HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ರಸ್ತೆ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ನೀಡಲು ಸಿದ್ಧ : ಗಡ್ಕರಿ ತಿರುವನಂತಪುರ: ರಾಷ್ಟ್ರೀಯ ಹೆದ್ದಾರಿಯನ್ನು ಛತುಷ್ಪತಗೊಳಿಸುವ ಯೋಜನೆಯಂಗವಾಗಿ ರಸ್ತೆಗೆ ಬೇಕಾದ ಜಾಗವನ್ನು ಕೇರಳ ಸರಕಾರವು ಒತ್ತುವರಿ ಮಾಡಿಕೊಟ್ಟರೆ ಒಂದು ಲಕ್ಷ ಕೋಟಿ ರೂ.ನೀಡಲು ಕೇಂದ್ರ ಸರಕಾರವು ಸಿದ್ಧವಿರುವುದಾಗಿ ಕೇಂದ್ರ ಉನ್ನತ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಾಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಕೇರಳ ಸರಕಾರವು ಭಾರೀ ಲೋಪವೆಸಗಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಬೊಟ್ಟು ಮಾಡಿದರು. ತಿರುವನಂತಪುರದಲ್ಲಿ ಇನ್ಕ್ಲಿಸಿವ್ ಇಂಡ್ಯಾ ಇಕಾನಮಿಕ್ ಫಾರಂ(ಐಐಎಇಎಫ್ 2017) ಭಾರತದ ರಸ್ತೆ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಬೆಳವಣಿಗೆ ಎಂಬ ವಿಷಯದ ಕುರಿತಾಗಿ ಅವರು ಮಾತನಾಡಿದರು. ರಸ್ತೆಯನ್ನು ಅಗಲಗೊಳಿಸಲು ಬೇಕಾಗುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತ್ವರಿತಗೊಳಿಸಿದರೆ ಹಣವನ್ನು ಮಂಜೂರುಗೊಳಿಸುವುದಕ್ಕೆ ಕೇಂದ್ರ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣವಿಲ್ಲ. ಕೇರಳವನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯಗಳಲ್ಲೂ ರಸ್ತೆ ಅಭಿವೃದ್ಧಿಯು ವೇಗವಾಗಿ ನಡೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರವು ರಸ್ತೆ ಅಭಿವೃದ್ಧಿಗೆ ದೊಡ್ಡಮಟ್ಟಿನ ಪ್ರಾಧಾನ್ಯತೆಯನ್ನು ನೀಡುತ್ತಿದೆ. ದೇಶದ ರಾಷ್ಟ್ರೀಯ ಹೆದ್ದಾರಿಯನ್ನು ಎರಡು ಲಕ್ಷ ಕಿ.ಮೀ. ಆಗಿ ವಿಸ್ತರಿಸಲಾಗುವುದು. 403 ರಸ್ತೆ ಯೋಜನೆಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಭಾರತ್ ಮಾಲಾ ಯೋಜನೆಯಾಧಾರದಲ್ಲಿ ಈ ರಸ್ತೆ ಅಭಿವೃದ್ಧಿಯು ನಡೆಯುತ್ತಿರುವುದಾಗಿ ಅವರು ಬೊಟ್ಟು ಮಾಡಿದರು. ಪ್ರಜೆಗಳ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಗಾಗಿ ಮೋದಿ ಸರಕಾರವು ಭಾರೀ ದೊಡ್ಡ ಮಟ್ಟಿನ ನಿಕ್ಷೇಪವನ್ನು ವ್ಯಯಿಸುತ್ತಿದೆ. ಬೈಪಾಸುಗಳ ನವೀಕರಣೆ, ಗ್ರಾಮಗಳು ಮತ್ತು ನಗರಗಳನ್ನು ಪರಸ್ಪರ ಸಂಪಕರ್ಿಸುವ ಲಿಂಕ್ ರಸ್ತೆಗಳ ನವೀಕರಣೆ ಮೊದಲಾದವುಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಪರಿಸರ ಹಿತ ಇಂಧನ ಬಳಕೆಯ ಮೂಲಕ ಮಾಲಿನ್ಯ ಮತ್ತು ದುಬಾರಿ ವೆಚ್ಚವನ್ನು ಕಡಿಮೆಗೊಳಿಸಲು ಗುರಿಯಿರಿಸಲಾಗಿದೆ. ಸಾರಿಗೆ ವ್ಯವಸ್ಥೆಗೂ ಹೆಚ್ಚಿನ ಆದ್ಯತೆಯನ್ನು ನೀಡಲು ಯೋಚಿಸಲಾಗುತ್ತಿದೆ. ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆಯನ್ನು ಮಾಡುವುದಕ್ಕಾಗಿ ಸರಕಾರವು ಯೋಚಿಸುತ್ತಿದೆ. ಮಿಥೇನೋಲ್ ಉಪಯೋಗಿಸಿದ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರಕಾರವು ಯೋಚಿಸುತ್ತಿದೆ. ವಿದೇಶಗಳಲ್ಲಿ ಈ ಯೋಜನೆಯು ಯಶಸ್ವಿಗೊಂಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಬಳಕೆಗೆ ತರಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವರು ತಿಳಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಘ ಚಾಲಕ್ ಪಿ.ಇ.ಬಿ.ಮೆನೋನ್, ಜನ್ಮಭೂಮಿಯ ನಿದರ್ೇಶಕ ಎಂ.ರಾಧಾಕೃಷ್ಣನ್, ಸಿಎಂಆರ್ಎಲ್ನ ಮಾಜಿ ನಿದರ್ೇಶಕ ಏಲಿಯಾಸ್ ಜಾಜರ್್ ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಕಲ್ಯಾನ್ ಸಿಲ್ಕ್ಸ್ನ ಎಂಡಿ ಪಟ್ಟಾಭಿರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries