ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ನಾಯ್ಕಾಪಿನ ನಗರ ಭಜನೆ ಯಶಸ್ವೀ 23ನೇ ದಿನಕ್ಕೆ
ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾರ ಬನದ ವಠಾರದಲ್ಲಿ ಸತತ 15 ವರ್ಷಗಳಿಂದ ಸಾರ್ವಜನಿಕ ಏಕಾಹ ಭಜನ ಸಮಿತಿಯ ಆಶ್ರಯದಲ್ಲಿ ನಡೆದುಬರುತ್ತಿರುವ ಏಕಾಹ ಭಜನ ಕಾರ್ಯಕ್ರಮವು ಈ ವರ್ಷ ದಶಂಬರ 16ರಂದು ಶನಿವಾರ ಸೂಯರ್ೋದಯದಿಂದ ಆರಂಭಗೊಂಡು 17ರಂದು ಭಾನುವಾರದ ವರೆಗೆ ನಡೆಯಲಿದೆ. ಆ ಪ್ರಯುಕ್ತ ಅಕ್ಟೋಬರ್ 28 ರಿಂದ ಆರಂಭಗೊಂಡ ನಗರ ಭಜನೆ ಯಶಸ್ವೀ 23ನೆಯ ದಿನಕ್ಕೆ ಕಾಲಿಟ್ಟಿದೆ. ದಿನವೂ ಸಂಧ್ಯಾ ಸಮಯಕ್ಕೆ ಶ್ರೀ ಬನದಿಂದ ಭಜನ ತಂಡ ದೀಪ ಪ್ರಜ್ವನಲದೊಂದಿಗೆ ಭಜನೆಯನ್ನು ಆರಂಭಿಸಿ ಮನೆಮನೆಗಳಿಗೆ ತೆರಳಿ ಭಜನೆ ಮಾಡಿ ಆ ಪುಣ್ಯ ಕಾರ್ಯದ ಸಂದೇಶವನ್ನು ತಲಪಿಸುವ ಕಾರ್ಯವನ್ನು ಮಾಡುತ್ತದೆ. ದಿನವೂ ಇಪ್ಪತ್ತರಿಂದ ನಲುವತ್ತು ಮಂದಿಯ ವರೆಗೆ ಸೇರುವ ಭಜನ ತಂಡ ಈಗಾಗಲೇ ನಾನ್ನೂರ ಐವತ್ತಕ್ಕೂ ಮಿಕ್ಕು ಮನೆಗಳಿಗೆ ಭೇಟಿ ನೀಡಿ ನಗರ ಭಜನೆಯ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ನಗರ ಭಜನ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಮನೆಗಳನ್ನು ಭೇಟಿನಿಡುವ ಗುರಿಯನ್ನು ಇರಿಸಿಕೊಳ್ಳಲಾಗಿದೆ ಎಂದು ನೇತೃತ್ವ ವಹಿಸುತ್ತಿರುವ ಅಜಯ್ ನಾಯ್ಕಾಪು, ರವಿ ನಾಯ್ಕಾಪು, ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಮುರಳೀಧರ ಯಾದವ್ ನಾಯ್ಕಾಪು, ದಯಾನಂದ ನಾಯ್ಕಾಪು, ಮೊದಲಾದವರು ತಿಳಿಸಿದ್ದಾರೆ. ಇಷ್ಟು ವರ್ಷಗಳಲ್ಲೂ ಭಜನ ತಂಡಕ್ಕೆ ವಾಹನವನ್ನೊದಗಿಸಿದ ಅನಿಲ್ ಕುಮಾರ್ ನಾಯ್ಕಾಪು ಅವರ ಸೇವೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.


