ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಆರ್ಎಸ್ಎಸ್ ಮತ್ತು ಸಾಧು ಸಂತರು 'ಮನುಸ್ಮೃತಿ' ಬೆಂಬಲಿಸುವುದಿಲ್ಲ: ಪೇಜಾವರ ಸ್ವಾಮೀಜಿ
ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್), ವಿಎಚ್ಪಿ ಸೇರಿದಂತೆ ಬಹುತೇಕ ಸಾಧು ಸಂತರು 'ಮನುಸ್ಮೃತಿ'ಯನ್ನು ಬೆಂಬಲಿಸುವುದಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಶುಕ್ರವಾರ ತಿಳಿಸಿದರು.
ಇಲ್ಲಿ ನಡೆದ ಧರ್ಮ ಸಂಸತ್ನಲ್ಲಿ ಮಾತನಾಡಿದ ಅವರು ಕೆಲ ಜಾತ್ಯತೀತವಾದಿಗಳು ಆರ್ಎಸ್ಎಸ್, ವಿಎಚ್ಪಿ ಮತ್ತು ಹಿಂದೂ ಧರ್ಮದ ಸ್ವಾಮೀಜಿಗಳು ಮನುಸ್ಮೃತಿಯನ್ನು ಬೆಂಬಲಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಹಿಂದೂ ಧರ್ಮದ ಬಹುತೇಕ ಸಾಧು ಸಂತರು ಮನುಸ್ಮೃತಿಯನ್ನು ಬೆಂಬಲಿಸುವುದಿಲ್ಲ ಎಂದರು.
ಜಾತಿ ವ್ಯವಸ್ಥೆಗೂ ಮತ್ತು ಅಸ್ಪ್ರಶ್ಯತೆಗೆ ಯಾವುದೇ ಸಂಬಂಧವಿಲ್ಲ, ದಲಿತರನ್ನು ಮಾತ್ರ ಅಸ್ಪೃಶ್ಯರು ಎಂದು ಕರೆಯಲಾಗುತ್ತದೆ ಇದು ತಪ್ಪು ಎಂದು ಪ್ರತಿಪಾದಿಸಿದರು. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಇಂತಹ ಭೇದಗಳಿಲ್ಲ ಎಂದು ಪೇಜಾವರ ಸ್ವಾಮೀಜಿ ಪ್ರತಿಪಾದಿಸಿದರು.


