ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ದೇವಸ್ಥಾನ ಅಪವಿತ್ರ, ಕಳವು ಪ್ರಕರಣ ಕೃತ್ಯ
ಸಮಗ್ರ ತನಿಖೆಗೆ ಹಿಂದು ಐಕ್ಯವೇದಿಕೆ ಆಗ್ರಹ
ಮಂಜೇಶ್ವರ: ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಡೆದ ಅಪವಿತ್ರ ಕೃತ್ಯ, ಕಳವು ಪ್ರಕರಣಗಳ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕೆಂದು ಹಿಂದು ಐಕ್ಯವೇದಿಕೆ ಮಂಜೇಶ್ವರ ತಾಲೂಕು ಸಮಿತಿಯು ಒತ್ತಾಯಿಸಿದೆ.
ಕುಂಬಳೆ ಕಣಿಪುರ ಕ್ಷೇತ್ರದಲ್ಲಿ ಕಳವು ನಡೆಸಿದ ಆರೋಪಿಗಳ ಕನಿಷ್ಠ ಸುಳಿವನ್ನು ಪತ್ತೆಹಚ್ಚಲೂ ಇದುವರೆಗೆ ಪೊಲೀಸರಿಂದ ಸಾಧ್ಯವಾಗಿಲ್ಲ. ಇದೇ ರೀತಿಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಕಳವು ನಡೆದಿದ್ದರೂ ಹೆಚ್ಚಿನ ಕಡೆಗಳಲ್ಲಿನ ಕಳವು ಕೃತ್ಯದ ಹಿಂದಿನ ಸಂಚನ್ನು ಒಡೆಯಲು ಕಾನೂನು ಪಾಲಕರಿಂದ ಇದುವರೆಗೆ ಸಾಧ್ಯವಾಗಿಲ್ಲ. ವರ್ತಮಾನ ಕಾಲದಲ್ಲಿ ಜೀವನ ಸಾಗಿಸುವುದಕ್ಕಾಗಿ ಕಳವು ನಡೆಸಬೇಕಾದ ಅನಿವಾರ್ಯತೆ ಇಲ್ಲ. ಇವತ್ತು ಕೈ ತುಂಬಾ ವೇತನ ಇಲ್ಲಿ ದೊರಕುತ್ತದೆ. ಆದ್ದರಿಂದಲೇ ಅನ್ಯರಾಜ್ಯಗಳ ಕಾಮರ್ಿಕರು ಗುಳೇ ಎದ್ದು ಕೇರಳಕ್ಕೆ ಆಗಮಿಸಲು ಪ್ರಧಾನ ಕಾರಣ. ಹಾಗಿರುವಾಗ ಈ ರೀತಿಯಲ್ಲಿ ಕೇವಲ ಬಹುಸಂಖ್ಯಾತ ಹಿಂದು ಕ್ಷೇತ್ರಗಳನ್ನು ಕೇಂದ್ರೀಕರಿಸಿ ಕಳವು, ಕಳವಿಗೆ ವಿಫಲಯತ್ನ, ಅಪವಿತ್ರಗೊಳಿಸುವುದೆಲ್ಲಾ ಮಾಡುತ್ತಿದ್ದಾರೆ ಎಂದಿದ್ದರೆ ಇದರ ಹಿಂದೆ ಬಹುದೊಡ್ಡ ಜಾಲವೇ ಅಡಗಿದೆ ಎಂಬುವುದರಲ್ಲಿ ಯಾವುದೇ ಶಂಕೆಯಿಲ್ಲ. ಆದ್ದರಿಂದ ಕಾಸರಗೋಡು ಜಿಲ್ಲೆಯಲ್ಲಿ ಕ್ಷೇತ್ರಗಳಲ್ಲಿ ನಡೆದ ಕಳವು ಪ್ರಕರಣಗಳ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕು ಮತ್ತು ಇದರ ಹಿಂದೆ ಇರುವ ಬಾಹ್ಯ ಕೈವಾಡವನ್ನು ಪತ್ತೆಹಚ್ಚಬೇಕು ಎಂದು ಐಕ್ಯವೇದಿಕೆ ಒತ್ತಾಯಿಸಿದೆ.
ಮಂಜೇಶ್ವರದ ಕಾಳಿಕಾಂಬ ಕ್ಷೇತ್ರದೊಳಗೆ ನುಗ್ಗಿ ಅಪವಿತ್ರಗೊಳಿಸಿದ ಅನ್ಯಕೋಮಿನ ಜಿಹಾದಿಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ ನೀಡಿರುವುದು ಖಂಡನೀಯ. ಈ ಪ್ರಕರಣದ ಹಿಂದೆ ಬಾಹ್ಯ ಕೈವಾಡವಿದೆ ಎನ್ನುವುದಕ್ಕೆ ಇದುವೇ ಸ್ಪಷ್ಟ ನಿದರ್ಶನವಾಗಿದೆ. ಅನ್ಯಮತೀಯರ ಆರಾಧನಾಲಯಗಳಿಗೆ ಕಿಂಚಿತ್ ಗಾಳಿ ಬೀಸಿದರೂ ಉರಿದು ಬೀಳುವ ಮತ್ತು ಕಠಿಣ ಕಾನೂನುಕ್ರಮ ಕೈಗೊಳ್ಳುವ ಪೊಲೀಸರು ಹಿಂದುಗಳ ಕ್ಷೇತ್ರಗಳಿಗೆ ನುಗ್ಗುವ ಅಕ್ರಮಿಗಳಿಗೆ ರಾಜಾತಿಥ್ಯ ನೀಡಿ ಪೋಷಿಸುತ್ತಿರುವುದು ಒಂದು ವಿಭಾಗವು ಕಾನೂನು ಕೈಗೆತ್ತಿಕೊಳ್ಳಲು ನೀಡುವ ಪ್ರೇರಣೆಯಾಗಿದೆ. ವೈದ್ಯರ ದೃಢೀಕರಣ ಪತ್ರವೋ, ಪರಿಶೋಧನೆಯೋ ಇಲ್ಲದೆಯೇ ಮಾದಕ ವಸ್ತುಗಳ ವ್ಯಸನಿ, ಮಾನಸಿಕ ಅಸ್ವಸ್ಥನೆಂಬ ಇದ್ದ `ಬಿರುದು'ಗಳನ್ನೆಲ್ಲಾ ನೀಡಿ ಕಾನೂನು ಕಾಪಾಡಬೇಕಾದ ಪೊಲೀಸರೇ ಆದಿಯಿಂದಲೂ ಆರೋಪಿಯನ್ನು ಸಂರಕ್ಷಿಸಲು ಯತ್ನಿಸಿದ್ದಾರೆ. ಇದು ಪೊಲೀಸರು ಮತ್ತು ಆರೋಪಿಗಳ ನಡುವಿನ ಅಪವಿತ್ರ ನಂಟಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಅರಕ್ಷಕರು ನಾಡಿಗೇ ಶಾಪವಾಗಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಇಂತಹ ಆರೋಪಿಗಳಿಗೆ ಕಾನೂನು ಮತ್ತು ಆಥರ್ಿಕ ನೆರವನ್ನು ನೀಡುವವರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೇರಬೇಕು. ಹಿಂದು ಕ್ಷೇತ್ರಗಳಿಗೆ ನಡೆದ ಆಕ್ರಮಣ, ಅಶುದ್ಧಿಗೊಳಿಸುವಿಕೆ, ಕಳವು ಮೊದಲಾದ ಕೃತ್ಯಗಳ ಕುರಿತಾಗಿ ಪ್ರತ್ಯೇಕ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸುವಂತಾಗಬೇಕು ಎಂದು ಹಿಂದು ಐಕ್ಯವೇದಿಕೆಯು ಪ್ರಕಟಣೆಯಲ್ಲಿ ಸಂಬಂಧಪಟ್ಟವರನ್ನು ಆಗ್ರಹಿಸಿದೆ.

