ರವೇಶಕ್ಕೆ ಮೊದಲೇ ಮಕ್ಕಳನ್ನು ಪ್ರಾಪ್ತರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೇಂದ್ರ ಸರಕಾರದ 2013ರ ಬಾಲ್ಯ ಕಾಲ ಸಂರಕ್ಷಣಾ ಶಿಕ್ಷಣ ನೀತಿಯಲ್ಲೂ ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಭಾಷೆ ಕಲಿಸುವಂತೆ ತಿಳಿಸಲಾಗಿದೆ. ಅದನ್ನು ಪರಿಗಣಿಸಿ ಅಂಗನವಾಡಿಗಳಲ್ಲಿ ಈ ಪರಿಷ್ಕಾರ ತರಲು ರಾಜ್ಯ ಸಾಮಾಜಿಕ ನ್ಯಾಯ ಇಲಾಖೆಯು ನಿರ್ಧರಿಸಿದೆ. ಇದಕ್ಕಾಗಿ ಪ್ರತ್ಯೇಕ ಪಠ್ಯ ಪದ್ಧತಿಗೂ ರೂಪು ನೀಡಲಾಗುವುದು. ಅಂಗನವಾಡಿಗಳ ಮೂರು ವರ್ಷದಿಂದ ಆರು ವರ್ಷ ಪ್ರಾಯದ ಮಕ್ಕಳಿಗೆ ಆಟ ಮತ್ತು ಹಾಡುಗಳೂ, ಇಂಗ್ಲೀಷ್ ಭಾಷೆ ಕಲಿಸಿ ಮಕ್ಕಳಿಗೆ ಸುಲಲಿತವಾಗಿ ಆ ಭಾಷೆಯ ಪರಿಜ್ಞಾನ ಮೂಡಿಸುವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪಠ್ಯ ಪದ್ಧತಿಯನ್ನು ರಚಿಸಲು ತೀಮರ್ಾನಿಸಲಾಗಿದೆ. ಕಾಸರಗೋಡಿನಲ್ಲಿ ಯೋಜನೆಗೆ ಸಿದ್ಧತೆ : ಕಾಸರಗೋಡು ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಪ್ರಾಥಮಿಕ ಸೌಕರ್ಯಗಳಿರುವ ಅಂಗನವಾಡಿಗಳ ಗುರುತಿಸುವಿಕೆ ಸದ್ಯದಲ್ಲೇ ಆರಂಭಗೊಳ್ಳಲಿದೆ. ಯೋಜನೆಯನ್ನು ಪ್ರಥಮ ಮತ್ತು ದ್ವಿತೀಯ ಎಂಬೆರಡು ಹಂತಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರಥಮ ಹಂತದಲ್ಲಿ ಜಿಲ್ಲೆಯ ಒಂದು ಅಂಗನವಾಡಿಯನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries