ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ಮದ್ಯ ವಿರೋಧಿ ಹೋರಾಟ ಇಂದಿಗೆ 234ನೇ ದಿನ=ಅಧಿಕೃತರ ಮೌನ-ಆಕ್ರೋಶ
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಸನಿಹ ಮದ್ಯದಂಗಡಿಗಳು ಕಾಯರ್ಾಚರಿಸಬಾರದೆಂಬ ನ್ಯಾಯಾಲಯದ ಆದೇಶಾನುಸಾರ ಕುಂಬಳೆ ಪೇಟೆಯಲ್ಲಿ ಕಾಯರ್ಾಚರಿಸುತ್ತಿದ್ದ ವಿದೇಶಿ ಮದ್ಯದಂಗಡಿಯನ್ನು ನಾರಾಯಣಮಂಗಲದ ಜನವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಮದ್ಯದಂಗಡಿ ಮಾಲಕರು ತಯಾರಾಗುತ್ತಿರುವಂತೆ ಇದರ ವಿರುದ್ದ ಕಳೆದ ಏಪ್ರಿಲ್ 2 ರಂದ ಸ್ಥಳೀಯ ನಾಗರಿಕರು ಕ್ರಿಯಾ ಸಮಿತಿ ರೂಪಿಸಿ ಮದ್ಯದಂಗಡಿ ವಿರುದ್ದ ಹೂಡಿದ ಆಹೋರಾತ್ರಿ ಹೋರಾಟ ಇಂದಿಗೆ(ಗುರುವಾರ) 234 ನೇ ದಿನಕ್ಕೆ ತಲಪಿದ್ದು, ಈ ಮಧ್ಯೆ ಅದಿಕೃತರ ನಿರ್ಲಕ್ಷ್ಯದ ವಿರುದ್ದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣಮಂಗಲ ಪ್ರದೇಶ 400ಕ್ಕಿಂತಲೂ ಅಧಿಕ ಕುಟುಂಬಗಳು ವಾಸಿಸುವ ಜನನಿಬಿಡ ಪ್ರದೇಶವಾಗಿದ್ದು, ಆರಾಧನಾಲಯಗಳು, ಶಾಲಾ ಕಾಲೇಜುಗಳು ಕಾಯರ್ಾಚರಿಸುತ್ತಿವೆ. ಹೀಗಿದ್ದೂ ಕಾನೂನುಗಳನ್ನು ಮರೆಮಾಚಿ ಸ್ವಹಿತಾಸಕ್ತಿ, ವ್ಯಾವಹಾರಿಕ ದೃಷ್ಟಿಕೋನದಿಂದ ಮದ್ಯದಂಗಡಿ ಆರಂಭಿಸಲು ಹೊರಟಿರುವವರಿಗೆ ಪರವಾನಿಗೆ ನೀಡಿರುವ ಸ್ಥಳೀಯಾಡಳಿತ ಸಹಿತ ಇತರ ಸರಕಾರಿ ಸಂಸ್ಥೆಗಳ ಕ್ರಮಗಳ ವಿರುದ್ದ ಜನರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಾತಿ ಮತ ಬೇಧಗಳಿಲ್ಲದೆ ಎಲ್ಲಾ ವರ್ಗದ ಜನವಿಭಾಗ ವಾಸಿಸುವ ನಾರಾಯಣಮಂಗಲ ಪರಿಸರದಲ್ಲಿ ಅತಿ ಪುರಾತನವಾದ ಕಾನ ಶ್ರೀಶಂಕರನರಾಯಣ ಕ್ಷೇತ್ರ, ಶ್ರೀಧೂಮಾವತಿ ಕ್ಷೇತ್ರ, ವಿಷ್ಣುಮೂತರ್ಿ ದೇವಸ್ಥಾನವಿದೆ. ಜೊತೆಗೆ ಹಲವಾರು ತರವಾಡು ಮನೆಗಳೂ, ನಾಗಸನ್ನಿಧಿಗಳೂ ಇವೆ. ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಖಾಸಗೀ ಮಹಿಳಾ ಕಾಲೇಜು, ಅಂಗನವಾಡಿ ಕೇಂದ್ರಗಳು, ಬಸ್ ನಿಲ್ದಾಣ ಕಾರ್ಯನಿರ್ವಹಿಸುತ್ತಿವೆ. ಇವೆಲ್ಲ ಸಾರ್ವಜನಿಕ ಕೇಂದ್ರಗಳನ್ನು ಪರಿಗಣಿಸದೆ ಕುಂಬಳೆಯಿಂದ ಸ್ಥಳಾಂತರಗೊಳಿಸಲ್ಪಟ್ಟ ಮದ್ಯದಂಗಡಿಗೆ ನಾರಾಯಣಮಂಗಲದಲ್ಲಿ ಅನುಮತಿ ನೀಡಿರುವುದು ಅಧಿಕಾರಿ ವರ್ಗದ ಲಂಚಕೋರತನ, ಸ್ವಜನ ಪಕ್ಷಪಾತಗಳ ಸೂಚಕವೆಂದು ಕ್ರಿಯಾ ಸಮಿತಿ ಆರೋಪಿಸಿದೆ.
ಹೋರಾಟ 234ನೇ ದಿನಕ್ಕೆ:
ಮದ್ಯದಂಗಡಿ ಆರಂಭಿಸುವುದರ ವಿರುದ್ದ ನಾರಾಯಣಮಂಗಲದ ಸ್ಥಳಿಯ ನಾಗರಿಕರು ಮತ, ಜಾತಿ, ಪಕ್ಷಗಳ ಬೇಧಗಳಿಲ್ಲದೆ ಏ.2 ರಂದು ರೂಪುನೀಡಿದ ಮದ್ಯ ವಿರೋಧಿ ಕ್ರಿಯಾ ಸಮಿತಿಯ ಆಹೋರಾತ್ರಿ ಹೋರಾಟ ಇಂದು 234ನೇ ದಿನಕ್ಕೆ ಕಾಲಿರಿಸಿದೆ.ರಾತ್ರಿ ಹಗಲೆನ್ನದೆ ಕುಂಬಳೆ-ಸೀತಾಂಗೋಳಿ ರಸ್ತೆಯ ನಾರಾಯಣಮಂಗಲದಲ್ಲಿ ಉದ್ದೇಶಿತ ಮದ್ಯದಂಗಡಿ ಕೇಂದ್ರದ ಸನಿಹ ಕ್ರಿಯಾ ಸಮಿತಿ ಟೆಂಟ್ ನಿಮರ್ಿಸಿ ಸುಧೀರ್ಘ ಕಾಲದಿಂದ ಈ ಹೋರಾಟ ನಡೆಸುತ್ತಿದೆ. ಸ್ಥಳೀಯ ಬಿಡಿ ಕಾಮರ್ಿಕರು, ಕೃಷಿಕರು, ವಿದ್ಯಾಥರ್ಿಗಳು, ಶಿಕ್ಷಕರು ಸಹಿತ ವಿವಿಧ ವಿಭಾಗದ ಜನರು ಅಕ್ರಮವಾಗಿ ನಿಮರ್ಿಸಲುದ್ದೇಶಿಸಿರುವ ಮದ್ಯದಂಗಡಿಯ ವಿರುದ್ದ ಹೂಡಿರುವ ಹೋರಾಟ ಈತಿಹಾಸಿಕವಾಗಿ ಹೊಸ ದಾಖಲೆ ನಿಮರ್ಿಸಿದೆ.
ಅಧಿಕಾರಿಗಳ ಮೌನ:
ಕ್ರಿಯಾ ಸಮಿತಿಯ ಸುಧೀರ್ಘ ಅವಧಿಯ ಹೋರಾಟ ನಡೆಯುತ್ತಿದ್ದರೂ ಅಧಿಕೃತರು ಒಮ್ಮೆಯೂ ಭೇಟಿ ನೀಡದೆ ಮೌನವಾಗಿರುವುದು ಅಕ್ರಮದಲ್ಲಿ ಅಧಿಕೃತರೂ ಶಾಮೀಲಾಗಿರುವುದಕ್ಕೆ ಸಾಕ್ಷಿಯೆಂದು ಸಂಶಯಿಸುವಂತಾಗಿದೆ.ಸ್ಥಳೀಯ ಕುಂಬಳೆ ಗ್ರಾಮ ಪಮಚಾಯತು ಅಧ್ಯಕ್ಷರು ಒಂದೆರಡು ಬಾರಿ ಭೇಟಿ ನೀಡಿ ಶೀಘ್ರ ಪರಿಹಾರ ಕಲ್ಪಿಸಲಾಗುವುದೆಂಬ ಭರವಸೆ ನೀಡಿದ್ದರೂ ಬಳಿಕದ ಪರಿಣಾಮ ಶೂನ್ಯವಾಗಿ ಕ್ರಿಯಾ ಸಮಿತಿಯನ್ನು ರೊಚ್ಚಿಗೆಬ್ಬಿಸಿದೆ.
ನ್ಯಾಯಾಲಯಕ್ಕೆ ಕ್ರಿಯಾ ಸಮಿತಿ ಈಗಾಗಲೇ ಹಲವು ಬಾರಿ ಮನವಿ ನೀಡಿ ಮದ್ಯದಂಗಡಿ ವಿರುದ್ದ ತಡೆಯಾಜ್ಞೆಗೆ ಪ್ರಯತ್ನಿಸಿದ್ದರೂ ಅದು ಇನ್ನೂ ಇತ್ಯರ್ಥಗೊಳ್ಳದೆ ಡೋಲಾಯಮಾನ ಸ್ಥಿತಿಯಲ್ಲಿದೆ. ಜನಪರ ಬೇಡಿಕೆಗಳನ್ನು ನ್ಯಾಯಾಲಯಗಳು ಶೀಘ್ರ ಇತ್ಯರ್ಥಗೊಳಿಸದೆ ದಿನದೂಡುತ್ತಿರುವುದೂ ಅದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ. ನಾರಾಯಣಮಂಗಲದಿಂದ ಮದ್ಯದಂಗಡಿಯನ್ನು ಬೇರೊಂದೆಡೆ ಸ್ಥಾಪಿಸಲು ಕಳೆದ ಒಮದು ತಿಂಗಳ ಹಿಂದೆ ಪ್ರಯತ್ನವೊಂದನ್ನು ನಡೆಸಲಾಗಿತ್ತು. ಅದು ಆ ಪ್ರದೇಶದ ನಾಗರಿಕರ ಪ್ರತಿಭಟನೆಯ ಕಾರಣ ತೀಮರ್ಾನದಿಂದ ಹಿಂದೆ ಸರಿಯುವಂತೆ ಮಾಡಿತ್ತು. ಆದರೆ ನಾರಾಯಣಮಂಗಲದ ನಾಗರಿಕರು ಸುಧೀರ್ಘ ಕಾಲದಿಂದ ನಡೆಸುತ್ತಿರುವ ಆಹೋರಾತ್ರಿ ಹೋರಾಟಕ್ಕೆ ಕೊನೆ ಇಲ್ಲದಂತಾಗಿರುವುದು ವ್ಯಾಪಕ ಸಂಶಯ ಗಳಿಗೆ ಎಡೆಮಾಡಿದೆ.
ಏನಂತಾರೆ:
ಯಾವ ಕಾರಣಕ್ಕೂ ನಾರಾಯಣಮಂಗಲ ಕೇಂದ್ರೀಕರಿಸಿ ಮದ್ಯದಂಗಡಿ ತೆರೆಯಲು ಬಿಡಲಾರೆವು. ಆದಿಕೃತರು ಭೇಟಿ ನೀಡದೆ, ಏನೊಂದೂ ಹೇಳದೆ ಎಷ್ಟು ನಿರ್ಲಕ್ಷ್ಯ ವಹಿಸಿದ್ದರೂ ಹೋರಾಟದಿಂದ ರಾಜಿಯಾಗುವ ತೀಮರ್ಾನ ಖಂಡಿತಾ ಇಲ್ಲ.ನ್ಯಾಯಾಲಯದ ಮೂಲಕ ಶೀಘ್ರ ನಾವೇ ನಿಷೇಧದ ನ್ಯಾಯದೊರಕಿಸಿ ಹೊರಾಟದ ಅಂತಿಮ ಗುರಿ ತಲಪುವುದೊಂದೇ ನಮ್ಮ ಲಕ್ಷ್ಯ.
ಜಯಪ್ರಕಾಶ್ ನಾರಾಯಣಮಂಗಲ.
ಕ್ರಿಯಾ ಸಮಿತಿ ಮುಖಂಡ.



