HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಂಸ್ಕೃತಿ ಸಂವರ್ಧನೆಗೆ ಯಕ್ಷಗಾನ ಪ್ರೇರಕ ಶಕ್ತಿ : ಎಡನೀರು ಶ್ರೀ ಕಾಸರಗೋಡು: ಇಂದಿನ ಜಾಗತಿಕ ಸವಾಲುಗಳ ಮಧ್ಯೆ ಸಂಸ್ಕೃತಿ ಸಂವರ್ಧನೆಗೆ ಪ್ರೇರಕ ಶಕ್ತಿಯಾಗಿ ಗಂಡು ಮೆಟ್ಟಿನ ಕಲೆ ಯಕ್ಷಗಾನ ಉಳಿಯಬೇಕು. ಯಕ್ಷಗಾನದ ಮೂಲಕ ಭಾಷೆ, ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಪರಂಪರೆಯ ಸೊಗಡನ್ನು ಯುವ ತಲೆಮಾರಿಗೆ ಹಸ್ತಾಂತರಿಸಬೇಕು. ಕಾಸರಗೋಡಿನಲ್ಲಿ ಯಕ್ಷೋತ್ಸವ ನಡೆಸುವಂತಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಹೇಳಿದರು. ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಪಿಲಿಕುಂಜೆಯಲ್ಲಿರುವ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಹಾಲ್ನಲ್ಲಿ `ವೀರಮಣಿ ಕಾಳಗ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ ಮಾತನಾಡಿದರು. ಯಕ್ಷಗಾನ ಕನ್ನಡದ ಧೀಮಂತ ಕಲೆ. ಗಂಡುಮೆಟ್ಟಿನ ಈ ಕಲೆ ಬೆಳೆಯಬೇಕು ಎಂಬುದು ನಮ್ಮೆಲ್ಲರ ಆಶಯ. ಇಂತಹ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಕಲಾವಿದರಿಗೆ ನಿರಂತರವಾದ ಪ್ರೋತ್ಸಾಹ ಅಗತ್ಯ. ಕಲಾದಿವರು ತಾವು ಬೆಳೆದಂತೆ ಇತರರನ್ನು ಪ್ರೋತ್ಸಾಹಿಸುವ ಮನಸ್ಸು ಮಾಡಬೇಕು. ಪರಮಶ್ರೇಷ್ಠವಾದ ಕಲೆಯ ಒಳ್ಳೆಯ ಪ್ರದರ್ಶನದಿಂದ ಯಕ್ಷಗಾನ ಉತ್ತಮವಾಗಿ ಮೂಡಿ ಬರಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಆಶೀರ್ವಚನ ನೀಡುತ್ತಾ ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಯಕ್ಷಗಾನ ಕಲಾವಿದ, ಸಂಘಟಕ ಸಂಕಬೈಲು ಸತೀಶ ಅಡಪ ಅವರು ಮಾತನಾಡಿ ರಂಗಚಿನ್ನಾರಿ ಮೂಲಕ ಪ್ರತೀ ವರ್ಷವೂ ಯಕ್ಷೋತ್ಸವ ನಡೆಯುವಂತಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ನಾರಾಯಣ ಮಾಟೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಎಡನೀರು ಶ್ರೀಗಳು ಸಮ್ಮಾನಿಸಿ ಗೌರವಿಸಿದರು. ರಂಗಚಿನ್ನಾರಿ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ನಾರಾಯಣ ಮಾಟೆ ಅವರನ್ನು ಪರಿಚಯಿಸಿದರು. ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಅವರ ನೇತೃತ್ವದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ `ವೀರ ಮಣಿ' ಯಕ್ಷಗಾನ ತಾಳಮದ್ಧಳೆ ಜರಗಿತು. ರಂಗಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ವೇದಿಕೆಯಲ್ಲಿ ರಂಗಚಿನ್ನಾರಿ ನಿದರ್ೇಶಕರಾದ ಕೆ.ಸತ್ಯನಾರಾಯಣ, ಮನೋಹರ ಶೆಟ್ಟಿ ಮೊದಲಾದವರಿದ್ದರು. * ಮುಂದಿನ ವರ್ಷ ಯಕ್ಷೋತ್ಸವ : ರಂಗಚಿನ್ನಾರಿಯ ನೇತೃತ್ವದಲ್ಲಿ ಮುಂದಿನ ವರ್ಷ ಮೂರು ದಿನಗಳ ಯಕ್ಷೋತ್ಸವ ನಡೆಸಲಾಗುವುದು. ಅದರ ಪೂರ್ವಭಾವಿ ಎಂಬಂತೆ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ. ಯಕ್ಷೋತ್ಸವಕ್ಕೆ ಎಲ್ಲರ ಸಹಕಾರ, ಬೆಂಬಲ ಅಗತ್ಯವಿದೆ. - ಕಾಸರಗೋಡು ಚಿನ್ನಾ, ನಿದರ್ೇಶಕ, ರಂಗಚಿನ್ನಾರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries