HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಭಾಷಾ ಸವಾಲುಗಳಿಗೆ ನಿರಂತರ ಚಟುವಟಿಕೆಗಳ ಮೂಲಕ ಉಳಿಸುವ ಯತ್ನ ನಡೆಯುತ್ತಿದೆ-ಡಾ.ವಸುಂಧರಾ ಭೂಪತಿ ಬದಿಯಡ್ಕ : ಗಡಿನಾಡು ಕಾಸರಗೊಡಿನ ಕನ್ನಡದಲ್ಲಿ ಕಲಿತ ವಿದ್ಯಾಥರ್ಿಗಳಿಗೆ ಎಲ್ಲಾ ವಿಷಯದಲ್ಲೂ ಮೀಸಲಾತಿ ಸಿಗಬೇಕು, ಇಲ್ಲಿನ ಕನ್ನಡ ಮಕ್ಕಳು ಅವಕಾಶಗಳಿಂದ ವಂಚಿತರಾಗಬಾರದು ಎಂದು ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದರು. ಕಾಸರಗೋಡು ಗಡಿನಾಡ ಸಾಹಿತ್ಯ - ಸಾಂಸ್ಕೃತಿಕ ಅಕಾಡೆಮಿ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಬದಿಯಡ್ಕ ಸರಕಾರಿ ಫ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಸಾಹಿತ್ಯ - ಸಾಂಸ್ಕೃತಿಕ ಪಯಣದ ನಾಲ್ಕನೇ ಪಯಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ, ಸಂಸ್ಕ್ರತಿಗೆ ಸಂಬಂಧಿಸಿ ಕನರ್ಾಟಕದಾದ್ಯಂತ ಇಂದು ವ್ಯಾಪಕ ಪ್ರಮಾಣದ ಸವಾಲುಗಳು ಎದುರಾಗಿವೆ. ಆದರೆ ಕನ್ನಡ ಕಟ್ಟುವ ಕಾಯಕ ನಿರತ ಸಂಸ್ಥೆ, ಅಕಾಡೆಮಿ, ಪರಿಷತ್ತುಗಳ ನಿರಂತರ ಪ್ರೋತ್ಸಾಹಗಳಿಂದ ಸಮಸ್ಯೆಗಳನ್ನು ನಿವಾರಿಸುವ ಯತ್ನಗಳು ನಡೆಯುತ್ತಿದ್ದು, ಜ್ಞಾನದ ವಿಷಯದಲ್ಲಿ ಇತರರಿಗೆ ಸ್ಪಧರ್ೆ ನೀಡುವಷ್ಟು ಉತ್ಕಟ ಪ್ರೇಮ ಇರುವಲ್ಲಿವರೆಗೆ ಅಧಃಪತನದ ಭೀತಿ ಬೇಡ ಎಂದು ಅವರು ತಿಳಿಸಿದರು. ಕನರ್ಾಟ ಕನ್ನಡ ಪುಸ್ತಕ ಪ್ರಾಧಿಕಾರವು ವಿವಿಧ ಕಾರ್ಯಯೋಜನೆಗಳ ಮೂಲಕ ಸಾಹಿತ್ಯ ಸಾಂಸ್ಕೃತಿಕತೆಯನ್ನು ಬೆಳೆಸುವ ಚಟುವಟಿಕೆ ನಿರ್ವಹಿಸುತ್ತಿದ್ದು, ಪ್ರಾಧಿಕಾರ "ಅಚ್ಚುಮೆಚ್ಚಿನ ನನ್ನ ಪುಸ್ತಕ" ಎಂಬ ವಿನೂತನ ಯೋಜನೆಯನ್ನು ಶೀಘ್ರ ಜಾರಿಗೊಳಿಸಲಿದೆ ಎಮದು ತಿಳಿಸಿದ ಅವರು ಸಾಹಿತ್ಯ ಚಚರ್ೆ, ಸಂವಾದಗಳಂತಹ ಕಾರ್ಯಕ್ರಮಗಳ ಮೂಲಕ ಅದು ಕಾರ್ಯನಿರ್ವಹಿಸಲಿದ್ದು, ಕಾಸರಗೋಡಿನ ಕನ್ನಡ ವಿದ್ಯಾಥರ್ಿಗಳಿಗೂ ಅವಕಾಶ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಶ್ರೀನಾಥ್ ಕಾಸರಗೋಡು ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ನಾವು ಪ್ರೋತ್ಸಾಹವನ್ನು ನೀಡಬೇಕಾಗಿದೆ. ಕನ್ನಡವನ್ನು ಶ್ರದ್ಧೆಯಿಂದ ಓದಲು ಅನುಕೂಲತೆಗಳನ್ನು ಮಾಡಿಕೊಟ್ಟು, ಸಾಹಿತ್ಯದ ಬಗ್ಗೆ ಅಭಿಮಾನವನ್ನು ಹೊಂದಬೇಕು. ಕಾಸರಗೋಡಿನ ಎಲ್ಲಾ ಕನ್ನಡ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಿಸಲು ಬೇಕಾದಂತಹ ಯೋಜನೆಗಳನ್ನು ರೂಪಿಸಲಾಗುವುದು ಎಂದರು. ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್.ರೈ ಹಾಗು ಬದಿಯಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೊಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬದಿಯಡ್ಕ ಗ್ರಾ.ಪಂ. ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಸದಸ್ಯೆ ಶಾಂತ, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಸುಬ್ಬಯ್ಯ ಕಟ್ಟೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ, ಮುಖ್ಯೋಪಾಧ್ಯಾಯ ರಾಜಗೋಪಾಲ.ಕೆ, ಕವಯಿತ್ರಿ, ಶಿಕ್ಷಕಿ ಜೋತ್ಸ್ನಾ ಎಂ. ಕಡೆಂದೇಲು, ಪತ್ರಕರ್ತ ಪುರುಷೋತ್ತಮ ಭಟ್.ಕೆ, ಮುಖ್ಯೋಪಾಧ್ಯಾಯ ರಾಜಗೋಪಾಲ,ಸುನಿತ್ ಮಾಸ್ತರ್ ಕಾಟುಕುಕ್ಕೆ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸಮಾರಂಭದಲ್ಲಿ ಬಾಲಪ್ರತಿಭೆಗಳಾದ ಸಿಂಧೂರ ಕುಂಜಾರು, ಸ್ವಸ್ತಿಕ್ ಶರ್ಮ, ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ, ಚಲನಚಿತ್ರ ಉಪನಿದರ್ೇಶಕ ಕೃಷ್ಣ ಕುಮಾರ್, ಪಕ್ಷಿಪ್ರೇಮಿ ರಾಜು ಕಿದೂರುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕವಯಿತ್ರಿ, ಲೇಖಕಿ ಅಕ್ಷತಾ ರಾಜ್ ಪೆರ್ಲ ಸಂಪನ್ಮೂಲ ವ್ಯಕ್ತಿಯಾಗಿ "ಬರಹ ಬದುಕು ಹಾಗೂ ನಾವು" ವಿಷಯದಲ್ಲಿ ಮಾತನಾಡಿದರು. ಸಂಘಟನೆಯ ಪ್ರಧಾನ ಕಾರ್ಯದಶರ್ಿ ಅಖೀಲೇಶ್ ನಗುಮುಗಂ ಸ್ವಾಗತಿಸಿದರು. ವಿದ್ಯಾ ಗಣೇಶ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries