ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
1155ನೇ ಮದ್ಯವರ್ಜನ ಶಿಬಿರ ಸಮಾರೋಪ
ಬದಿಯಡ್ಕ: ತಮ್ಮ ಕುಟುಂಬಕ್ಕೆ ಸುಖ,ಶಾಂತಿ, ನೆಮ್ಮದಿಯನ್ನು ನೀಡಲಾರದ ಎಷ್ಟೇ ದೊಡ್ಡ ಹುದ್ದೆಯ ವ್ಯಕ್ತಿಗಳಾದರೂ ಅವರ ಜೀವನ ನಿಷ್ಪಲವಾದುದು.ಮನುಷ್ಯರು ಮನುಷ್ಯರನ್ನು ಪರಸ್ಪರ ಪ್ರೀತಿಸುವುದನ್ನು ಕಲಿಯದಿದ್ದರೆ ಅವನು ಮಾನವ ಎನಿಸಲಾರ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಪೆರಡಾಲ ಶ್ರೀಉದನೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 1155ನೇ ಮದ್ಯವರ್ಜನ ಶಿಬಿರದ ಸೋಮವಾರ ನಡೆದ ಸಮಾರೋಪ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಇಂದು ಬೀದಿಬೀದಿಗಳಿಗೆ, ಮನೆಗಳಿಗೆ ಅತ್ಯಧಿಕ ಪ್ರಭೆಯ ಹೈಮಾಸ್ಟ್ ದೀಪಗಳನ್ನು ಅಲವಡಿಸಲು ಉತ್ಸುಕತೆ ತೊರಿಸುತ್ತೇವೆ. ಆದರೆ ಅಂತರಂಗದ ಅಂಧಕಾರವನ್ನು, ಮನಸ್ಸಿನೊಳಗಿನ ಕತ್ತಲೆಯನ್ನು ತೊಡೆದುಹಾಕುವಲ್ಲಿ ಪ್ರಯತ್ನಿಸದಿರುವುದು ದುದರ್ೈವಕರವೆಂದು ತಿಳಿಸಿದ ಅವರು, ಮನುಷ್ಯ ಜೀವನದಲ್ಲಿ ಕೌಟುಂಬಿಕ ನೆಮ್ಮದಿ ಪ್ರಾಮುಖ್ಯವಾದುದಾಗಿದ್ದು, ಇವನ್ನು ಕಡೆಗಣಿಸುವುದು ಬದುಕಿಗೆ ನಾವೆಸಗುವ ಮಹಾ ವಂಚನೆಯೆಂದು ತಿಳಿಸಿದರು. ಕಳೆದ ಭೂತಕಾಲದ ಕನವರಿಕೆಯಿಂದ ಹೊರಬಂದು ಭವಿಷ್ಯದ ಸಮೃದ್ದತೆಯ ಜೀವನ ಸಾಕಾರಕ್ಕೆ ವರ್ತಮಾನವನ್ನು ಸಮರ್ಪಕವಾಗಿ ಬಳಸಿ ಹೊಸತನಕ್ಕೆ ನಾಂದಿಹಾಡಬೇಕೆಂದು ನಿದರ್ೇಶನ ನೀಡಿದರು.
ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಡಿವೈಎಸ್ಪಿ ಸುಕುಮಾರ್ ಮಾತನಾಡಿ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳಿಗೆಲ್ಲಿ ಪ್ರಧಾನ ಕಾರಣವಾಗಿರುವ ಮದ್ಯ ಸಹಿತ ಇತರ ಅಮಲು ಪದಾರ್ಥಗಳನ್ನು ಮೂಲೋತ್ಫಾಟನೆಗೈಯ್ಯಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಕಾರ್ಯಚಟುವಟಿಕೆಗಳು ಪ್ರಧಾನ ಪಾತ್ರವಹಿಸುತ್ತಿದ್ದು,ದೃಢ ಮನಸ್ಸಿನ ನಿಧರ್ಾರಗಳು ಬದಲಾವಣೆಗೆ ಕಾರಣವಾಗುತ್ತದೆ ಎದು ಅಭಿಪ್ರಾಯ ವ್ಯಕ್ತಪಡಿಸಿದರು.
ಉದ್ಯಮಿ, ಧಾಮರ್ಿಕ ಮುಂದಾಳು ವಸಂತ ಪೈ ಬದಿಯಡ್ಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಗಳೂರು ವಲಯ ಮೇಲ್ವಿಚಾರಕ ಉಮರಬ್ಬ, ಪೆರಡಾಲ ಶ್ರೀಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು,ಯಕ್ಷಗಾನ ಭಾಗವತ ನಾರಾಯಣ ಮಾಟೆ, ಬದಿಯಡ್ಕ ಗ್ರಾ.ಪಂ. ಮಾಜಿ ಅದ್ಯಕ್ಷ ಮಾಹಿನ್ ಕೇಳೋಟ್, ನಿರಂಜನ ರೈ ಪೆರಡಾಲ ಉಪಸ್ಥಿತರಿದ್ದು ಮಾತನಾಡಿದರು.
ಶಿಬಿರದ ಸಮಾರೋಪದ ಅಂಗವಾಗಿ ಮದ್ಯ ವಿಮುಕ್ತ ಶಿಬಿರಾಥರ್ಿಗಳು ಪ್ರತಿಜ್ಞೆ ಸ್ವೀಕರಿಸಿ ತಾವು ಮದ್ಯ ಕುಡಿಯದಿರುವುದರ ಜೊತೆಗೆ ಇತರರನ್ನೂ ಈ ಪಿಡುಗಿನಿಂದ ಹೊರಬರಲು ಪ್ರೇರೇಪಿಸುವುದಾಗಿ ಮಾತು ನೀಡಿದರು. ಶಿಬಿರಾಥರ್ಿಗಳ ಪೈಕಿ ದಂಪತಿಗಳಾಗಿದ್ದವರು ವಿಧಿವಿಧಾನಗಳೊಂದಿಗೆ ಮರು ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದ್ದನ್ನು ಆಚರಿಸಿ ಸಂಭ್ರಮಿಸಿದರು. ಇತರರು ತಾಯಿಯ ಪಾದಕ್ಕೆರಗಿ ನಮಸ್ಕರಿಸಿದರು. ಎಮಟು ದಿನಗಳ ಶಿಬಿರದಲ್ಲಿ 81 ಮಂದಿ ಪಾಲ್ಗೊಂಡು ನವಜೀವನಕ್ಕೆ ಕಾಲಿರಿಸಿದರು.


