HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕ್ಷೇತ್ರಕ್ಕೆ ನುಗ್ಗಿ ಕಳವು ಯತ್ನ-ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಮಂಜೇಶ್ವರ: ಹೀಮದೂ ಧಾಮರ್ಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿ ಸಾಮಾಜಿಕ ಅಶಾಂತಿ ಸೃಷ್ಟಿಸುವವರು ಮತ್ತು ಅವರನ್ನು ಪ್ರೋತ್ಸಾಹಿಸುವವರನ್ನು ನಿಯಂತ್ರಿಸದಿದ್ದರೆ ಹಿಂದೂ ಸಂಘಟನೆಗಳ ಮೂಲಕ ಅಗತ್ಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಕಾಳಿಕಾಪರಮೇಶ್ವರಿ ಕ್ಷೇತ್ರಕ್ಕೆ ನುಗ್ಗಿ ಅಪವಿತ್ರಗೊಳಿಸಿ, ಕಳವಿಗೆ ಯತ್ನಿಸಿರುವವರನ್ನು ಕೂಡಲೇ ಬಂಧಿಸಲು ಪೋಲೀಸರು ಅಸಮರ್ಥರಾದರೆ ಹಿಂದೂ ಸಂಘಟನೆಗಳನ್ನು ಒಂದುಗೂಡಿಸಿ ವಿವಿಧ ಇಲಾಖೆಗಳಿಗೆ ಮನವಿ ನೀಡಿ ಬಳಿಕ ಹೋರಾಟ ನಡೆಸಲಾಗುವುದು ಎಮದು ಬಿಜೆಪಿ ಮಂಜೇಶ್ವರ ಮಂಡಲ ಕಾಯ್ದಶರ್ಿ ಮುರಳೀಧರ ಯಾದವ್ ನಾಯ್ಕಾಪು ಎಚ್ಚರಿಕೆ ನೀಡಿದರು. ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರಿ ಕ್ಷೇತ್ರದೊಳಗೆ ಅಕ್ರಮ ಪ್ರವೇಶ ನಡೆಸಿ ಅಪವಿತ್ರಗೊಳಿಸಿ, ಕಳವಿಗೆತ್ನಿಸಿದ ಘಟನೆ ಖಂಡಿಸಿ ಭಾನುವಾರ ಸಂಜೆ ಹೊಸಂಗಡಿಯಲ್ಲಿ ವಿವಿಧ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಬಟನೆ ಉದ್ಘಾಟಿಸಿ ಅವರು ಮಾತನಡಿದರು. ವಿಹಿಂಪ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ ಅಧ್ಯಕ್ಷತೆ ವಹಿಸಿದ್ದರು. ಸ್ವಯಂಸೇವಕ ಸಂಘದ ಸಂಘ ಚಾಲಕ ದಿನೇಶ್ ಮಡಪ್ಪುರ, ಜಿಲ್ಲಾ ಸಹಕಾರ್ಯವಾಹ್ ಲೋಕೇಶ್ ಜೋಡುಕಲ್ಲು, ಕಾಳಿಕಾಪರಮೇಶ್ವರಿ ಕ್ಷೇತ್ರದ ಅಧ್ಯಕ್ಷ ಪೋಳ್ಯ ಉಮೇಶ್ ಆಚಾರ್ಯ, ಕ್ಷೇತ್ರಾಡಳಿತ ಮೊಕ್ತೇಸರ ವೆಂಕಟರಮಣ ಆಚಾರ್ಯ ಮುಳಿಗದ್ದೆ, ಬತ್ತೇರಿ ಪದ್ಮನಾಭ ಆಚಾರ್ಯ, ಅಶೋಕ ಆಚಾರ್ಯ ಉದ್ಯಾವರ, ಕಮಲಾಕ್ಷ ಆಚಾರ್ಯ ಮುಳಿಗದ್ದೆ, ಭಾಸ್ಕರ ಆಚಾರ್ಯ ಪ್ರತಾಪನಗರ, ಯದುನಂದನ ಆಚಾರ್ಯ ಕಡಂಬಾರ್, ಉಪೇಂದ್ರ ಆಚಾರ್ಯ ಹೊಸಮನೆ, ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು, ಪರಮೇಶ್ವರ ಆಚಾರ್ಯ ನೀಚರ್ಾಲು, ಬಂಬ್ರಾಣ ಯಜ್ಞೇಶ್ ಆಚಾರ್ಯ, ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯದಶರ್ಿ ವಾಮನ ಆಚಾರ್ಯ ಬೋವಿಕ್ಕಾನ, ಹರಿಶ್ಚಂದ್ರ ಮಂಜೇಶ್ವರ, ಪದ್ಮನಾಭ ಕಡಪ್ಪುರ,ಸುರೇಶ್ ಶೆಟ್ಟಿ ಪರಂಕಿಲ, ಉಳುವಾನ ಶಂಕರನಾರಾಯಣ ಭಟ್, ಭಾಸ್ಕರ ಬಿ.ಎಂ ಮಾತನಾಡಿದರು. ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದಶರ್ಿ ಆದರ್ಶ ಬಿ.ಎಂ ಸ್ವಾಗತಿಸಿ, ನ್ಯಾಯವಾದಿ ಗಮಗಾಧರ ಕೊಮಡೆವೂರು ವಮದಿಸಿದರು. ಶ್ರೀಕಾಳಹಸ್ತೇಂದ್ರ ಸ್ವಾಮೀಜಿ ಹಾಗು ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಶ್ರೀಗಳು ಕಾಳಿಕಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries