ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ನಿತ್ಯ ಶೋಧಿಸುವಿಕೆಯ ಕಾಡುವ ಭಾವ ಕಾವ್ಯವಾಗುತ್ತದೆ-ಅಕ್ಷತಾ ರಾವ್ ಪೆರ್ಲ
ಬದಿಯಡ್ಕ: ವರ್ತಮಾನದ ವಿದ್ಯಮಾನಗಳಿಗೆ ಅಕ್ಷರ ರೂಪದಲ್ಲಿ ಧ್ವನಿಯಾಗಿಸುವ, ಅಂತರಂಗ ಹಿಡಿದಿಡಲಾರದ ಭಾವಗಳು ಸಾಹಿತ್ಯಗಳಾಗಿ ಹೊರಹೊಮ್ಮುತ್ತದೆ. ಸಾಹಿತ್ಯ ಬರಹಗಳ ಒಟ್ಟು ಆಶಯ ಸಮಾಜ ಸುಧಾರಣೆಯೇ ಹೊರತು ಬೇರೇನೂ ಅಲ್ಲ ಎಂದು ಕವಯಿತ್ರಿ, ಕಥನಕಾರೆ ಅಕ್ಷತಾ ರಾಜ್ ಪೆರ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಗಡಿನಾಡ ಸಾಹಿತ್ಯ - ಸಾಂಸ್ಕೃತಿಕ ಅಕಾಡೆಮಿ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಬದಿಯಡ್ಕ ಸರಕಾರಿ ಫ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ಸಾಹಿತ್ಯ - ಸಾಂಸ್ಕೃತಿಕ ಪಯಣದ ನಾಲ್ಕನೇ ಪಯಣ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ "ಬರಹ ಬದುಕು ಹಾಗೂ ನಾವು" ವಿಷಯದಲ್ಲಿ ವಿಶೇಷೋಪನ್ಯಾಸಗೈದು ಮಾತನಾಡಿದರು.
ಬರಹ ಹುಟ್ಟಿಕೊಳ್ಳಲು ಪ್ರತ್ಯೇಕ ವಿಷಯಗಳೇನೂ ಸಿದ್ದಪಡಿಸಲಾಗುವುದಿಲ್ಲ. ಕವಿಯಾದವನ ಮನಸ್ಸಿಗೆ ಯಾವುದು ತಟ್ಟುತ್ತದೋ ಅದು ಕಾವ್ಯವಾಗುತ್ತದೆ. ನಿತ್ಯ ಶೋಧಿಸುವಿಕೆಯಲ್ಲಿ ಮನಸ್ಸನ್ನು ಕಾಡುವ ಭಾವಗಳು ಬರಹಕ್ಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು. ಓದುವಿಕೆ ಮತ್ತು ಬರಹಗಳು ವ್ಯಕ್ತಿತ್ವವನ್ನು ಗುಣಾತ್ಮಕವಾಗಿ ಬೆಳೆಸುತ್ತದೆ ಎಂದು ವಿಶ್ಲೇಶಿಸಿದ ಅವರು ಪ್ರತಿಯೊಬ್ಬನಲ್ಲೂ ಸುಪ್ತವಾಗಿರುವ ಕವಿಭಾವ ಧುಮ್ಮುಕ್ಕಿ ಭೋರ್ಗರೆದು ಹರಿದು ಬಂದಾಗ ಸುಂದರ ಸಾಹಿತ್ಯ ಕಡಲು ನಿಮರ್ಾಣಗೊಳ್ಳುವುದು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಶ್ರೀನಾಥ್ ಕಾಸರಗೋಡು ಅವರು ಅಧ್ಯಕ್ಷತೆ ವಹಿಸಿದ್ದರು.ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಸಮಾರಂಭ ಉದ್ಘಾಟಿಸಿದರು.ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್.ರೈ ಹಾಗು ಬದಿಯಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಮಾಹಿನ್ ಕೇಳೊಟ್,ಬದಿಯಡ್ಕ ಗ್ರಾ.ಪಂ. ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಸದಸ್ಯೆ ಶಾಂತ, ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಸುಬ್ಬಯ್ಯ ಕಟ್ಟೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ, ಮುಖ್ಯೋಪಾಧ್ಯಾಯ ರಾಜಗೋಪಾಲ.ಕೆ, ಕವಯಿತ್ರಿ, ಶಿಕ್ಷಕಿ ಜೋತ್ಸ್ನಾ ಎಂ. ಕಡೆಂದೇಲು, ಮುಖ್ಯೋಪಾಧ್ಯಾಯ ರಾಜಗೋಪಾಲ,ಸುನಿತ್ ಮಾಸ್ತರ್ ಕಾಟುಕುಕ್ಕೆ, ಶಿಕ್ಷಕಿ ದಿವ್ಯಗಂಗಾ ಉಪಸ್ಥಿತರಿದ್ದರು.. ಸಂಘಟನೆಯ ಪ್ರಧಾನ ಕಾರ್ಯದಶರ್ಿ ಅಖೀಲೇಶ್ ನಗುಮುಗಂ ಸ್ವಾಗತಿಸಿ, ವಿದ್ಯಾ ಗಣೇಶ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.


