ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಶತಚಂಡಿಕಾ ಯಾಗ, ಸಭಾಭವನ ಉದ್ಘಾಟನೆ, ಶ್ರೀಗಳ ಮೊಕ್ಕಾಂ
ಪೆರ್ಲ: ಜಗಜ್ಜನನಿ ದುಗರ್ೆಯನ್ನು ಶ್ರದ್ದಾ ಭಕ್ತಿಯಿಂದ ಆರಾಧಿಸುವುದು ಶ್ರೀದೇವಿಯಲ್ಲಿ ಮಾತೃ ವಾತ್ಸಲ್ಯಕ್ಕೆ ಕಾರಣವಾಗಿ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ಪರಂಪರೆಯಿಂದ ಶ್ರದ್ದಾ ಕೇಂದ್ರವಾಗಿ ಭಜಕರಿಗೆ ಮಾರ್ಗದರ್ಶನ ನೀಡುತ್ತಿರುವ ಮಠ ಮತ್ತು ಯತಿಗಳು ಹಾಗು ಆರಾಧ್ಯ ದೇವತೆಯ ಬಗೆಗಿನ ಶ್ರದ್ದಾಪೂರ್ವಕ ಆರಾಧನೆ ನೆಮ್ಮದಿ ಸಮೃದ್ದತೆ ನೀಡಿ ಜೀವನದ ಔನ್ನತ್ಯಕ್ಕೇರಿಸುತ್ತದೆ ಎಂದು ಶ್ರೀಮದ್ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ಪೂರ್ವಕ ಅನುಗ್ರಹಿಸಿದರು.
ರಾಜಾಪುರ,ಬಾಲಾವಲೀಕಾರ್ ಸಾರಸ್ವತ ಬ್ರಾಹ್ಮಣರ ಶ್ರದ್ದಾ ಕೇಂದ್ರವಾದ ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುಗರ್ಾಪರಮೇಶ್ವರಿ ದೇವಸ್ಥಾನಕ್ಕೆ ಭಾನುವಾರ ಸಂಜೆ ಐದು ದಿನಗಳ ಮೊಕ್ಕಾಂಗೆ ಆಗಮಿಸಿದ ಶ್ರೀಮದ್ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ನೂತನ ಶಿವಾನಂದ ಸರಸ್ವತಿ ಸಭಾ ಭವನವನ್ನು ಲೋಕಾರ್ಪಣೆಗೊಳಿಸಿ ಬಳಿಕ ನಡೆದ ವಿದ್ವತ್ ಗೋಷ್ಠಿಯಲ್ಲಿ ಆಶೀರ್ವಚನಗೈದು ಅವರು ಮಾತನಾಡಿದರು.
ಹಿಂದಿನಿಂದಲೂ ಸಾರಸ್ವತ ಸಮಾಜ ದೇವರು ಮತ್ತು ಗುರುಗಳಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ನಂಬಿಕೆ ಇರಿಸಿ ಸಮಾಜದಲ್ಲಿ ಗಣನೀಯ ಪ್ರಮಾಣದಲ್ಲಿ ಬೆಳೆದುಬಂದಿದೆ. ಆಧುನಿಕ ಜಾಗತಿಕ ವ್ಯವಸ್ಥೆಗಳು ಯುವ ಸಮೂಹವನ್ನು ಗೊಂದಲಗೊಳಿಸುವುದಾದರೂ ಸಮಾಜದ ಪ್ರಜ್ಞಾವಂತರ ಸಹಕಾರದೊಂದಿಗೆ ಏಕತೆ, ಧಾಮರ್ಿಕ ಚಿಂತತನೆಗಳ ಪಸರಿಸುವಿಕೆ, ಧರ್ಮ ಮಾರ್ಗದ ಜೀವನಕ್ರಮಗಳ ಅಳವಡಿಸುವಿಕೆಯಲ್ಲಿ ವ್ಯಾಪಕ ಕಾರ್ಯಚಟುವಟಿಕೆಗಳ ಮೂಲಕ ಮುಂದುವರಿಯುತ್ತಿರುವುದು ಸಮಧಾನಕರ ಎಂದು ತಿಳಿಸಿದರು. ಒಗ್ಗಟ್ಟು, ಸಹಕಾರ ಮನೋಭಾವ ಪರಸ್ಪರ ಕೈಜೋಡಿಸುವಿಕೆಯೊಂದಿಗೆ ಮುಂದುವರಿದಾಗ ಒಳಿತು ಉಂಟಾಗುತ್ತದೆ ಎಂದು ತಿಳಿಸಿದ ಶ್ರೀಗಳು ತಮ್ಮಿಂದ ಈ ಹಿಂದೆ ಈ ಸಭಾ ಭವನದ ಶಂಕುಸ್ಥಾಪನೆಗೊಂಡಿರುವುದನ್ನು ನೆನಪಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಸಭಾ ಭವನ ನಿಮರ್ಾಣ ಸಮಿತಿ ಗೌರವಾಧ್ಯಕ್ಷ ಶೇಣಿ ತೋಟದಮನೆ ಮುಕುಂದ ನಾಯಕ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಎಂ.ಗೋಕುಲದಾಸ ನಾಯಕ್, ಉದ್ಯಮಿ, ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ, ಕನರ್ಾಟಕ ಕಂದಾಯ ಇಲಾಖೆಯ ಉಪಕಾರ್ಯದಶರ್ಿ ಬಿ.ಸದಾಶಿವ ಪ್ರಭು ಎಳ್ಳಾರೆ ಕಾರ್ಕಳ, ಕ್ಯಾಂಪ್ಕೋದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪುಣಚ, ರಾಷ್ಟ್ರೀಯ ಸಾರಸ್ವತ ಬ್ರಾಹ್ಮಣ ಸಂಘ ಬೆಂಗಳೂರಿನ ಅಧ್ಯಕ್ಷ, ಕೆನರಾ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಆರ್.ಕೆ.ನಾಯಕ್ ಬೆಂಗಳೂರು, ಅಪಸಾಡಿ ಪಳ್ಳಿ ಶ್ರೀಉಮಾಮಹೇಸ್ವರಿ, ದುಗರ್ಾಪರಮೇಶ್ವರಿ ದೇವಸ್ಥಾನದ ಧರ್ಮದಶರ್ಿ ಪುಂಡಲೀಕ ನಾಯಕ್ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ನ. 19 ರಂದು ಬೆಳಿಗ್ಗೆ 7ಕ್ಕೆ ನಿತ್ಯಪೂಜೆ, 8ಕ್ಕೆ ದೇವತಾ ಪ್ರಾರ್ಥನೆ, ಕೂಷ್ಮಾಂಡಹೋಮ ಸಹಿತ ಪ್ರಾಯಶ್ಚಿತ ವಿಧಿವಿಧಾನಗಳು, ಗಾಯತ್ರೀ ಜಪ, ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳ ಆರಾಧನೆ ನಡೆಯಿತು. 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಅಪರಾಹ್ನ 2.30ಕ್ಕೆ ಮಾವಿನಕಟ್ಟೆ ಉದಯಗಿರಿಯ ಮಹಾವಿಷ್ಣು ಮಕ್ಕಳ ಯಕ್ಷಗಾನ ತಂಡದಿಂದ ಸುದರ್ಶನ ವಿಜಯ ಬಯಲಾಟ ಪ್ರದರ್ಶನಗೊಂಡಿತು.ಬಳಿಕ ಸಂಜೆ 5ಕ್ಕೆ ಅಡ್ಕಸ್ಥಳದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ಹೊರಟು ಕ್ಷೇತ್ರಕ್ಕೆ ಆಗಮಿಸಿತು. ಮೊದಲು ಅಡ್ಕಸ್ಥಳದಲ್ಲಿ ಶ್ರೀಕೈವಲ್ಯ ಮಠಾಧೀಶರನ್ನು ಎದುರುಗೊಂಡು ಶ್ರೀಕ್ಷೇತ್ರಕ್ಕೆ ವಾದ್ಯಘೋಷ,ಕಲಶಕನ್ನಡಿಗಳ ಸಾಂಪ್ರದಾಯಿಕ ಕ್ರಮಗಳೊಂದಿಗೆ ಸ್ವಾಗತಿಸಲಾಯಿತು. ಸಭಾ ಭವನದ ಉದ್ಘಾಟನೆಯ ಬಳಿಕ ಭಜನೆ, ನಿತ್ಯಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ವಿತರಣೆ ನಡೆಯಿತು.
ಇಂದು ನ.20 ರಂದು ಬೆಳಿಗ್ಗೆ 7ಕ್ಕೆ ಪ್ರಾಥಃಸ್ಮರಣೆ, ಗಣಪತಿಪೂಜನ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ಮಹಾಸಂಕಲ್ಪ, ಆಚಾರ್ಯಋತ್ವಿಗ್ವರಣ, ಮಧುಪರ್ಕಪೂಜೆ, ದೇವತಾ ಸ್ಥಾಪನೆ, ಸಪ್ತಶತಿ ಪಾರಾಯಣ, ಸಗ್ರಹ ಗಣಪತಿ ಅರ್ಥರ್ವ ಶೀರ್ಷ ಪುರಶ್ಚರಣ ಹವನ, 10 ಕ್ಕೆ ಭಜನೆ, 10.30ಕ್ಕೆ ಭಿಕ್ಷಾ ಸಂಕಲ್ಪ, 11.30ಕ್ಕೆ ಪೂಣರ್ಾಹುತಿ, ಮಂಗಳಾರತಿ, ಭವಾನಿಶಂಕರ ದೇವರ ಪೂಜೆ, ಪ್ರಸಾದ ವಿತರಣೆ, ನಡೆದು, ಅಪರಾಹ್ನ 2ಕ್ಕೆ ಶ್ರೀಕೈವಲ್ಯ ಶ್ರೀಗಳ ಪಾದಪೂಜೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತಾಳಮದ್ದಳೆ 3 ರಿಂದ ಪ್ರಸ್ತುತಗೊಂಡಿತು. ಸಂಜೆ 6ಕ್ಕೆ ಭಕ್ತಿಸಂಗೀತ-ದಾಸ ಸಂಕೀರ್ತನೆ, 7ಕ್ಕೆ ದುಗರ್ಾಪರಮೇಶ್ವರಿ ದೇವಿ ಪೂಜೆ, ವಿಶೇಷ ಹೂವಿನ ಪೂಜೆ, ಭವಾನಿ ಶಂಕರ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಿತು.
ನ. 21 ರಂದು ಬೆಳಿಗ್ಗೆ 7ಕ್ಕೆ ಪ್ರಾಥಃಸ್ಮರಣೆ, ಪ್ರಾಕಾರ ಶುದ್ದಿ, ದೇವತಾ ಸ್ಥಾಪನೆ, ಸಪ್ತಶತಿ ಪಾರಾಯಣ, ಸೌರಸೂಕ್ತ, ಪುರುಷಸೂಕ್ತ, ಶ್ರೀಸೂಕ್ತ, ಜಪಹೋಮ, ಭಜನೆ, ಭಿಕ್ಷಾ ಸಂಕಲ್ಪ, 10.45 ಕ್ಕೆ ಶ್ರೀದೇವಿಗೆ ಸೀಯಾಳ ಅಭಿಷೇಕ, ಪೂಣರ್ಾಹುತಿ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ. ಅಪರಾಹ್ನ 2ಕ್ಕೆ ಪಾದಪೂಜೆ, 3ಕ್ಕೆ ಸತ್ಯ ಹರಿಶ್ಚಂದ್ರ ಹರಿಕಥಾ ಸಂಕೀರ್ತನೆ, 6ಕ್ಕೆ ಭಕ್ತಿಗಾನ ಸುಧಾ, 7.30 ಕ್ಕೆ ದೇವಿಗೆ ವಿಶೇಷ ಪೂಜೆ, ಭವಾನಿಶಂಕರ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ನ. 19 ರಿಂದ 23ರ ವರೆಗೆ ವೇದಮೂತರ್ಿ ಪಾಲೆಚ್ಚಾರು ಬಾಲಕೃಷ್ಣ ಭಟ್ ರವರ ನೇತೃತ್ವದಲ್ಲಿ ಶ್ರೀಶತಚಂಡಿಕಾ ಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.


