ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಚೆಕ್ ಬುಕ್ ಸೌಲಭ್ಯವನ್ನು ಹಿಂಪಡೆಯುವುದಿಲ್ಲ : ಕೇಂದ್ರ ಸಕರ್ಾರದಿಂದ ಸ್ಪಷ್ಟನೆ
ದೆಹಲಿ : ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡುವ ದೃಷ್ಠಿಯಿಂದ ಚೆಕ್ಬುಕ್ಕನ್ನು ವಾಪಸ್ ಪಡೆದುಕೊಳ್ಳಲು ಕೇಂದ್ರ ಸಕರ್ಾರ ನಿರ್ಧರಿಸಿದೆ ಎಂಬ ವರದಿ ಸುಳ್ಳು. ಚೆಕ್ ಬುಕ್ ಸೌಲಭ್ಯವನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸಕರ್ಾರ ಸ್ಪಷ್ಟಪಡಿಸಿದೆ.
ಚೆಕ್ ಬುಕ್ ವಾಪಸ್ಪಡೆಯಲಾಗುತ್ತದೆ ಎಂಬ ವರದಿ ಸುಳ್ಳು ಎಂದು ಹಣಕಾಸು ಸಚಿವಾಲಯ ಟ್ವಿಟರ್ನಲ್ಲಿ ಹೇಳಿದೆ. ಆದರೆ ದೇಶದಲ್ಲಿ ಹಣ ಪಾವತಿ ವ್ಯವಸ್ಥೆಯಲ್ಲಿ ಚೆಕ್ ಬುಕ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದು ವ್ಯಾಪಾರ, ವಹಿವಾಟುಗಳ ಬೆನ್ನೆಲುಬಾಗಿದೆ. ವಹಿವಾಟಿನ ಸುರಕ್ಷತೆಯ ದೃಷ್ಠಿಯಿಂದ ಚೆಕ್ ಬುಕ್ಗಳು ಬಹಳ ಮುಖ್ಯ ಎಂದು ಹೇಳಿದೆ.


