ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 20, 2017
ಸಂಸ್ಕಾರ ರಹಿತ ಶಿಕ್ಷಣದಿಂದ ಸಮಾಜ ಘಾತುಕ ಶಕ್ತಿ ನಿಮರ್ಾಣ-ಅಚ್ಯುತ ಚೇವಾರು
ಉಪ್ಪಳ: ಇಂದು ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವರು ಅಕ್ಷರಸ್ತರೇ ವಿನಃ ಅನಕ್ಷರಸ್ಥರಲ್ಲ, ಇದಕ್ಕೆ ಮೂಲ ಕಾರಣ ಸಂಸ್ಕಾರವಿಲ್ಲದ ಶಿಕ್ಷಣ. ಎಂದು ಪೈವಳಿಕೆ ಪಂಚಾಯತಿನ ಮಾಜಿ ಅಧ್ಯಕ್ಷರೂ, ಪತ್ರಕರ್ತರಾದ ಅಚ್ಯುತ ಚೇವಾರು ಅವರು ನುಡಿದರು.
ಇವರು ಇತ್ತೀಚೆಗೆ ಪೈವಳಿಕೆ ಸಮೀಪದ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ನಡೆದ ವಾಷರ್ಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಶಾಂತಿ ಸೇವಾ ಟ್ರಸ್ಟಿನ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್, ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್ ಮತ್ತು ಗ್ರಾ.ಪಂ. ಸದಸ್ಯ ಕೃಷ್ಣ ನಾಯಕ್ ಉಪಸ್ಥಿತರಿದ್ದರು. ಪ್ರಾಂಶುಪಾಲ ಅನೂಪ್ ಕೆ ಸ್ವಾಗತಿಸಿ, ದೈಹಿಕ ಶಿಕ್ಷಕ ಪ್ರಕಾಶ್ ಮಾಣಿ ವಂದಿಸಿದರು. ಅಧ್ಯಾಪಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

