ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಆದೂರು ಶಾಲೆಯ ಪ್ರಿ-ಪ್ರೈಮರಿ ತರಗತಿ ಸ್ಮಾಟರ್್
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಪ್ರಿ-ಪ್ರೈಮರಿ ತರಗತಿಯನ್ನು ಸ್ಮಾಟರ್್ ಕೊಠಡಿಯನ್ನಾಗಿ ಮಾರ್ಪಡಿಸಲಾಗಿದೆ.
ತರಗತಿಯನ್ನು ಆಕರ್ಷಗೊಳಿಸುವ ಮತ್ತು ಸೌಕರ್ಯಪ್ರದಗೊಳಿಸುವ ಯೋಜನೆಯ ಅಂಗವಾಗಿ ಲಭಿಸಿದ ಆಥರ್ಿಕ ನೆರವನ್ನು ಉಪಯೋಗಿಸಿ ನವೀಕರಿಸಿದ ಸ್ಮಾಟರ್್ ಕೊಠಡಿಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಸೋಮವಾರ ಉದ್ಘಾಟಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬೂಬಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಾಂಶುಪಾಲ ಶ್ರೀಕೃಷ್ಣ ಭಟ್, ಮಾತೃ ಸಂಘದ ಅಧ್ಯಕ್ಷೆ ಬೀಫಾತಿಮ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಸಿ.ಅಬೂಬಕರ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಎ.ಕೆ.ಅಬ್ದುಲ್ ರಹಿಮಾನ್ ಹಾಜಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಹಮೀದ್, ಲಕ್ಷ್ಮಣ, ಗಂಗಾಧರ ಉಪಸ್ಥಿತರಿದ್ದರು. ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಮುಖ್ಯ ಶಿಕ್ಷಕ ಬಾಲಕೃಷ್ಣ ಜಿ. ಸ್ವಾಗತಿಸಿ, ಪ್ರಕಾಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪ್ರಿ ಪ್ರೈಮರಿ ಶಿಕ್ಷಕಿ ಶೃತಿ ವಂದಿಸಿದರು.


