ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಕೂಡ್ಲು ಮೇಳದ ವಾಷರ್ಿಕ ತಿರುಗಾಟ ಆರಂಭ ನ.25 ರಿಂದ
ಕುಂಬಳೆ: ತೆಂಕುತಿಟ್ಟಿನ ಅತ್ಯಂತ ಪ್ರಾಚೀನ ಮೇಳವೆಂಬ ನೆಗಳ್ತೆಯ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ- ಕೂಡ್ಲು ಮೇಳದ ವಾಷರ್ಿಕ ತಿರುಗಾಟ ನವೆಂಬರ್ 25 ರಂದು ಆರಂಭಗೊಳ್ಳಲಿದೆ.
ಅಂದು ರಾತ್ರಿ 8.30 ಕ್ಕೆ ಶ್ರೀ ಕ್ಷೇತ್ರದ ವಠಾರದಲ್ಲಿ ಪೂಜೆಯ ನಂತರ ಬಯಲಾಟ ನಡೆಯಲಿದೆ. ಮೇಳದ ಪ್ರಬುದ್ಧ ಕಲಾವಿದರ ಜೊತೆ ಅತಿಥಿ ಕಲಾವಿದರೂ ಭಾಗವಹಿಸುವರು. `ಪಾಂಡವಾಶ್ವಮೇಧ' ಎಂಬ ಕಥಾಭಾಗದ ಪ್ರದರ್ಶನ ನಡೆಯಲಿದೆ.
ಪ್ರಧಾನವಾಗಿ ಹರಕೆ ಬಯಲಾಟಗಳಿಗೆ ಕೂಡ್ಲು ಮೇಳ ಪ್ರಸಿದ್ಧವಾಗಿದೆ. ಸಂತಾನ ಪ್ರಾಪ್ತಿಗಾಗಿ ಆಸ್ತಿಕರು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಬಯಲಾಟ ಹರಕೆ ಹೇಳಿಕೊಳ್ಳುವುದು ಪರಂಪರಾಗತವಾಗಿ ಬಂದ ರೂಢಿ.
ಶ್ರೀ ದೇವರಿಗೆ ಅತ್ಯಂತ ಪ್ರೀತಿಯ ಸೇವೆ ಎನಿಸಿಕೊಂಡ ಯಕ್ಷಗಾನ ಪ್ರದರ್ಶನಕ್ಕೆ ಈ ಮೇಳದ ಮೂಲಕ ತನ್ನದೇ ಮಹತ್ವಿಕೆ ಇದೆ. ಶತಮಾನಗಳ ಹಿಂದೆಯೇ ಆರಂಭಗೊಂಡ ಕೂಡ್ಲು ಮೇಳ ಯಕ್ಷಗಾನ ವಲಯದ ಬಹುತೇಕ ಕಲಾವಿದರಿಗೆ ಆಶ್ರಯ ನೀಡಿದ ಕಲಾತಾಣ.
ಜೋಡಾಟ ಎಂಬ ಆರೋಗ್ಯಪೂರ್ಣ ಯಕ್ಷಗಾನ ಸ್ಪಧರ್ೆಯ ಮೂಲಕ ತನ್ನ ವೈಭವವನ್ನು ಮೆರೆಯುತ್ತಿದ್ದ ಕೂಡ್ಲು ಮೇಳದ ವಿಜ್ರಂಭಣೆಯನ್ನು ಇಂದಿಗೂ ನೆನಪಿಸಿಕೊಳ್ಳುವವರಿದ್ದಾರೆ. ಕಾಲಕ್ರಮೇಣ ಕ್ಷೀಣಿಸುತ್ತಾ ಬಂದ ಈ ಮೇಳ ಕೊಂಚ ವರ್ಷ ಸ್ಥಗಿತಗೊಂಡಿತ್ತು. ನಂತರ 2001 ನೇ ಇಸವಿಯಲ್ಲಿ ಮತ್ತೆ ತಿರುಗಾಟ ಆರಂಭಿಸಿದ ಕೂಡ್ಲು ಮೇಳ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಇಂದಿನ ಅವಧಿಯ ವರೆಗೆ ಕೂಡ್ಲು ಮೇಳದ ಹಿಂದಿನ ಛಾಪನ್ನು ಉಳಿಸಿಕೊಂಡು ಬಂದಿರುವ ಮೇಳದಲ್ಲಿ ಪ್ರಸಿದ್ಧ ಕಲಾವಿದರು ಹಿಮ್ಮೇಳ - ಮುಮ್ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಅನೇಕ ಹರಕೆ ಜೋಡಾಟಗಳಾದ ಅತ್ಯಂತ ಶ್ರದ್ಧಾಭಕ್ತಿಗಳಿಂದ ನಡೆದು ಇತಿಹಾಸದ ಪುನರಾವರ್ತನೆಯಾಗಿದೆ.
ಇಷ್ಟು ಪ್ರಾಧಾನ್ಯ ಹೊಂದಿರುವ ಕೂಡ್ಲು ಮೇಳದ ಬಯಲಾಟ ಆಡಿಸಲು ಬಯಸುವ ಕಲಾಸಕ್ತರು ಮೇಳದ ಸಂಚಾಲಕರನ್ನು ದೂರವಾಣಿ ನಂಬ್ರ 9744803074 ಮೂಲಕ ಸಂಪಕರ್ಿಸಬಹುದು.



