ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ವಿವಿಧೆಡೆ ಷಷ್ಠೀ ಸಂಭ್ರಮ: ಕುಮಾರಮಂಗಲದಲ್ಲಿ ವಾಷರ್ಿಕ ಷಷ್ಠೀ ಮಹೋತ್ಸವ
ಬದಿಯಡ್ಕ: ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದುಬರುತ್ತಿರುವ ಷಷ್ಠೀ ಮಹೋತ್ಸವವು ನ.24ರಂದು ಜರಗಲಿರುವುದು. ನ.23ರಂದು ಸಂಜೆ ನೀಚರ್ಾಲು ಅಶ್ವತ್ಥ ಕಟ್ಟೆ ಪರಿಸರದಿಂದ ಮತ್ತು ಸೀತಾಂಗೋಳಿ ಶ್ರೀದೇವಿ ಭಜನ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮನ, ನ.24ರಂದು ಬೆಳಗ್ಗೆ ಗಣಪತಿ ಹೋಮ, ವೇದಪಾರಾಯಣ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನದಾನ, ಸಾಯಂಕಾಲ 6 ಘಂಟೆಗೆ ದೀಪಾರಾಧನೆ, ತಾಯಂಬಕಂ, 7 ಘಂಟೆಗೆ ಏಣಿಯಪರ್ು ತರವಾಡು ಮನೆಯಿಂದ ಶ್ರೀ ವಿಷ್ಣುಮೂತರ್ಿ ದೈವದ ಭಂಡಾರ ಬರುವುದು, 7.30ಕ್ಕೆ ನೀಚರ್ಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಿಂದ ಹುಲ್ಪೆ ಮೆರವಣಿಗೆ, ರಾತ್ರಿ 7 ಘಂಟೆಗೆ ರಂಗಪೂಜೆ, ಉತ್ಸವ ಬಲಿ, ಬೇಳದ ಅಶ್ವತ್ಥ ಕಟ್ಟೆಗೆ ಶ್ರೀ ದೇವರ ಘೋಷಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ, ಮಧ್ಯರಾತ್ರಿ 12 ಘಂಟೆಗೆ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ. ನ.25ರಂದು ಬೆಳಗ್ಗೆ 8.30ಕ್ಕೆ ಶ್ರೀ ವಿಷ್ಣುಮೂತರ್ಿ ದೈವದ ಕೋಲ, ಪ್ರಸಾದ ವಿತರಣೆ, ಭಂಡಾರ ನಿರ್ಗಮನ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನ.24ರಂದು ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಸಂಘ ಮತ್ತು ಶ್ರೀ ವೀರಾಂಜನೇಯ ಕಳರಿ ವ್ಯಾಯಾಮ ಶಾಲೆ, ಏಣಿಯರ್ಪು ಇವರಿಂದ ಭಜನೆ, 9.30ರಿಂದ ಕು| ರಮ್ಯಾ ಅಂಬಕಾನ ಅವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ, 10.30ರಿಂದ 12.30ರ ತನಕ ಆಕಾಶವಾಣಿ ಕಲಾವಿದರಾದ ವಿದ್ವಾನ್ ಶಿಜು ಕರುಣಾಕರನ್ ಕಣ್ಣೂರು ಮತ್ತು ವಿದ್ವಾನ್ ಸುರೇಶ್ ಬಾಬು ಕಣ್ಣೂರು ಇವರಿಂದ ಸಂಗೀತಾರ್ಚನೆ, ಮಧ್ಯಾಹ್ನ 12.30ರಿಂದ 2ರ ತನಕ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು ಮತ್ತು ಬಳಗದವರಿಂದ ಭಕ್ತಿಗಾನಾಮೃತ, 2ರಿಂದ ಯಕ್ಷಭಾರತಿ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5ರಿಂದ 6ರ ತನಕ ವಿದ್ವಾನ್ ಪ್ರಭಾಕರ ಕುಂಜಾರು ಮತ್ತು ಶಿಷ್ಯೆ ದೀಪ್ತಿ ಎನ್.ಎಸ್. ಕಂಬಾರು ಇವರಿಂದ ವಯೋಲಿನ್ ವಾದನ, ರಾತ್ರಿ 6ರಿಂದ 9ರ ತನಕ ನಾಟ್ಯ ವಿದ್ಯಾಲಯ ಕುಂಬಳೆ ಇದರ ನೃತ್ಯ ನಿದರ್ೇಶಕಿ ವಿದುಷಿ ವಿದ್ಯಾಲಕ್ಷ್ಮೀ ಬೇಳ ಇವರ ಶಿಷ್ಯೆಯರಿಂದ ನೃತ್ಯ ವೈವಿಧ್ಯ ಹಾಗೂ 9ರಿಂದ 10.30ರ ತನಕ ನೃತ್ಯ ನಿದರ್ೇಶಕಿ ವಿದುಷಿ ಶ್ರೀಮತಿ ನಿಶಿತಾ ಪುತ್ತೂರು (ಕುಂಜಾರು) ಇವರಿಂದ ನೃತ್ಯ ವೈಭವ ನಡೆಯಲಿದೆ.
................................................................................................................................................................
ಕಾಟುಕುಕ್ಕೆಯಲ್ಲಿ ಷಷ್ಠೀ ಮಹೋತ್ಸವ
ಪೆರ್ಲ: ಕಾಟುಕುಕ್ಕೆ ಶ್ರಿಸುಬ್ರಾಯ ದೇವಸ್ಥಾನದಲ್ಲಿ ವಾಷರ್ಿಕ ಷಷ್ಠೀ ಮಹೋತ್ಸವ ನ.24 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ನ. 21 ಮಂಗಳವಾರ ಬೆಳಿಗ್ಗೆ 7 ರಿಂದ ಉಷಃಪೂಜೆ,8.30ಕ್ಕೆ ಗಣಪತಿ ಪೂಜೆ, ಗ್ರಾಮಸ್ಥರ ಕೂಡುವಿಕೆಯಿಂದ ಉಬ್ರಾಣ ತುಂಬಿಸುವುದು, ಗಣಪತಿ ಹವನ,12ಕ್ಕೆ ಮಹಾಪೂಜೆ, ಬಲಿ ಹೊರಡುವುದು, ಪ್ರಸಾದ ವಿತರಣೆ, ಸಂತರ್ಪಣೆ, ರಾತ್ರಿ 7.30 ರಿಂದ ಮಹಾಪೂಜೆ, ಉತ್ಸವಗಳು ನೆರವೇರಿದವು.
ನ.22 ರಂದು ಬುಧವಾರ ಬೆಳಿಗ್ಗೆ 7 ರಿಂದ ಉಷಃಪೂಜೆ, ಗಣಪತಿ ಹೋಮ, ಉತ್ಸವ, ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಬಲಿ, ಪ್ರಸಾದ ವಿತರಣೆ, ಸಂತರ್ಪಣೆ, ರಾತ್ರಿ 7.30 ರಿಂದ ಮಹಾಪೂಜೆ, ಉತ್ಸವಗಳು ನಡೆಯಲಿವೆ.ನ.23 ರಂದು ಗುರುವಾರ ಪಂಚಮೀ ಉತ್ಸವದ ಅಂಗವಾಗಿ ಬೆಳಿಗ್ಗೆ 7 ರಿಂದ ಉಷಃಪೂಜೆ, ಗಣಪತಿ ಹೋಮ. ಉತ್ಸವ, ತುಲಾಭಾರ ಸೇವೆ,12 ಕ್ಕೆ ಮಹಾಪೂಜೆ, ಬಲಿ,ಪ್ರಸಾದ ವಿತರಣೆ, ಸಂಜೆ 6.45 ಕ್ಕೆ ಗಣಪತಿ ಪೂಜೆ, 7.30 ರಿಂದ ಮಹಾಪೂಜೆ, ಉತ್ಸವ, ಪಲ್ಲಕಿ ಉತ್ಸವ, ಬೀದಿ ಮಡೆಸ್ನಾನ ನಡೆಯಲಿದೆ.
ನ.24 ರಂದು ಶುಕ್ರವಾರ ಷಷ್ಠೀ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7 ರಿಂದ ಉಷಃಪೂಜೆ, ಗಣಪತಿ ಹೋಮ, ಉತ್ಸವ, ತುಲಾಭಾರ ಸೇವೆ, 12ಕ್ಕೆ ಮಹಾಪೂಜೆ, ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ, ಮಡೆಸ್ನಾನ, ಸಂಜೆ 4 ರಿಂದ 7ರ ವರೆಗೆ ಬೀದಿ ಮಡೆಸ್ನಾನ ನಡೆಯಲಿದೆ. ರಾತ್ರಿ 8 ರಿಂದ ಮಹಾಪೂಜೆ, 11 ರಿಂದ ಶ್ರೀಭೂತಬಲಿ, ಭಂಡಾರದ ಮನೆ ವನಕ್ಕೆ ಶ್ರೀದೇವರ ಸವಾರಿ ಹಿಂದಿರುಗಿ ಬಂದು ಬೆಡಿ, ಉತ್ಸವ, ಶಯನ ನಡೆಯಲಿದೆ.
ನ.25 ರಂದು ಸಪ್ತಮೀ ಉತ್ಸವದ ಅಂಗವಾಗಿ ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಶಯನೋತ್ಥಾನ, ಮಂಗಲಾಭಿಷೇಕ, ಉಷಃಪೂಜೆ, ಗ್ರಾಮಸ್ಥರಿಂದ ಹಣ್ಣುಗಾಯಿ ಸಮರ್ಪಣೆ, 10ಕ್ಕೆ ಅವಭೃತ ಸ್ನಾನಕ್ಕೆ ಹೊರಡುವುದು, ಸಂಜೆ 4ಕ್ಕೆ ದೇವರ ಆಗಮನ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 8ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ.9ಕ್ಕೆ ಶ್ರೀಹುಲಿಭೂತ ನೇಮ, ರಂಗಪೂಜೆ, ಮಂತ್ರಾಕ್ಷತೆ ನಡೆಯಲಿದೆ. ನ.26 ರಂದು ಬೆಳಿಗ್ಗೆ ಉಗ್ರಾಣ ಶೋಧನೆ, ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಕಾತರ್ಿಕಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನ.21 ರಂದು ಖಂಡೇರಿ ಶ್ರೀಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದವರಿಂದ ಮಹಿಷಮಧರ್ಿನಿ ಯಕ್ಷಗಾನ ಬಯಲಾಟ. 22 ರಂದು ರಾತ್ರಿ 7 ರಿಂದ ಬಾಳೆಮೂಲೆ ಕಾಟುಕುಕ್ಕೆಯ ಮಯೂರ ಯುವಕ ಮಂಡಲದ ನೇತೃತ್ವದಲ್ಲಿ ಬಾಲ ಕಲಾವಿದರಿಂದ ಸಮುದ್ರ ಮಥನ ಯಕ್ಷಗಾನ ಬಯಲಾಟ,ರಾತ್ರಿ 9.30 ರಿಂದ ಊರ-ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತ್ರಿಪುರ ಮಥನ ಯಕ್ಷಗಾನ ಬಯಲಾಟ ನಡೆಯಲಿದೆ. ನ.23 ರಂದು ರಾತ್ರಿ 7 ರಿಂದ ರಂಗಸಂಗಮ ಕಾಟುಕುಕ್ಕೆ ಸಂಸ್ಥೆಯವರಿಂದ ನೃತ್ಯ ಕಾರ್ಯಕ್ರಮ ಮತ್ತು ದಿ.ಕಲಾಭವನ್ ಮಣಿ ಇವರ ಶಿಷ್ಯ ರಂಜಿತ್ ಚಾಲಕ್ಕುಡಿ ಯವರಿಂದ ಮಣಿ ಕಿಲುಕ್ಕಂ ಜಾನಪದ ಸಂಜೆ ಪ್ರದರ್ಶನಗೊಳ್ಳಲಿದೆ. ನ.24 ರಂದು ರಾತ್ರಿ 7 ರಿಂದ ನೃತ್ಯಾರ್ಚನೆ, ಗೀತಾ ಸಾಹಿತ್ಯ ಸಂಭ್ರಮ, ತಾಲೀಮು ಪ್ರದರ್ಶನ ನಡೆಯಲಿದೆ. ನ.25 ರಂದು ಮಧ್ಯಾಹ್ನ 1 ರಿಂದ ಯಕ್ಷಗಾನ ತಾಳಮದ್ದಳೆ ಯಾಗ ಸಂಕಲ್ಪ ಪ್ರದರ್ಶನಗೊಳ್ಳಲಿದೆ.
................................................................................................................................................................
ಚೇರ್ಕಬೆ ಕ್ಷೇತ್ರದಲ್ಲಿ
ಪೆರ್ಲ: ಪಡ್ರೆ ಸಮೀಪದ ಚೇರ್ಕಬೆ ಶ್ರೀಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾಷರ್ಿಕ ಷಷ್ಠೀ ಮಹೋತ್ಸವ ನ.24 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 11.30 ರಿಂದ ಪದ್ಮಶ್ರೀ ಗಿರೀಶ್ ಭಾರದ್ವಾಜ್, ಕುಂಟಿಕಾನ ರಾಧಾಕೃಷ್ಣ ಭಟ್ ರವರಿಗೆ ಸಾಧಕ ಪ್ರಶಸ್ತಿ ಪ್ರಧಾನ ನಡೆಯಲಿದೆ.
.................................................................................................................................................................
ಮಂಜೇಶ್ವರ ಅನಂತೇಶ್ವರ ಸನನಿಧಿಯಲ್ಲಿ
ಮಂಜೇಶ್ವರ: ಇತಿಹಾಸ ಪ್ರಸಿದ್ದ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಸೋಮವಾರ ಧ್ವಜಾರೋಹಣ ನೆರವೇರಿತು.ನ.21 ರಂದು ಮಂಗಳವಾರ ಬೆಳಿಗ್ಗೆ 9 ರಿಂದ ಹಗಲು ಉತ್ಸವ, 12.30ಕ್ಕೆ ಯಜ್ಞ, 3.30ಕ್ಕೆ ಯಜ್ಞಾರತಿ, ಬಲಿ, 4ಕ್ಕೆ ಮಹಾಪೂಜೆ, ಸಮಾರಾಧನೆ ನಡೆಯಿತು.
ನ.23 ರಂದು ಬೆಳಿಗ್ಗೆ 9.30ಕ್ಕೆ ಸ್ವರ್ಣ ಲಾಲ್ಕಿ ಹಗಲು ಉತ್ಸವ, 12ಕ್ಕೆ ಪ್ರಾರ್ಥನೆ, 3.30ಕ್ಕೆ ಅಭಿಷೇಕ, ತುಲಾಭಾರ, ಸಂಜೆ 5ಕ್ಕೆ ಮಹಾಪೂಜೆ, 5.30ಕ್ಕೆ ಶ್ರೀದೇವ ದರ್ಶನ ಪ್ರಾರ್ಥನೆ, 6ಕ್ಕೆ ಯಜ್ಞ ನಡೆಯಲಿದೆ. ನ.24 ರಂದು ಬೆಳಿಗ್ಗೆ 10 ರಿಂದ 12 ರವರೆಗೆ ಧರ್ಮ, 12.30ಕ್ಕೆ ಮಹಾಪೂಜೆ, 1ಕ್ಕೆ ಯಜ್ಞ, 3.30 ಕ್ಕೆ ಪೂಣರ್ಾಹುತಿ,4ಕ್ಕೆ ಯಜ್ಞಾರತಿ, ಸ್ವರ್ಣ ಲಾಲ್ಕಿಯಲ್ಲಿ ಬಲಿ, 5ಕ್ಕೆ ರಥಾರೋಹಣ ನಡೆಯಲಿದೆ. ನ.25 ರಂದು ಅಪರಾಹ್ನ 1.30ಕ್ಕೆ ಅವಭೃತ, 2.30 ರಿಂದ 4.30ರ ವರೆಗೆ ಲಾಲ್ಕಿ, ರಥುತ್ಸವ, 5ಕ್ಕೆ ಶೇಷ ತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7 ರಿಂದ ಗಡಿ ಪ್ರಸಾದ ವಿತರಣೆ ನಡೆಯಲಿದೆ.
...........................................................................................................................................


