ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಭಜನಾ ಮಂದಿರದ 36ನೇ ವಾಷರ್ಿಕೋತ್ಸವ
ಬದಿಯಡ್ಕ : ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದ 36ನೇ ವಾಷರ್ಿಕೋತ್ಸವವು ಸೋಮವಾರ ಬೆಳಗ್ಗೆ ದೀಪೋಜ್ವಲನದೊಂದಿಗೆ ಪ್ರಾರಂಭವಾಯಿತು. ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಮಿತಿಯ ವತಿಯಿಂದ ಭಜನೆ, ಗಣಪತಿ ಹೋಮ ಹಾಗೂ ವ್ರತಧಾರಿಗಳಿಗೆ ಮುದ್ರಾಧಾರಣೆ ಮಾಡಲಾಯಿತು. ತತ್ವಮಸಿ ಸಿಂಗಾರಿಮೇಳದ 4 ವಾಷರ್ಿಕೋತ್ಸವದ ಪ್ರಯುಕ್ತ ನಡೆದ ಅನ್ನದಾನ, ಸಿಂಗಾರಿಮೇಳ ಪ್ರದರ್ಶನ ಗಮನಸೆಳೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನದಾನ ನಡೆಯಿತು. ಅಪರಾಹ್ನ ನೆಕ್ರಾಜೆ ಶ್ರೀ ಗೋಪಾಲಕೃಷ್ಣ ಭಜನ ಸಂಘದಿಂದ ಭಜನೆ, ಸತ್ಯನಾರಾಯಣ ಪೂಜೆ, ಜೆ.ಆರ್.ಎಸ್.ಬಾಲಸಂಸ್ಕಾರ ಕೇಂದ್ರದ ವಿದ್ಯಾಥರ್ಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 2ನೇ ಮೈಲು ಯುವಕೇಸರಿ ಫ್ರೆಂಡ್ಸ್ ಕ್ಲಬ್ನ ವಾಷರ್ಿಕೋತ್ಸವದ ಪ್ರಯುಕ್ತ ಅನ್ನದಾನ ಸೇವೆ, ಯಕ್ಷಮಿತ್ರರು ಮಾವಿನಕಟ್ಟೆ ಪ್ರಾಯೋಜಕತ್ವದಲ್ಲಿ ಹೆಸರಾಂತ ಕಲಾವಿದರ ಸಮ್ಮಿಲನದೊಂದಿಗೆ ಯಕ್ಷ-ನಾಟ್ಯ-ಗಾನ ವೈಭವ `ಯಕ್ಷರಂಜಿನಿ' ಪ್ರದರ್ಶನಗೊಂಡಿತು.
ಮಂಗಳವಾರ ಬೆಳಗ್ಗೆ 11 ಘಂಟೆಗೆ ನಡೆಯುವ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಮಂದಿರದ ಸೇವಾ ಸಮಿತಿ ಅಧ್ಯಕ್ಷ ದಾಮೋದರ ಮೈಲುತೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಭಾರತಿ ಜಿಲ್ಲಾ ಸಂಚಾಲಕ ಪ್ರಶಾಂತ್ ಉಬ್ರಂಗಳ ಧಾಮರ್ಿಕ ಉಪನ್ಯಾಸ ನೀಡಿದರು. ಸಾಹಿತಿ, ಕನರ್ಾಟಕ ಜಾನಪದ ಪುಸ್ತಕ ಪ್ರಶಸ್ತಿ ವಿಜೇತ ಕೇಳುಮಾಸ್ತರ್ ಅಗಲ್ಪಾಡಿ, ಜಾನಪದ ಪ್ರಶಸ್ತಿ ವಿಜೇತ ಕಲಾವಿದ ಮನುಪಣಿಕ್ಕರ್ ಅವರಿಗೆ ಕೃತಜ್ಞತಾ ಸಮರ್ಪಣೆ ನಡೆಯಿತು. ರಾತ್ರಿ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾಸಂಘ ಮತ್ತು ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

