ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಶಿವಳ್ಳಿ ಬ್ರಾಹ್ಮಣ ಸಬಾದ ಜಿಲ್ಲಾ ನೂತನ ಕಾಯರ್ಾಲಯ ಉದ್ಘಾಟನೆ
ಬದಿಯಡ್ಕ: ಮನುಷ್ಯನ ಸಾಂಘಿಕ ಯತ್ನಗಳಿಗೆ ಎಂದಿಗೂ ಯಶಸ್ಸು ಲಭಿಸುತ್ತದೆ. ಒಗ್ಗಟ್ಟಾಗಿ ಸಂಘಟಿತಗೊಂಡು ಸಮಾಜದ ಎಲ್ಲರನ್ನೂ ಅಭಿವೃದ್ದಿಯ ಪಥದತ್ತ ಕರೆದೊಯ್ಯುವಲ್ಲಿ ಸಮುದಾಯ ಸಂಘಟನೆಗಳ ಪಾತ್ರ ಹಿರಿದು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಸಮಿತಿಗೆ ಬದಿಯಡ್ಕದ ನೂತನವಾಗಿ ಆರಂಭಿಸಲಾದ ಕಾಯರ್ಾಲಯವನ್ನು ಭಾನುವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಸಮಾಜದಲ್ಲೂ ಬಡವರು, ಸಂಕಷ್ಟದಲ್ಲಿರುವವರನ್ನು ಮುಖ್ಯ ವಾಹಿನಿಗೆ ಕರೆದೊಯ್ಯುವಲ್ಲಿ ಸಾಮಾಜಿಕ ಸಂಘಟನೆಗಳು ಕಾರ್ಯನಿರ್ವಹಿಸಿದಾಗ ಸಂಘಟನೆಯ ಲಕ್ಷ್ಯ ಪ್ರಾಪ್ತಿಯಾಗುತ್ತದೆ. ಇಂದಿನ ಯುವ ಸಮೂಹ ಸಾಂಪ್ರದಾಯಿಕ ಸಂಸ್ಕಾರ, ಜೀವನ ಕ್ರಮಗಳ ಪರಿಚಯವಿಲ್ಲದೆ ಗುರುತಪ್ಪಿದ ಹಾದಿಯಲ್ಲಿ ಸಂಚರಿಸುವಾಗ ಅವರನ್ನು ಮತ್ತೆ ಮೂಲ ಸಂಸ್ಕೃತಿ, ಸಂಪ್ರದಾಯಗಳಿಗೆ ಕರೆತರುವ ಕೆಲಸಗಳು ಜವಾಬ್ದಾರಿಯುತವಾಗಿ ಆಗಬೇಕು ಎಂದು ಶ್ರೀಗಳು ತಿಳಿಸಿದರು.
ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ಷಾಧಿಕಾರಿ ಸೀತಾರಾಮ ಕುಂಜತ್ತಾಯ, ಅಖಿಲ ಕೇರಳ ಶಿವಳ್ಳಿ ಬ್ರಾಹ್ಮಣ ಸಭಾದ ರಕ್ಷಾಧಿಕಾರಿ ರಾಂ ಪ್ರಸಾದ್ ಕಾಸರಗೋಡು, ಉಪಾಧ್ಯಕ್ಷ ಟಿ.ಕೆ.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ವಿಷ್ಣು ಭಟ್, ಕಾಸರಗೋಡು ವಲಯಾಧ್ಯಕ್ಷ ವೇಣುಗೋಪಾಲ ಕಲ್ಲೂರಾಯ, ಮಂಜೇಶ್ವರ ವಲಯ ಕಾರ್ಯದಶರ್ಿ ವೆಂಕಟೇಶ್ ಕಲ್ಯಾಣಿತ್ತಾಯ, ಮುಳ್ಳೇರಿಯಾ ವಲಯಾಧ್ಯಕ್ಷ ಪ್ರಕಾಶ್ ಪಾಂಗಣ್ಣಾಯ, ಜಿಲ್ಲಾ ಸಮಿತಿ ಖಜಾಂಜಿ ಶ್ರೀನಿವಾಸ್ ಕೇಕುಣ್ಣಾಯ, ಡಾ.ಶ್ರೀನಿಧಿ ಸರಳಾಯ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದಶರ್ಿ ಅರವಿಂದಕುಮಾರ್ ಅಲೆವೂರಾಯ ಸ್ವಾಗತಿಸಿ, ಶ್ರೀನಿವಾಸ ಅಮ್ಮಣ್ಣಾಯ ವಂದಿಸಿದರು. ಏತಡ್ಕ ವಲಯ ಅಧ್ಯಕ್ಷ ಸತೀಶ್ ಪುಣ್ಚಿತ್ತಾಯ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಗಳನ್ನು ಮೊದಲು ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಹಾಗು ಅವರ ಕುಟುಂಬದವರು ಸ್ವಾಗತಿಸಿ, ಪಾದಪೂಜೆ ನೆರವೇರಿಸಿದರು.
ಕಾಯರ್ಾಲಯದ ಉದ್ಘಾಟನಾ ಸಮಾರಂಭದ ಬಳಿಕಮ ಪೆರಡಾಲ ನವಜೀವನ ಫ್ರೌಢಶಾಲಾ ಪರಿಸರದಲ್ಲಿ ವಾಷರ್ಿಕ ಕ್ರೀಡಾ ಸಾಂಸ್ಕೃತಿಕ ಉತ್ಸವ ನಡೆಯಿತು.


