ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಮಾನ್ಯತೆ ನೀಡಬೇಕು : ಪ್ರೊ.ಎಸ್ಜಿ.ಸಿದ್ಧರಾಮಯ್ಯ
ಕಾಸರಗೋಡು: ಕಾಸರಗೋಡು ಹಲವು ಭಾಷೆಗಳ ಸಂಗಮ ಭೂಮಿ. ಈ ಹಿನ್ನೆಲೆಯಲ್ಲಿ ಸೌಹಾರ್ದತೆಯ ನಾಡನ್ನು ಕಟ್ಟಬೇಕು. ಕನ್ನಡ ಮತ್ತು ಮಲಯಾಳ ಎರಡೂ ಭಾಷೆಗಳು ಪಂಚ ದ್ರಾವಿಡ ಭಾಷೆಯ ಕುಟುಂಬಕ್ಕೆ ಸೇರಿದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಬೆಳವಣಿಗೆಗೆ ವಿಶೇಷ ಮಾನ್ಯತೆ ನೀಡಬೇಕು ಎಂದು ಕನರ್ಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್ಜಿ.ಸಿದ್ಧರಾಮಯ್ಯ ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕಾಸರಗೋಡು ಮತ್ತು ಅಪೂರ್ವ ಕಲಾವಿದರು ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ಆಯೋಜಿಸಿದ ಕಾಸರಗೋಡಿನ ಮಲೆಯಾಳ ಪತ್ರಕರ್ತರಿಗೆ ಕನ್ನಡ ಕಲಿಕಾ ಕಾಯರ್ಾಗಾರ ಉದ್ಘಾಟನೆ ಮತ್ತು ವಿಶೋಷೋಪನ್ಯಾಸ ನೀಡಿ ಮಾತನಾಡಿದರು.
ಸಹಿಷ್ಣುತಾ ಭಾವ, ವಿಶೇಷ ಸವಲತ್ತು, ಪರಸ್ಪರ ಹಿತಕ್ಕೆ ಧಕ್ಕೆ ಬಾರದಂತೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದ ಅವರು ಪತ್ರಕರ್ತರು ಪ್ರಭಾವಿತ ಶಕ್ತಿಯುಳ್ಳವರು. ಪ್ರಾಧಿಕಾರದಿಂದ ನೆರವು ಮತ್ತು ಎಲ್ಲಾ ಸವಲತ್ತುಗಳನ್ನು ನೀಡುವೆವು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಅವರು ಮಾತನಾಡಿ ಮಲಯಾಳ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಕನ್ನಡ ಅರಿಯದೆ ಸಂಕಷ್ಟ ಎದುರಿಸುತ್ತಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಅವರ ಹೇಳಿದಂತೆ ಪರಸ್ಪರ ಭಾಷೆಗಳನ್ನು ಪ್ರೀತಿಸಬೇಕು. ಕಾಸರಗೋಡು ಸಮೃದ್ಧವಾದ ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿದೆ. ಇದನ್ನು ಮನದಟ್ಟು ಮಾಡಿಕೊಂಡು ಎಲ್ಲಾ ಮಲಯಾಳ ಪತ್ರಕರ್ತರು ಕನ್ನಡ ಭಾಷೆಯನ್ನು ಕಲಿಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಜಿಲ್ಲಾಧಿಕಾರಿ ವಿಜಯಲಕ್ಷ್ಮೀ ಅತಿಥಿಯಾಗಿ ಉಪಸ್ಥಿತರಿದ್ದರು. ಅಪೂರ್ವ ಕಲಾವಿದರು ಅಧ್ಯಕ್ಷ ಉಮೇಶ ಎಂ.ಸಾಲಿಯಾನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದಶರ್ಿ ಡಾ.ಕೆ.ಮುರಳೀಧರ, ಡಾ.ರತ್ನಾಕರ ಮಲ್ಲಮೂಲೆ, ವಿನೋದ್ ಪಾಯಂ ಮೊದಲಾದವರು ಉಪಸ್ಥಿತರಿದ್ದರು.
ಶ್ರೀರಾಗ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜನಪದ ಗೀತೆ ಗಾಯನ ನಡೆಯಿತು.


