ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಮಂಜೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಂತ ಚಿಕಿತ್ಸಾಲಯಕ್ಕೆ ಚಾಲನೆ
ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂ. ನ ಅಧೀನದಲ್ಲಿ ಕಾಯರ್ಾಚರಿಸುತ್ತಿರುವ ಮಂಜೇಶ್ವರ ಸಮುದಾಯ ಆರೋಗ್ಯಕೇಂದ್ರ ದಲ್ಲಿ ನೂತನವಾಗಿ ಆರಂಭಿಸಲಾದ ದಂತ ಚಿಕಿತ್ಸಾಲಯಕ್ಕೆ ರಾಜ್ಯ ಕಂದಾಯ ಸಚಿವ ಇ ಚಂದ್ರ ಶೇಖರನ್ ಭಾನುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸರಕಾರಿ ವೈದ್ಯಕೀಯ ಚಿಕಿತ್ಸೆಗೆ ಪ್ರೋತ್ಸಾಹ ನೀಡಿ ಜನಸಾಮಾನ್ಯರಿಗೆ ಉನ್ನತ ಚಿಕಿತ್ಸಾ ಸೌಕರ್ಯ ಒದಗಿಸುವಲ್ಲಿ ಮುತುವಜರ್ಿ ವಹಿಸಿಸುತ್ತಿದೆ. ಈ ನಿಟ್ಟಿನಲ್ಲಿ ಸರಕಾರದ ವಿಶೇಷ ಅನುದಾನದಲ್ಲಿ ಇದೀಗ ಮಂಜೇಶ್ವರದಲ್ಲಿ ದಂತ ಚಿಕಿತ್ಸಾಲಯಕ್ಕೆ ಚಾಲನೆ ನೀಡಲಾಗಿದೆ.ಇದರ ಗರಿಷ್ಠ ಪ್ರಯೋಜನ ಜನಸಾಮಾನ್ಯರಿಗೆ ಲಭಿಸುವುದು ಎಂದು ತಿಳಿಸಿದರು.
ವೈದ್ಯರ ಹಾಗೂ ಪ್ರಯೋಗಾಲಯದ ಕೊರತೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೊಂದು ಪರಿಹಾರವನ್ನು ಕಂಡು ಕೊಳ್ಳಲು ತನ್ನಿಂದಾಗುವ ಪ್ರಯತ್ನವನ್ನು ಮಾಡುವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದರು.
ಈ ಸಂದರ್ಭ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಜನಪ್ರತಿನಿಧಿಗಳು, ವೈದ್ಯರುಗಳು ಸಹಿತ ಗಣ್ಯರು ಪಾಲ್ಗೊಂಡರು.


