ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಪೂತರ್ಿ ಓದಿ- ಸಾಹಿತ್ಯ ಸಮ್ಮೇಳನ-ಶನಿವಾರದ ವಿವಿಧ ಗೋಷ್ಠಿ- `ಕನ್ನಡೀಕರಣ ಆಗದಿದ್ದರೆ ಕನರ್ಾಟಕ ಛಿದ್ರ'
ಮೈಸೂರು: ಕನರ್ಾಟಕ ಏಕೀಕರಣದ ಚಚರ್ೆಯ ಬದಲು ಕನ್ನಡೀಕರಣದ ಚಚರ್ೆ ನಡೆಸದೇ ಹೋದರೆ ಕನ್ನಡ ನಾಡು ಛಿದ್ರ ಛಿದ್ರಗೊಳ್ಳುವುದರಲ್ಲಿ ಅನುಮಾನ ಇಲ್ಲ ಎಂದು ಸಾಹಿತಿ ಮಲೆಯೂರು ಗುರುಸ್ವಾಮಿ ಎಚ್ಚರಿಸಿದರು.
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಾದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶುಕ್ರವಾರ ನಡೆದ `ಕನರ್ಾಟಕ ಏಕೀಕರಣ'
ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
`ಕನರ್ಾಟಕದ ಏಕೀಕರಣಕ್ಕೆ ದುಡಿದ ಪಾಟೀಲ ಪುಟ್ಟಪ್ಪ ಅವರಂತಹ ಮಹಾನ್ ವ್ಯಕ್ತಿಗಳು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಾರೆ ಎಂದರೆ ನಾವು ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕಿದೆ' ಎಂದು ಅಭಿಪ್ರಾಯಪಟ್ಟರು.
ಭೌಗೋಳಿಕ ಏಕೀಕರಣಕ್ಕಿಂತ ಕನ್ನಡದ ಏಕೀಕರಣವಾಗಬೇಕು. ಆದರೆ, ಇಂದು ಭೌಗೋಳಿಕ ಏಕೀಕರಣ ಕುರಿತೇ ಹೆಚ್ಚು ಚಚರ್ೆಯಾಗುತ್ತಿದೆ. ಕನ್ನಡೀಕರಣ ಕುರಿತು ಯಾರೊಬ್ಬರೂ ಚಿಂತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ವಿಚಾರ ಬಂದಾಗ ಉತ್ತರ ಕನರ್ಾಟಕದವರು ಸುಮ್ಮನಿರುತ್ತಾರೆ. ಮಹಾದಾಯಿ ವಿಚಾರಕ್ಕೆ ಕಾವೇರಿ ಭಾಗದ ಜನ ಪ್ರತಿಕ್ರಿಯಿಸುವುದಿಲ್ಲ. ಕಂಬಳದ ವಿಚಾರಕ್ಕೆ ಈ ಇಬ್ಬರೂ ಮೌನಿಯಾಗಿರುತ್ತಾರೆ. ಕನರ್ಾಟಕ ಈಗ ಪ್ರಾದೇಶಿಕ ದ್ವೀಪಗಳಾಗುವತ್ತ ಹೊರಟಿದೆ ಆಂಧ್ರಪ್ರದೇಶ ಭಾಷೆಯ ಭಾವಾನಾತ್ಮಕ ನೆಲೆಯಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಏಕೀಕರಣ ಸಾಧಿಸಿತು. ಅದೇ ರಾಜ್ಯ ಅಭಿವೃದ್ಧಿಯ ಕಾರಣಕ್ಕೆ ಒಡೆದು ಹೋಯಿತು. ಬೆಂಗಳೂರಿನ ಸೌಲಭ್ಯಗಳು ದೂರದ ಕಲಬುಗರ್ಿ ಹಾಗೂ ಬೀದರ್ಗೂ ದೊರೆತಾಗ ಮಾತ್ರ ಕನರ್ಾಟಕ ಉಳಿಯುತ್ತದೆ ಎಂದು ವಿಶ್ಲೇಷಿಸಿದರು.
`ಕಾವೇರಿಯಿಂದ ಮಾ ಗೋದಾವರಿ: ಒಂದು ಅವಲೋಕನ' ಕುರಿತು ಮಾತನಾಡಿದ, `ಜಗನ್ನಾಥ ಹೆಬ್ಬಾಳೆ 1,500ಕ್ಕೂ ಹೆಚ್ಚು ಕನ್ನಡ ಶಾಸನಗಳು ಮಹಾರಾಷ್ಟ್ರದಲ್ಲಿ ದೊರಕಿವೆ. ಗೋದಾವರಿವರೆಗಿನ ಪ್ರದೇಶದಲ್ಲಿನ ಗುಡಿ, ಮಠಗಳಿಗೆ ಕನ್ನಡದ ಹೆಸರುಗಳು ಇವೆ. ಪಂಡರಾಪುರದ ವಿಠಲದೇವ ಕನ್ನಡ ನಾಡಿನ ದೇವರು ಎಂದು ಸ್ವತಃ ಮಹಾರಾಷ್ಟ್ರದವರೇ ಹೇಳುತ್ತಾರೆ' ಎಂದು ವಿವರಿಸಿದರು.
ಗೋಷ್ಠಿಗೆ ಪ್ರತಿಕ್ರಿಯೆ ನೀಡಿದ ಸ.ರಾ. ಸುಳಕೂಡೆ, `ದಕ್ಷಿಣ ಕನರ್ಾಟಕದ 13 ತಾಲ್ಲೂಕುಗಳು ಹಿಂದುಳಿದಿದ್ದರೆ, ಉತ್ತರ ಕನರ್ಾಟಕದ 26 ತಾಲ್ಲೂಕುಗಳು ಹಿಂದುಳಿದಿವೆ. ಇಂದಿಗೂ ಕಲಬುಗರ್ಿಗೆ ವಗರ್ಾವಣೆ ಮಾಡುವುದು ಶಿಕ್ಷೆಯನ್ನಾಗಿ ಪರಿಗಣಿಸಲಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.
`ಕನ್ನಡ ಶಾಲೆಗಳು ಮುಚ್ಚುವುದು ಕನ್ನಡಿಗರ ಅವಿವೇಕತನದಿಂದ' ಎಂದು ನಾ.ನಾಗಚಂದ್ರ ಪ್ರತಿಕ್ರಿಯಿಸಿದರು. `ಗಡಿನಾಡು ಪ್ರದೇಶಗಳು: ಬಿಕ್ಕಟ್ಟುಗಳು' ಕುರಿತು ಮಾತನಾಡಿದ ಬಾಳಾಸಾಹೇಬ ಲೋಕಾಪುರ `ರಾಜ್ಯ ರಾಜಧಾನಿ ಮಧ್ಯಭಾಗದಲ್ಲಿರಬೇಕು. ಇದರಿಂದ ಉತ್ತರ ಕನರ್ಾಟಕದ ಭಾಗದವರಿಗೆ ಸಮಸ್ಯೆ ಹೆಚ್ಚಾಗುತ್ತಿದೆ' ಎಂದು ಹೇಳಿದರು. ಪ್ರಾದೇಶಿಕ ಅಸಮಾನತೆ ಸವಾಲು ಮತ್ತು ಪರಿಹಾರ ಕುರಿತು ಕೆ.ಎನ್.ಇಂಗಳಗಿ ಉಪನ್ಯಾಸ ನೀಡಿದರು.
ಬಣ್ಣಹಚ್ಚಿ ಕಾದು ಕೂತ ಚಿಣ್ಣರು
ಸಮಾನಾಂತರ ವೇದಿಕೆಯಾದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ಎಲ್ಲ ಗೋಷ್ಠಿಗಳು ತಡವಾಗಿ ಆರಂಭವಾದವು. ಇದರಿಂದ ಸಮಯದ ಕೊರತೆ ಉಪನ್ಯಾಸಕರನ್ನು ಕಾಡಿತು. ಒಬ್ಬರಿಗೆ 10 ನಿಮಿಷ ಅವಕಾಶ ನೀಡಲಾಗಿತ್ತು. ಅಧ್ಯಕ್ಷೀಯ ಭಾಷಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಾಹಿತಿ ಮಲೆಯೂರು ಗುರುಸ್ವಾಮಿ, `ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬಣ್ಣ ಹಚ್ಚಿ ಕೂತಿರುವ ಮಕ್ಕಳು ಚರ್ಮ ಬಿಗಿಯುತ್ತಿದೆ. ಹೊಟ್ಟೆ ಹಸಿಯುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, 5 ನಿಮಿಷದಲ್ಲಿ ಭಾಷಣ ಮುಗಿಸುವೆ' ಎಂದರು. ಉಳಿದೆಲ್ಲರ ಭಾಷಣವನ್ನು ಸಂಘಟಕರು ಚೀಟಿ ಕೊಡುವ ಮೂಲಕ ಮೊಟಕುಗೊಳಿಸಿದರು.
ಸುಳ್ಳನ್ನು ಸತ್ಯದ ಕ್ಯಾಪ್ಸೂಲ್ಗೆ ಹಾಕಿದ ಸಿದ್ದರಾಮಯ್ಯ
ಉತ್ತರ ಕನರ್ಾಟಕಕ್ಕೆ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಹೇಳಿಕೆ ಸುಳ್ಳನ್ನು ಸತ್ಯದ ಕ್ಯಾಪ್ಸೂಲ್ಗೆ ಹಾಕಿದಂತೆ ಆಗಿದೆ ಎಂದು ಅಪ್ಪಾರಾವ್ ಅಕ್ಕೋಣಿ ಹೇಳಿದರು. ಉತ್ತರ ಕನರ್ಾಟಕ ಆಗಬೇಕು ಎಂಬ ಕೂಗಿಗೆ ಅಭಿವೃದ್ಧಿ ವಿಚಾರ ಕಾರಣವೇ ಹೊರತು ಕನರ್ಾಟಕದಿಂದ, ಕನ್ನಡದಿಂದ ಬೇರೆಯಾಗಬೇಕು ಎಂಬುದಲ್ಲ ಎಂದು ತಿಳಿಸಿದರು.
`ಟಿಪ್ಪು ಚಚರ್ೆಗೆ ಬೇಕಿದೆ ಹೊಸ ನೋಟ'
ಮೈಸೂರು: ಟಿಪ್ಪು ಸುಲ್ತಾನ್ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಚಚರ್ೆಗಳು ಅವಾಸ್ತವ ಎಂದು ನಿರಾಕರಿಸುವ ಹಾಗಿಲ್ಲ. ಇಲ್ಲಿ ಧಾಮರ್ಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳು ಹೆಚ್ಚು ಮುಖ್ಯವಾಗುತ್ತವೆ ಎಂದು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೃಥ್ವಿದತ್ತ ಚಂದ್ರಶೋಭಿ ವ್ಯಾಖ್ಯಾನಿಸಿದರು.
ಸಾಹಿತ್ಯ ಸಮ್ಮೆಳನದ ಆರಂಭಿಕ ಗೋಷ್ಠಿ `ಆಧುನಿಕ ಕನರ್ಾಟಕ ನಿಮರ್ಾಣ: ಮೈಸೂರು ರಾಜರ ಕೊಡುಗೆ' ವಿಷಯದಲ್ಲಿ ಹೈದರಾಲಿ-ಟಿಪ್ಪು ಆಡಳಿತ ಕುರಿತು ಅವರು ಮಾತನಾಡಿದರು.
ಟಿಪ್ಪುವಿನ ಬಗ್ಗೆ ಮೌಢ್ಯದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚಚರ್ೆಗಳು ನಿಜವಲ್ಲ ಎಂದು ಹೇಳಲು ಸಾಧ್ಯವಾಗದಿದ್ದರೂ, ಅವುಗಳನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ಚಚರ್ಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.
18ನೇ ಶತಮಾನದಲ್ಲಿ ಎರಡು ಪಲ್ಲಟಗಳನ್ನು ನಾವು ಕಾಣುತ್ತೇವೆ. ದೇಶದಲ್ಲಿ ಅರಾಜಕತೆ ಉಂಟಾದುದರ ಜೊತೆಗೆ ಹೊಸ ರಾಜಕೀಯ ಶಕ್ತಿಗಳು ಹುಟ್ಟಿಕೊಂಡವು. ಎರಡನೆಯದು ಗ್ಲೋಬಲ್ ಟ್ರೇಡ್ ಶುರುವಾದದ್ದು. ಈ ಪಲ್ಲಟಗಳನ್ನು ಹೈದರಾಲಿ?ಟಿಪ್ಪು ಸಮರ್ಥವಾಗಿ ನಿಭಾಯಿಸಿದರು. ಅಣ್ಣನ ಸೈನ್ಯದ ಉತ್ತರಾಧಿಕಾರಿಯಾಗಿ ಬಂದ ಹೈದರಾಲಿ ನಾಲ್ಕೇ ವರ್ಷದಲ್ಲಿ ಸವರ್ಾಧಿಕಾರಿಯಾಗಿ ಬೆಳೆಯುತ್ತಾನೆ. ಮುಂದಿನ 40 ವರ್ಷದ ಆಡಳಿತದಲ್ಲಿ ಹೈದರ್ ಮತ್ತು ಟಿಪ್ಪು ಜಾಗತಿಕ ಮಟ್ಟದಲ್ಲಿ ಮೈಸೂರು ಗುರುತಿಸಿಕೊಳ್ಳುವಂತೆ ಮಾಡುತ್ತಾರೆ. ಅನಕ್ಷರಸ್ಥನಾಗಿದ್ದ ಹೈದರಾಲಿ ರಾಜತಾಂತ್ರಿಕ ವ್ಯವಹಾರಗಳನ್ನು ಸೂಕ್ಷ್ಮವಾಗಿ ಅರಿತಿದ್ದ ಎಂದರು.
18ನೇ ಶತಮಾನದ 2ನೇ ಭಾಗದಲ್ಲಿ ಬ್ರಿಟಿಷರನ್ನು ಕಾಡಿದ ಎರಡು ದೊಡ್ಡ ಅಪಾಯಗಳಲ್ಲಿ ಒಂದು ಹೈದರ್?ಟಿಪ್ಪು, ಇನ್ನೊಂದು ಅಮೆರಿಕದ ಸ್ವಾತಂತ್ರ್ಯ ಹೋರಾಟಗಾರರು. ಜಾಗತಿಕ ಮಟ್ಟದಲ್ಲಿ ಇಷ್ಟು ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆದ ಈ ಇಬ್ಬರೂ ನವಕನರ್ಾಟಕ ನಿಮರ್ಾಣದಲ್ಲಿ ಪ್ರಮುಖರಾಗಿ ನಿಲ್ಲುತ್ತಾರೆ ಎಂದರು.
1,821 ರೂಪಾಯಿಯಲ್ಲಿ ಸಮ್ಮೇಳನ!
`1930ರಲ್ಲಿ ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಮೂರು ದಿನಗಳ ಕಾರ್ಯಕ್ರಮಕ್ಕೆ ? 1,821 ಖಚರ್ಾಗಿತ್ತು' ಎಂದು ಟಿ.ವಿ.ವೆಂಕಟಾಚಲಶಾಸ್ತ್ರಿ ಅಂದಿನ ಸಮ್ಮೆಳನದ ಖಚರ್ು? ವೆಚ್ಚಗಳ ಪಟ್ಟಿ ಮುಂದಿಟ್ಟಾಗ ಸಾರ್ವಜನಿಕರು ಕಣ್ಣರಳಿಸಿದರು.
ಸಭಾಂಗಣ ಸ್ಫೋಟಿಸುವುದಾಗಿ ಪತ್ರ
ಸಾಹಿತ್ಯ ಸಮ್ಮೇಳನಕ್ಕೆ ಬೆದರಿಕೆ
ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸಭಾಂಗಣವನ್ನು ಸ್ಫೋಟಿಸುವ ಬೆದರಿಕೆಯ ಅನಾಮಧೇಯ ಪತ್ರವೊಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದರ್ೇಶಕರ (ಡಿಡಿಪಿಐ) ಕಚೇರಿಗೆ ಬಂದಿದೆ.
`ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತ್ಯ ಹಾಗೂ ಮುಸ್ಲಿಂ ಶಿಕ್ಷಕರನ್ನು ಕಡೆಗಣಿಸಲಾಗಿದೆ. ಇದು ತೀರಾ ಖಂಡನೀಯ' ಎಂದು ಪತ್ರದಲ್ಲಿ ನಮೂದಿಸಲಾಗಿದೆ. ಪತ್ರವನ್ನು ಕಡೆಗಣಿಸದಂತೆ ಎಚ್ಚರಿಕೆಯ ಕರೆ ಕೂಡ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂರು ದಿನಗಳ ಹಿಂದೆ ಬಂದಿರುವ ಬೆದರಿಕೆ ಪತ್ರವನ್ನು ಡಿಡಿಪಿಐ ಮಂಜುಳಾ ಅವರು ಪೊಲೀಸ್ ಕಮಿಷನರ್ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಅವರಿಗೆ ರವಾನಿಸಿದ್ದಾರೆ. ಈ ಸಂಬಂಧ ಮೈದಾನಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಸವರ್ಾಧಿಕಾರದ ರಾಷ್ಟ್ರೀಯ ಶಿಕ್ಷಣ ಬೇಡ: ಪ್ರೊ.ಸಿದ್ದರಾಮಯ್ಯ ಸಲಹೆ
ಮೈಸೂರು: ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಾಗ ಸವರ್ಾಧಿಕಾರದ ಛಾಯೆ ಬಾರದ ಹಾಗೆ ನೋಡಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಲಹೆ ನೀಡಿದರು.
`ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವ ನೆಪದಲ್ಲಿ ದೇಶದ ಚರಿತ್ರೆಯನ್ನು ಮಾತ್ರ ಪಠ್ಯದಲ್ಲಿ ಸೇರಿಸಿ ರಾಜ್ಯದ ಚರಿತ್ರೆಯನ್ನು ಗೌಣ ಮಾಡಬಾರದು. ಇದರಿಂದ ರಾಜ್ಯದ ಅಸ್ತಿತ್ವವೇ ನಾಶವಾಗುತ್ತದೆ` ಎಂದವರು `ಶಿಕ್ಷಣ? ವರ್ತಮಾನದ ಸವಾಲುಗಳು' ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
`ಸಾಹಿತಿ ದೇವನೂರ ಮಹದೇವ ಸೇರಿದಂತೆ ಅನೇಕರು ಶಿಕ್ಷಣದ ರಾಷ್ಟ್ರೀಕರಣವನ್ನು ಬೆಂಬಲಿಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ. ಆದರೆ, ಇದರಲ್ಲಿ ರಾಜ್ಯಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು. ರಾಷ್ಟ್ರೀಕರಣಗೊಂಡ ಕೂಡಲೇ ರಾಷ್ಟ್ರೀಯತೆಯನ್ನು ಹೇರುವ ಪ್ರಯತ್ನ ನಡೆಯುತ್ತದೆ. ಪಠ್ಯರಚನೆ ಆಗುವಾಗ ಪ್ರಾಥಮಿಕ ಶಿಕ್ಷಣದಿಂದ, ಉನ್ನತ ಶಿಕ್ಷಣದವರೆಗೂ ಜಾಗರೂಕವಾಗಿರಬೇಕು' ಎಂದು ಹೇಳಿದರು.
`ಶಿಕ್ಷಣ ಈಗ ಉಳ್ಳವರು ಹಾಗೂ ಬಡವರ ಮಧ್ಯೆ ಕವಲಾಗಿ ಒಡೆದಿದೆ. ಬಡವರನ್ನು ಪ್ರತಿನಿಧಿಸುವ ಸಕರ್ಾರಿ ಶಾಲೆಗಳಲ್ಲಿ ಮಕ್ಕಳು ಕಲಿಯುವಂತೆ ಇಲ್ಲ. ದುರಸ್ತಿ ಆಗಬೇಕಾದ, ಒಡೆದು ಹೊಸದಾಗಿ ಕಟ್ಟಬೇಕಾದ ಶಾಲೆಗಳು ಸಾವಿರಾರು ಸಂಖ್ಯೆಯಲ್ಲಿವೆ. ನಮ್ಮ ಮಕ್ಕಳು ಕುಳಿತು ಕಲಿಯುವ ಶಾಲೆಗಳು ಸುರಕ್ಷಿತವಾಗಿರಬೇಕು; ಮೂಲಸೌಕರ್ಯ ನೀಡಬೇಕು. ಇದನ್ನು ಸಕರ್ಾರ ಜವಾಬ್ದಾರಿಯಿಂದ ಮಾಡಿದಾಗ ಖಾಸಗಿ ಶಾಲೆಗಳು ಮೆರೆಯುವುದು ನಿಲ್ಲುತ್ತದೆ' ಎಂದರು.
ಈ ಕೆಲಸವಾಗದೇ ಇದ್ದಲ್ಲಿ, 200 ವರ್ಷಗಳ ಹಿಂದೆ ಶಿಕ್ಷಣವು ಕೇವಲ ಒಂದು ವರ್ಗಕ್ಕೆ ಮಾತ್ರ ಮೀಸಲಿದ್ದಂತೆ, ಈಗ ಉಳ್ಳವರಿಗೆ ಮಾತ್ರ ಶಿಕ್ಷಣ ಮೀಸಲಾಗಿಬಿಡುತ್ತದೆ. ಪ್ರಜಾಪ್ರಭುತ್ವವನ್ನು ಗೌರವಿಸುವ ಮನಸುಗಳು ಶಿಕ್ಷಣ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಖಾಸಗಿ ವಿಶ್ವವಿದ್ಯಾಲಯಗಳು ಕನ್ನಡದ ಅನ್ನ ತಿಂದಿರುವ ಕನಿಷ್ಠ ಕೃತಜ್ಞತೆಯನ್ನೂ ಹೊಂದಿಲ್ಲ. ಕನ್ನಡ ಕಲಿಕೆಯನ್ನು ನಾಲ್ಕು ಸೆಮಿಸ್ಟರ್ಗಳಿಂದ ಎರಡಕ್ಕೆ ಇಳಿಸಿವೆ. ಕನ್ನಡ ಉಪನ್ಯಾಸಕರಿಗೆ ವೇತನ ತಾರತಮ್ಯ ಮಾಡುತ್ತಿವೆ ಎಂದು ಖಾರವಾಗಿ ಹೇಳಿದರು.
ಭಾಷಾ ಕಾಯ್ದೆ ಜಾರಿಯಾಗಿಲ್ಲ: ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡದ ಕಡ್ಡಾಯ ಕಲಿಕೆ ಇರಬೇಕು ಎಂಬ ಭಾಷಾ ಕಾಯ್ದೆ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಕೇಂದ್ರ ಸಕರ್ಾರವು ಹಿಂದಿಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಒತ್ತಾಯ ಹೇರುತ್ತಿರುವುದು ಇದಕ್ಕೆ ಕಾರಣ, ಎಂದು ಶಿಕ್ಷಣ ಇಲಾಖೆ ಹೇಳಿ ಜಾರಿಕೊಳ್ಳುತ್ತಿದೆ. ಹಿಂದಿಯ ಹೇರಿಕೆ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂಬುದನ್ನು ಗಮನಿಸಬೇಕು ಎಂದು ಎಚ್ಚರಿಸಿದರು


