ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಅಕ್ರಮ ಮದ್ಯ ನಿಯಂತ್ರಣದಲ್ಲಿ ನವಜೀವನ ಸಮಿತಿ ಕಾರ್ಯನಿರ್ವಹಿಸಬೇಕು-ಹರ್ಷ ರೈ ಪುತ್ರಕಳ
ಬದಿಯಡ್ಕ: ಮದ್ಯದಂತಹ ಸಾಮಾಜಿಕ ಪಿಡುಗುಗಳಿಗೆ ದಾಸರಾದವರನ್ನು ಮತ್ತೆ ಮುಖ್ಯವಾಹಿನಿಗೆ ಕರೆತಂದು ಹೊಸ ಮನುಷ್ಯರನ್ನಾಗಿ ರೂಪಿಸುವ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಯತ್ನಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ತಾನು ಬದಲಾಗುವುದರ ಜೊತೆಗೆ ಇತರರನ್ನೂ ಬದಲಾಯಿಸಲು ಪ್ರೇರೇಪಿಸುವ ನವಜೀವನ ಸಮಿತಿಗಳ ತಳಮಟ್ಟದ ಪ್ರಯತ್ನಗಳು ಸ್ತುತ್ಯರ್ಹವಾಗಿದ್ದು, ನವಜೀವನ ಸಮಿತಿಗಳು ಅಕ್ರಮ, ಕಳಪೆ ಗುಣಮಟ್ಟದ ಕಳ್ಳಬಟ್ಟಿಗಳನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರವಹಿಸಬೇಕು ಎಂದು ತುಳು ನಾಟಕ-ಚಲನಚಿತ್ರ ನಿದರ್ೇಶಕ ಹರ್ಷ ರೈ ಪುತ್ರಕಳ ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರಡಾಲ ಶ್ರೀಉದನೇಶ್ವರ ಕ್ಷೇತ್ರ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿರುವ 1155ನೇ ಮದ್ಯವರ್ಜನ ಶಿಬಿರದಲ್ಲಿ ಗುರುವಾರ ವಿಶೆಷ ಆಹ್ವಾನಿತರಾಗಿ ಭಾಗವಹಿಸಿ, ಶಿಬಿರಾಥರ್ಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟ ಅನುಭವ, ಸಾಮಥ್ರ್ಯಗಳಿರುತ್ತದೆ. ಆದರೆ ವಿವಿಧ ಕಾರಣಗಳಿಂದ ಬದುಕಿನ ಹಾದಿತಪ್ಪಿ ದುಶ್ಚಟಗಳ ದಾಸರಾಗಿ ಏನೂ ಅಲ್ಲದೆ ಬದುಕನ್ನು ಕೊನೆಗೊಳಿಸುವ ದುರ್ಬಲತೆ ಮನುಕುಲಕ್ಕಂಟಿರುವ ಶಾಪವೆಂದು ವಿಶ್ಲೇಶಿಸಿದ ಅವರು ಬದಲಾಗಲು ಬಂದೊದಗುವ ಅವಕಾಶವನ್ನು ಸಮರ್ಥವಾಗಿ ಬಳಸಬೇಕು ಎಂದು ತಿಳಿಸಿದರು. ಇಂದು ಕುಡಿತದ ಚಟ ಕಳಪೆ ಗುಣಮಟ್ಟದ ಅಕ್ರಮ ಮದ್ಯದಿಂದ ಮತ್ತಷ್ಟು ಹತಾಶೆಗೊಳಪಡಿಸುತ್ತಿದ್ದು, ಅವುಗಳ ನಿವಾರಣೆಗೆ ಸ್ಥಳೀಯ ಮಟ್ಟದಲ್ಲಿ ನಿಯಂತ್ರಣ ಅಗತ್ಯವಿದ್ದು, ನವಜೀವನ ಸಮಿತಿಗಳು ಈ ನಿಟ್ಟಿನಲ್ಲಿ ಕ್ರಿಯಾತ್ಮಕ ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದರು.
ಶಿಬಿರಾದಿಕಾರಿ ದೇವೀಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


