ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 23, 2017
ಮೈಸೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡಿಗರು
ಕುಂಬಳೆ: ಪ್ರತೀ ವರ್ಷ ಅದ್ದೂರಿಯಿಂದ ನಡೆಯುವ ಕನ್ನಡದ ನುಡಿಹಬ್ಬ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜನೆಗೊಂಡಿದ್ದು, ನ.24 ರ ಶುಕ್ರವಾರದಿಂದ 26 ರ ಭಾನುವಾರದ ವರೆಗೆ ಮೂರು ದಿನಗಳ ಕಾಲ ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಜರಗಲಿದೆ.
ಇದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾಗಿದ್ದು, ಕಾಸರಗೋಡಿನ ಐದು ಮಂದಿಗೆ ಈ ಬಾರಿ ಅವಕಾಶ ಸಿಕ್ಕಿದೆ. ನ. 26 ರಂದು ಮುಖ್ಯ ವೇದಿಕೆಯಲ್ಲಿ ಜರಗಲಿರುವ ಹಿರಿಯರ ಪ್ರಧಾನ ಕವಿಗೋಷ್ಠಿಯಲ್ಲಿ ಕಾಸರಗೋಡಿನವರಾದ ಪ್ರಸಿದ್ಧ ಕವಿ ಡಾ. ವಸಂತಕುಮಾರ ಪೆರ್ಲ ಭಾಗವಹಿಸಲಿದ್ದಾರೆ. ನ. 25 ರಂದು ಕಲಾಮಂದಿರದ ಪಯರ್ಾಯ ವೇದಿಕೆಯಲ್ಲಿ ಜರಗುವ ಮೂರನೇ ಕವಿಗೋಷ್ಠಿಯಲ್ಲಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ಸುಬ್ರಹ್ಮಣ್ಯ ಭಟ್ ಮತ್ತು ಡಾ. ಧನಂಜಯ ಕುಂಬಳೆ ಭಾಗವಹಿಸುವರು.
ಅದೇ ದಿನ ಪಯರ್ಾಯ ವೇದಿಕೆಯಲ್ಲಿ ಜರಗಲಿರುವ 'ಕನರ್ಾಟಕ ಕಲಾಜಗತ್ತು' ಎಂಬ ವಿಚಾರ ಸಂಕಿರಣದಲ್ಲಿ ಡಾ. ನಾ. ದಾಮೋದರ ಶೆಟ್ಟಿ ರಂಗಭೂಮಿ ವಿಷಯದ ಬಗ್ಗೆ ಮಾತಾಡಲಿರುವರು.
ನ. 25 ರಂದು ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ಸಮಾನಾಂತರ ವೇದಿಕೆಯಲ್ಲಿ ಜರಗಲಿರುವ ಎರಡನೇ ಕವಿಗೋಷ್ಠಿಯಲ್ಲಿ ಮೂಲತಃ ಕಾಸರಗೋಡಿನವರಾದ, ಪ್ರಸ್ತುತ ಕುಂದಾಪುರ ವಾಸಿ ಡಾ. ಪಾರ್ವತಿ ಜಿ. ಐತಾಳ (ಪಾರ್ವತಿ ಬಾಳಿಕೆ) ಭಾಗವಹಿಸುವರು. ಮೂರನೇ ಕವಿಗೋಷ್ಠಿಯಲ್ಲಿ ಭಾಗವಹಿಸುವ ಇನ್ನೋರ್ವ ಕವಿ ಮುರಳೀಕೃಷ್ಣ ಬೆಳಾಲು ಕೂಡ ಮೂಲತಃ ಕಾಸರಗೋಡಿನ ಎಡನೀರು ಬಳಿಯ ಪೊಟ್ಟಿಪ್ಪಲದವರಾಗಿದ್ದಾರೆ.

