ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಮಧೂರು ವೆಂಕಟಕೃಷ್ಣರ `ಯಾತ್ರಾಸ್ಥಳಗಳ ಪರಿಚಯ' ಕೃತಿ ಅನಾವರಣ
ಬದಿಯಡ್ಕ: ಮಾನವನ ಬದುಕಿನಲ್ಲಿ ಕೆಲವೊಂದು ಬದ್ಧತೆಯ ಸೂತ್ರಗಳಿವೆ. ಅವುಗಳನ್ನು ಅನುಷ್ಠಾನಿಸುತ್ತಾ ಬಂದಾಗ ಬದುಕಿನಲ್ಲಿ ನಿಜಾರ್ಥದ ನೆಮ್ಮದಿಯನ್ನು ಕಾಣಬಹುದು. ವರ್ತಮಾನದಲ್ಲಿ ತೀರ್ಥಕ್ಷೇತ್ರಗಳ ಯಾತ್ರೆಗಳು, ದೇವಾಲಯ ಸಂದರ್ಶನಗಳು ಮನಸ್ಸಿಗೆ ಮುದ ನೀಡುವ ಹವ್ಯಾಸಗಳು ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.
ಅವರು ಎಡನೀರು ಶ್ರೀ ಮಠದಲ್ಲಿ ಲಕ್ಷದೀಪೋತ್ಸವದಂದು ಹಿರಿಯ ಕಲಾವಿದ, ಪ್ರಸಂಗಕರ್ತ ಮಧೂರು ವೆಂಕಟಕೃಷ್ಣ ವಿರಚಿತ `ಯಾತ್ರಾಸ್ಥಳಗಳ ಪರಿಚಯ' ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿದರು.
ತಾನು ಸಂದಶರ್ಿಸಿದ ಯಾತ್ರಾಸ್ಥಳಗಳ ಅನುಭವಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ವಿಷ್ಯಕ್ಕೊಂದು ಆಕರ ಎಂದರು. ಕನರ್ಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೆಂಕಟಕೃಷ್ಣ ಅವರು ಹಲವು ಯಕ್ಷಗಾನ ಪ್ರಸಂಗಗಳ ರಚಿತರು.
ಈ ಸಂದರ್ಭದಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವರಾಮ ಜೋಗಿಯವರನ್ನು ಸಮ್ಮಾನಿಸಲಾಯಿತು. ಅಂಕಣಕಾರ, ಕಲಾವಿದ ನಾ.ಕಾರಂತ ಪೆರಾಜೆಯವರು ಜೋಗಿಯವರನ್ನು ನುಡಿಹಾರಗಳ ಮೂಲಕ ಅಭಿನಂದಿಸುತ್ತಾ, ಕಲಾವಿದನ ಸೇವೆ ದಾಖಲಾಗಬೇಕು. ಮೇಳನಿಷ್ಠ, ಕಲಾನಿಷ್ಠ ಜೋಗಿಯವರ ಮೇಳ ಜೀವನವೇ ಯಕ್ಷಗಾನಕ್ಕೆ ಕೊಡುಗೆ ಎಂದರು. ಪೂಜ್ಯ ಸ್ವಾಮೀಜಿಯವರು ಜೋಗಿಯವರನ್ನು ಸಮ್ಮಾನಿಸಿದರು.
ಶ್ರೀ ಮಠದ ರಾಜೇಂದ್ರ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಜಯರಾಮ ಮಂಜತ್ತಾಯ ಉಪಸ್ಥಿತರಿದ್ದರು. ಬಳಿಕ ಶ್ರೀ ಹನುಮಗಿರಿ ಮೇಳದವರಿಂದ `ಪಂಚವಟಿ-ಮಕರಾಕ್ಷ ಕಾಳಗ' ಪ್ರಸಂಗಗಳ ಬಯಲಾಟ ಜರಗಿತು


