ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ವಿಕಲಚೇತನರ ಸಮಾವೇಶ
ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತು ವ್ಯಾಪ್ತಿಯ ವಿಕಲಚೇತನರ (ಡಿಎಡಬ್ಲ್ಯೂಎಫ್) ಸಮಾವೇಶವು ಇತ್ತೀಚೆಗೆ ಪೈವಳಿಕೆ ನಗರ ಶಾಲಾ ಪರಿಸರದಲ್ಲಿ ಜರಗಿತು. ಗ್ರಾಮ ಪಂಚಾಯತರು ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘಟನೆಯ ಪಂಚಾಯತು ಸಮಿತಿಯ ಅಧ್ಯಕ್ಷ ಮಹಮ್ಮದ್ ಕಯ್ಯಾರ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತು ಸದಸ್ಯ ಕಿಶೋರ್ಕುಮಾರ್ ಪೆವರ್ೋಡಿ, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಸಂಘಟನೆಯ ಮಂಡಲ ಅಧ್ಯಕ್ಷ ಮೊಯ್ದೀನ್, ಜಿಲ್ಲಾ ಅಧ್ಯಕ್ಷ ಕೃಷ್ಣನ್, ಜಿಲ್ಲಾ ಸದಸ್ಯ ಮಹಮ್ಮದ್ ಕಳಾಯಿ, ಸದಸ್ಯ ಎಂ.ಚಂದ್ರ ನಾಯ್ಕ ಶುಭಹಾರೈಸಿದರು.
ಕಾಸರಗೋಡು ಏರಿಯಾ ಕಾರ್ಯದಶರ್ಿ ರಾಧಾಕೃಷ್ಣ ಮಧೂರು ಅವರು, ವಿಕಲಚೇತನರಿಗೆ ಸರಕಾರದಿಂದ ಲಭಿಸುವ ವಿವಿಧ ಸವಲತ್ತುಗಳ ಬಗ್ಗೆ ತರಗತಿ ನಡೆಸಿದರು.
ನೂತನ ಪದಾಧಿಕಾರಿಗಳಾಗಿ ಮಹಮ್ಮದ್ ಕಯ್ಯಾರ್ (ಅಧ್ಯಕ್ಷರು), ವಿಷ್ಣು ಭಟ್ ಕನಿಯಾಲ (ಉಪಾಧ್ಯಕ್ಷರು), ಎಂ.ಚಂದ್ರ ನಾಯ್ಕ (ಕಾರ್ಯದಶರ್ಿ), ಶಿವರಾಮ ಭಟ್ ಮಾಸ್ತರ್, ಶಾಂಭವಿ ಬಾಯಿಕಟ್ಟೆ (ಸಹ ಕಾರ್ಯದಶರ್ಿಗಳು), ಮಹಮ್ಮದ್ ಚಿಪ್ಪಾರ್ (ಕೋಶಾಧಿಕಾರಿ) ಹಾಗೂ 14 ಮಂದಿ ಸದಸ್ಯರನ್ನು ಆರಿಸಲಾಯಿತು.
ಅಂಗವಿಕಲರ ಪಿಂಚಣಿ 3000ರೂ. ಗೇರಿಸಬೇಕು, ವಿಕಲಚೇತನರ ರೇಶನ್ ಕಾಡರ್್ಗಳನ್ನು ಬಿಪಿಎಲ್ ಆಗಿ ಪರಿಗಣಿಸಬೇಕು, ವಿಕಲಚೇತನರ ಮಕ್ಕಳಿಗೆ ವಿವಾಹ ಸಹಾಯಧನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಲಾಯಿತು.

