HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಪಂಕ್ತಿಭೇದ, ಅಸ್ಪೃಶ್ಯತೆ ಆಚರಣೆ ವಿರುದ್ಧ ಧ್ವನಿ ಎತ್ತಿದ ಧರ್ಮ ಸಂಸತ್ ಉಡುಪಿ: ಸರಕಾರದ ಹಿಡಿತದಲ್ಲಿರುವ ದೇವಸ್ಥಾನಗಳು ಹಿಂದೂಗಳ ಕೈಗೆ ಬರಬೇಕು. ಸಂವಿಧಾನದ ಆಶಯದಂತೆ ಅಸ್ಪೃಶ್ಯತೆ ನಿಮರ್ೂಲನವಾಗಬೇಕು. ಹೀಗೆ ಹಲವು ಸಂತರ ವಾದ ಮಂಡನೆ ಧರ್ಮ ಸಂಸತ್ ನಲ್ಲಿ ಇಂದು ನಡೆಯಿತು. ಉಡುಪಿಯ ರಾಯಲ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ನ ಎರಡನೇ ದಿನ ಸಂತರಿಂದ ಬಂದಿರುವ ಆಗ್ರಹಗಳಿವು. ಶನಿವಾರ ನಡೆದ ಸಂತರ ಸಮಾಗಮದಲ್ಲಿ ಚಚರ್ಾ ಗೋಷ್ಠಿಗಳು ನಡೆದವು, ಇದರಲ್ಲಿ ಸಂತರ ವಾದ ಮಂಡನೆಯ ಪ್ರಮುಖ ಅಂಶಗಳು ಇಂತಿವೆ. * ಮಂದಿರಕ್ಕೆ ಎಲ್ಲರಿಗೂ ಪ್ರವೇಶವಿರಬೇಕು * ಪಂಕ್ತಿಬೇಧವಿಲ್ಲದೇ ಭೋಜನ ವ್ಯವಸ್ಥೆ ಆಗಬೇಕು * ಅಸ್ಪೃಶ್ಯತೆಯ ಆಚರಣೆ ಹಿಂದೂಗಳಲ್ಲಿ ಇರಬಾರದು ಆರ್.ಎಸ್.ಎಸ್ ಮತ್ತು ಸಾಧುಗಳು ಮನುಸ್ಮೃತಿಯನ್ನು ಒಪ್ಪುವುದಿಲ್ಲ:ಪೇಜಾವರ ಶ್ರೀ ಧರ್ಮ ಸಂಸತ್ ನ ದಿಕ್ಸೂಚಿ ಭಾಷಣ ಮಾಡಿದ ವಿಹಿಂಪದ ಅಂತರಾಷ್ಟ್ರೀಯ ಕಾಯರ್ಾಧ್ಯಕ್ಷ ಪ್ರವೀಣ್ ಬಾಯ್ ತೊಗಾಡಿಯಾ, ವೇದದಲ್ಲಿ ಅಸ್ಪೃಶ್ಯತೆಗೆ ಅವಕಾಶ ಇಲ್ಲ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇರಬಾರದು. ಎಲ್ಲರಿಗೂ ಮಂದಿರಕ್ಕೆ ಮುಕ್ತ ಪ್ರವೇಶ ನೀಡಬೇಕು. ಅಸ್ಪೃಶ್ಯತೆ ಮುಕ್ತ ಭಾರತ ನಿಮರ್ಾಣ ನಮ್ಮ ಗುರಿ," ಎಂದು ಹೇಳಿದರು. "ಸರಕಾರದ ವಶದಲ್ಲಿರುವ ದೇವಸ್ಥಾನಗಳು ಹಿಂದೂಗಳ ಕೈಗೆ ಬರಬೇಕು," ಎಂದು ಧರ್ಮ ಸಂಸತ್ ನ ಚಚರ್ಾಗೋಷ್ಟಿಯಲ್ಲಿ ಸಂತರು ಆಗ್ರಹ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅನೇಕ ಸಂತರು ಕೂಡಾ ದೇವಸ್ಥಾನದ ಸರಕಾರೀಕರಣದ ಬಗ್ಗೆ ಚಚರ್ೆ ನಡೆಸಿದರು. ಗೋಷ್ಠಿಯಲ್ಲಿ ನಡೆದ ಪ್ರಮುಖ ಚಚರ್ೆಯ ಅಂಶಗಳು ಹೀಗಿವೆ, * ದೇವಸ್ಥಾನಗಳನ್ನು ಸರಕಾರೀಕರಣ ಮಾಡುವುದಕ್ಕೆ ವಿರೋಧ * ದೇವಸ್ಥಾನಗಳು ಅದೇ ಧರ್ಮದ ವಶದಲ್ಲಿರಬೇಕು * ದೇವಾಲಯಗಳ ಆಡಳಿತಕ್ಕೆ ಸ್ವಾಯತ್ತ ಮಂಡಳಿ ರಚನೆ ಮಾಡಬೇಕು. * ಮಸೀದಿ-ಚಚರ್್ ಗಳ ಮೇಲಿನ ಸರಕಾರದ ಹಸ್ತಕ್ಷೇಪ ಯಾಕಿಲ್ಲ? * ದೇವಸ್ಥಾನದ ಹಣ ಇತರ ಸರಕಾರದ ಖಜಾನೆ ಹೋಗುವುದಕ್ಕೆ ವಿರೋಧ ಗೋಷ್ಠಿಯಲ್ಲಿ ಸರಕಾರದ ದೇವಸ್ಥಾನದ ಮೇಲಿನ ಹಸ್ತಕ್ಷೇಪದ ಬಗೆಗೆ ಸಾಕಷ್ಟು ಚಚರ್ೆಗಳು ನಡೆದವು.ಅಯೋಧ್ಯೆ ದಿಗಂಬರ ಮಠದ ಸಂತ ಸುರೇಶ್ ದಾಸ್ ಜೀ, ಸ್ವರ್ಣವಲ್ಲಿ ಗಂಗಾಧೇಶ್ವರ ಸ್ವಾಮೀಜಿ, ವಿಹಿಂಪದ ಅಂತರಾಷ್ಟ್ರೀಯ ಕಾಯರ್ಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಸೇರಿದಂತೆ ಅನೇಕ ಸಂತರು ದೇವಸ್ಥಾನದ ಸರಕಾರೀಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರ ಜತೆಗೆ ನಿನ್ನೆಯಂತೆ ಅಯೋಧ್ಯೆಯಲ್ಲಿ ಮಂದಿರ ನಿಮರ್ಾಣ, ಧರ್ಮವನ್ನು ಬಿಟ್ಟು ಹೋದವರನ್ನು ಮತ್ತೆ ಮಾತೃ ಸಂಸ್ಥೆಗೆ ಕರೆಸಿಕೊಳ್ಳುವ ಬಗ್ಗೆ, ಜಾತಿ ವ್ಯವಸ್ಥೆ ಬಗ್ಗೆಯೂ ಸಂಸತ್ ನಲ್ಲಿ ಚಚರ್ೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries