ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ಗಾಳ ಹಾಕಿ ಮೀನು ಹಿಡಿಯಲು ಮಂಗಳೂರಿಗೆ ಬನ್ನಿ
ಮಂಗಳೂರು : ಕೆರೆ ,ತೋಡು,ತೊರೆ , ನದಿಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವ ಉತ್ಸಹ , ರೋಮಾಂಚನವೇ ಬೇರೆ. ಹಳ್ಳ ,ಬಾವಿ, ಕೆರೆಗಳ ಬದಿಯಲ್ಲಿ ಕೈಯಲ್ಲಿ ಗಾಳ ಹಿಡಿದು ಮೀನು ಹಿಡಿಯುವ ಪರಿಪಾಠ ಕರಾವಳಿಯಲ್ಲಿ ಸವರ್ೇ ಸಾಮಾನ್ಯ . ಗಾಳ ಹಾಕಿ ಮೀನು ಹಿಡಿಯುವ ದೃಶ್ಯ ಗ್ರಾಮೀಣ ಪ್ರದೇಶದಲ್ಲಿ ಸವರ್ೇ ಸಾಮಾನ್ಯವಾಗಿದ್ದರೂ ಇತ್ತೀಚೆಗೆ ನಗರ ಪ್ರದೇಶಕ್ಕೂ ವ್ಯಾಪಿಸುತ್ತಿದೆ . ಗಾಳ ಹಾಕಿ ಮೀನು ಹೊಡೆಯುವ ಪ್ರಕ್ರಿಯೆಗೆ ಈಗ ಒಂದು ಕ್ರೀಡೆಯ ರೂಪ ನೀಡಲಾಗಿದೆ . ಈ ಗಾಳ ಹಾಕಿ ಮೀನು ಹಿಡಿಯುವ ಕ್ರೀಡೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರಿ ಮನ್ನಣೆಯಿದೆ ಮತ್ತು ಬಾರಿ ಜನಪ್ರಿಯ ಕ್ರೀಡೆ ಕೂಡ . ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಈ ಕ್ರೀಡೆ ಈಗ ಕನರ್ಾಟಕದ ಕರಾವಳಿಗೆ ಕಾಲಿರಿಸಿದೆ. ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಗಾಳ ಹಾಕುವ ಸ್ಪಧರ್ೆ "ಆಯಂಗ್ಲಿಂಗ್ ಕಾನರ್ಿವಲ್ " ಆಯೋಜಿಸಲಾಗುತ್ತಿದೆ.
ಇದೇ ಬರುವ ಡಿಸೆಂಬರ್ 24 ಹಾಗು 25 ರಂದು ಮಂಗಳೂರು ಹೊರವಲಯದ ಪಣಂಬೂರು ಕಡಲ ತೀರ ಮತ್ತು ಎನ್ಎಂಪಿಟಿ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ರಾಷ್ಟ್ರಮಟ್ಟದ ಗಾಳ ಹಾಕುವ ಸ್ಪಧರ್ೆ ಆ?ಯಂಗ್ಲಿಂಗ್ ಕಾನರ್ಿವಲ್ ಆಯೋಜಿಸಲಾಗಿದೆ. ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಅವಕಾಶ ಕಲ್ಪಿಸುವ ಸಲುವಾಗಿ ಗಿಫ್ಟೆಡ್ ಇಂಡಿಯಾ ಸಂಸ್ಥೆಯು ಎನ್ಎಂಪಿಟಿ ಮಂಗಳೂರು ಹಾಗೂ ಪಣಂಬೂರು ಬೀಚ್ ಸಹಯೋಗದಲ್ಲಿ ಈ ಗಾಳ ಹಾಕುವ ಉತ್ಸವವನ್ನು ಆಯೋಜಿಸಿದೆ . ಈ ಗಾಳ ಹಾಕುವ ಸ್ಪಧರ್ೆಯಲ್ಲಿ ಅಧಿಕ ತೂಕದ ಮೀನನ್ನು ಗಾಳದಲ್ಲಿ ಹಿಡಿದವರಿಗೆ ಹಾಗೂ ಅತಿ ಹೆಚ್ಚು ಸಂಖ್ಯೆಯ ಮೀನುಗಳನ್ನು ಹಿಡಿದವರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ . ಅಧಿಕ ತೂಕದ ಮೀನು ಹಿಡಿದವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ, ದ್ವಿತೀಯ 25 ಸಾವಿರ ರೂಪಾಯಿ ಹಾಗೂ ಅಧಿಕ ಸಂಖ್ಯೆಯ ಮೀನು ಹಿಡಿದವರಿಗೆ ಪ್ರಥಮ ಬಹುಮಾನ 10 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 5 ಸಾವಿರ ರೂಪಾಯಿ ನೀಡಲು ಆಯೋಜಕರು ನಿರ್ಧರಿಸಿದ್ದಾರೆ . ಈ ಸ್ಪಧರ್ೆಯಲ್ಲಿ ಭಾಗವಹಿಸುವವರು ಉಪಯೋಗಿಸುವ ಗಾಳದಿಂದ ಮೀನಿಗೆ ಯಾವುದೇ ರೀತಿಯಲ್ಲಿ ಅಪಾಯವಾಗದಂತೆ ಎಚ್ಚರಿಕೆ ವಹಿಸುವ ನಿಯಮವಿದೆ . ಇದಕ್ಕೆ ಕಾರಣವೂ ಇದೆ ಸ್ಪಧರ್ೆಯ ಸಂದರ್ಭದಲ್ಲಿ ಹಿಡಿದ ಮೀನಿನ ಪ್ರಮಾಣ ಹಾಗೂ ತೂಕ ಅಳೆದ ಬಳಿಕ ಅಷ್ಟೇ ಸುರಕ್ಷಿತವಾಗಿ ಆ ಮೀನುಗಳನ್ನು ಮತ್ತೆ ಸಮುದ್ರಕ್ಕೆ ಬಿಡುವ ಕಾರ್ಯ ನಡೆಯಲಿದೆ. ಈ ಗಾಳ ಹಾಕುವ ಉತ್ಸವದಲ್ಲಿ ದೇಶದ ಇತರ ರಾಜ್ಯಗಳ ಸ್ಪಧರ್ಾಳುಗಳು ಸೇರಿದಂತೆ ವಿದೇಶಿ ಆ?ಯಂಗ್ಲರ್ ಗಳು ಕೂಡ ಭಾಗವಹಿಸಲಿದ್ದಾರೆ.


