HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಾಂಸ್ಕೃತಿಕ ಕಲೆಗಳು ನಾವು ನಾವಾಗಿರಲು ನೆರವಾಗುತ್ತದೆ-ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ. ರಂಗಚಿನ್ನಾರಿಯ ಭಾವಗಂಧ ಕಾರ್ಯಕ್ರಮ ಉದ್ಘಾಟನೆ ಕಾಸರಗೋಡು: ಭಾರತದ ಮೂಲ ಪರಂಪರೆಯ ಸಂಸ್ಕೃತಿಯ ಸೊಗಡು ಉಳಿಯುವಲ್ಲಿ ಕಲೆ ಸಾಂಸ್ಕೃತಿಕ ಚಟುವಟಿಕೆಗಳು ಉಳಿಯಬೇಕು. ಮುಂದುವರಿಯುತ್ತಿರುವ ಇಂದಿನ ಜಾಗತಿಕ ಸವಾಲುಗಳ ಮಧ್ಯೆ ಸಂಸ್ಕೃತಿ ಸಂವರ್ಧನೆಗೆ ಪ್ರೇರಕ ಶಕ್ತಿಯಾಗಿ ಹಮ್ಮಿಕೊಳ್ಳುವ ಸಾಮಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೈಜ ಸ್ವರೂಪದಲ್ಲಿ ಅಗತ್ಯ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡಿನ ಸಾಮಸ್ಕೃತಿಕ-ಸಾಮಾಜಿಕ ಸಂಘಟನೆಯಾದ ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ಶನಿವಾರ ಸಂಜೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಆಯೋಜಿಸಲಾದ "ಭಾವಗಂಧ" ಭಕ್ತಿ-ಭಾವ-ಜಾನಪದ ಗೀತೆಗಳ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲೆಡೆ ಯಾಂತ್ರೀಕೃತ ಜೀವನ ಶೈಲಿ, ವ್ಯಾಪಾರೀಕರಣದ ಮನೋಭಾವದ ಮಿತಿಮೀರಿದ ಜೀವಜಗತ್ತು ಮೂಲ ಪರಂಪರೆಯನ್ನು ಮರೆಯದಂತೆ ಭಾವ ಜಗತ್ತನ್ನು ಪ್ರವೇಶಿಸಲು ಸಾಮಸ್ಕೃತಿಕ ಕಾರ್ಯಕ್ರಮಗಳಿಗೆ ಮರುಜೀವ ನೀಡುವ ಅಗತ್ಯವಿದ್ದು, ಇದು ಭಾರತೀಯತೆಯೊಂದಿಗೆ ನಾವು ನಾವಾಗಿರಲು ನೆರವಾಗುತ್ತದೆ ಎಂದು ಅವರು ತಿಳಿಸಿದರು. ನಾವು ಬೆಳೆದು ಬಂದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಧೀಶಕ್ತಿ, ಅಂತರಾಳದ ತುಡಿತ ಕೆಲವರಲ್ಲಿ ಮಾತ್ರ ಇಂದು ಕಾರ್ಯರೂಪಕ್ಕಿಳಿಯುತ್ತದೆ ಎಮದು ತಿಳಿಸಿದ ಅವರು, ಗಡಿನಾಡು ಕಾಸರಗೋಡಿನಲ್ಲಿ ರಂಗಚಿನ್ನಾರಿಯ ಅಹನರ್ಿಶಿ ದುಡಿಮೆ ಸ್ತುತ್ಯರ್ಹ ಎಂದು ಅವರು ತಿಳಿಸಿದರು. ಹಿರಿಯ ಗಾಯಕ, ಕನರ್ಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನ್ಯಾಯವಾದಿ ಥೋಮಸ್ ಡಿ"ಸೋಜಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಸಮಾರಂಭದಲ್ಲಿ ಖ್ಯಾತ ಸಂಗೀತ ನಿದರ್ೇಶಕ ಎ.ಕೆ.ವಿಜಯ್ ರವರಿಗೆ ಹುಟ್ಟೂರ ಗೌರವಾರ್ಪಣೆಯನ್ನು ಈ ಸಂದರ್ಭ ಗಣ್ಯರ ಸಮಕ್ಷಮ ಮಾಡಲಾಯಿತು. ರಂಗಚಿನ್ನಾರಿಯ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ನಿದರ್ೇಶಕ ಕಾಸರಗೋಡು ಚಿನ್ನಾ ಕಾರ್ಯಕ್ರಮ ನಿರೂಪಿಸಿ, ಸನ್ಮಾನಿರ ಅಭಿನಂದನಾ ಭಾಷಣಗೈದು ವಂದಿಸಿದರು. ಕೆ.ಸತ್ಯನಾರಾಯಣ, ಗಾಯಕ ಪುತ್ತೂರು ನರಸಿಂಹ ನಾಯಕ್ ಉಪಸ್ಥಿತರಿದ್ದರು. ಬಳಿಕ ಪ್ರಸಿದ್ದ ಗಾಯಕರಾದ ವೈ.ಕೆ.ಮುದ್ದುಕೃಷ್ಣ, ಪುತ್ತೂರು ನರಸಿಂಹ ನಾಯಕ್, ಪಂಚಮ್ ಹಳೇಬಂಡಿ, ಸುರೇಖಾ, ಕಿಶೋರ್ ಪೆರ್ಲ ರಿಂದ ಭಾವಗಂಧ ಗಾಯನ ಕಾರ್ಯಕ್ರಮ ನಡೆಯಿತು. ಪಕ್ಕವಾದ್ಯಗಳಲ್ಲಿ ಅಶೋಕ್ ಮೂಡಬಿದ್ರೆ(ಪ್ಲೂಟ್), ಅಭಿಜಿತ್ ಶೆಣೈ(ತಬಲಾ), ರಾಜೇಶ್ ಮಂಗಳೂರು(ರಿದಂ ಪ್ಯಾಡ್), ಪುರುಷೋತ್ತಮ ಕೊಪ್ಪಲ್(ಓರ್ಗನ್)ನಲ್ಲಿ ಸಹಕರಿಸಿದರು. ನೂರಾರು ಸಂಖ್ಯೆಯ ಸಾಂಸ್ಕೃತಿಕ ಪ್ರೇಮಿಗಳು ಸಾಕ್ಷಿಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries