HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಇಂದು ಹಿಂದೂ ಸಮಾಜೋತ್ಸವ: ಲಕ್ಷ ಜನ ನಿರೀಕ್ಷೆ ಉಡುಪಿ: "ಧರ್ಮ ಸಂಸದ್'ನ ಭಾಗವಾಗಿ ನ. 26ರಂದು ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಜರಗಲಿರುವ ಹಿಂದೂ ಸಮಾಜೋತ್ಸವಕ್ಕೆ ಸಿದ್ಧತೆಗಳು ಕೊನೆಯ ಹಂತದಲ್ಲಿವೆ. ಈ ಹಿಂದೆ ಹಲವು ಸಮಾಜೋ?ತ್ಸವಗಳು ಉಡುಪಿಯಲ್ಲಿ ನಡೆದಿದ್ದರೂ ಈ ಬಾರಿ ಧರ್ಮ?ಸಂಸದ್ ಜತೆಯಲ್ಲಿ ನಡೆಯುತ್ತಿರುವುದು ವಿಶೇಷ. ಇದರಲ್ಲಿ ವಿಶ್ವ ಹಿಂದೂ ಪರಿಷತ್ನ ಪ್ರಮುಖರು ಪಾಲ್ಗೊಳ್ಳಲಿದ್ದು ಲಕ್ಷಕ್ಕೂ ಮೀರಿದ ಹಿಂದೂ ಬಾಂಧವರ ಭಾಗಿ ನಿರೀಕ್ಷೆ ಸಂಘಟಕರದ್ದು. ಮೈದಾನದಲ್ಲಿ 75,000 ಮಂದಿ ಕುಳಿತು?ಕೊಳ್ಳುವಷ್ಟು ಸ್ಥಳಾವಕಾಶವಿದೆ. ಮುಖ್ಯ ವೇದಿಕೆಯಲ್ಲಿ 200 ಮಂದಿ ಪ್ರಮುಖರು, ಪಕ್ಕದ ವೇದಿಕೆ?ಯಲ್ಲಿ 600ರಷ್ಟು ಸಂತರು ಉಪಸ್ಥಿತ?ರಿರು?ತ್ತಾರೆ. ನ. 26ರ ಅಪರಾಹ್ನ 2.30ಕ್ಕೆ ಉಡುಪಿ ಜೋಡು?ಕಟ್ಟೆ?ಯಿಂದ ಸಂತರ ನೇತೃತ್ವದಲ್ಲಿ ಶೋಭಾ ಯಾತ್ರೆ ಆರಂಭಗೊಳ್ಳಲಿದೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಕಾರ್ಯ?ಕರ್ತರು ಜೋಡು?ಕಟ್ಟೆಯಲ್ಲಿ ಸಮಾವೇಶ?ಗೊಂಡು ಅಲ್ಲಿಂದ ಎಂಜಿಎಂ ಮೈದಾನಕ್ಕೆ ತೆರಳಲಿದ್ದಾರೆ. ಶೋಭಾಯಾತ್ರೆಯಲ್ಲಿ ವಿಹಿಂಪ ಪ್ರಮುಖರು, ವಿವಿಧ ಭಜನಾ ತಂಡಗಳ ಸುಮಾರು 2,000?ದಷ್ಟು ಸದಸ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಭೋಜನ ವ್ಯವಸ್ಥೆ ಮಂಗಳೂರು ಕಡೆಯಿಂದ ಬರುವವರಿಗೆ ರಾ.ಹೆದ್ದಾರಿ 66ರ ಉದ್ಯಾವರ ಜೈ ಹಿಂದ್ ಕಾಂಪ್ಲೆಕ್ಸ್ ಬಳಿ, ಕುಂದಾಪುರ ಕಡೆಯಿಂದ ಆಗಮಿಸುವವರಿಗೆ ಸಂತೆಕಟ್ಟೆ ಎಲ್ವಿಟಿ ದೇವಸ್ಥಾನದ ಬಳಿ, ಕಾರ್ಕಳ ಕಡೆಯಿಂದ ಆಗಮಿಸು?ವವರಿಗೆ ಹಿರಿಯಡಕ ದೇವಾಡಿಗರ ಸಭಾ?ಭವನದ ಬಳಿ ಊಟದ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಧರ್ಮಸಂಸದ್ ಪಕ್ಕದ ಭೋಜನಶಾಲೆ ಮತ್ತು ಶ್ರೀಕೃಷ್ಣ ಮಠದ ರಾಜಾಂಗಣದ ಬಳಿಯೂ ಮಧ್ಯಾಹ್ನ ಶ್ರೀಕೃಷ್ಣ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ. ಯೋಗಿ ನಾಳೆಯೇ ಆಗಮನ ಉತ್ತರಪ್ರದೇಶದ ಮುಖ್ಯಮಂತ್ರಿ, ಗೋರಕ್ಷ ಪೀಠದ ಅಧ್ಯಕ್ಷಯೋಗಿ ಆದಿತ್ಯನಾಥ ಅವರು ನ. 26ರಂದು ಸಂಜೆ ಆಗಮಿಸಿ ದಿಕ್ಸೂಚಿ ಭಾಷಣ ಮಾಡುವ ನಿರೀಕ್ಷೆ ಇದೆ. ವಿಹಿಂಪ ಅಂತಾರಾಷ್ಟ್ರೀಯ ಕಾಯರ್ಾಧ್ಯಕ್ಷ ಡಾ| ಪ್ರವೀಣ್ ತೊಗಾಡಿಯಾ ಉಡುಪಿಯಲ್ಲಿಯೇ ತಂಗಿರುವುದರಿಂದ ಅವರೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries