ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಎಂಡೋಸಲ್ಫಾನ್ ಯಾದಿ ಬುಡಮೇಲು
ಸಂತ್ರಸ್ತರ ಒಕ್ಕೂಟ ಆರೋಪ
ಕಾಸರಗೋಡು: 2017 ಎಪ್ರಿಲ್ನಲ್ಲಿ ಪ್ರತ್ಯೇಕ ವೈದ್ಯಕೀಯ ಶಿಬಿರ ಮೂಲಕ ಪತ್ತೆಹಚ್ಚಿದ ಸಂತ್ರಸ್ತರ ಯಾದಿಯನ್ನು ಬುಡಮೇಲುಗೊಳಿಸಲಾಗಿದೆ ಎಂದೂ, ಯಾವ ಉದ್ದೇಶದಿಂದ ಯಾದಿಯನ್ನು ಬುಡಮೇಲುಗೊಳಿಸಿದೆ ಎಂಬುದನ್ನು ಜಿಲ್ಲಾಡಳಿತೆ ಸ್ಪಷ್ಟೀಕರಣ ನೀಡಬೇಕೆಂದು ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ಸಭೆಯಲ್ಲಿ ಆಗ್ರಹಿಸಿದೆ.
ಕಳೆದ ಸೆಲ್ ಸಭೆಯಲ್ಲಿ 1905 ಮಂದಿಯ ಪಟ್ಟಿಯನ್ನು ಸಂಬಂಧಪಟ್ಟ ಡೆಪ್ಯೂಟಿ ಕಲೆಕ್ಟರ್ ಮಂಡಿಸಲು ಪ್ರಯತ್ನಿಸಿದಾಗ ವಿವಿಧ ಕಾರಣ ಹೇಳಿ ಮುಂದೂಡಿರುವುದು ಯಾಕೆಂದೂ ಜನಪರ ಒಕ್ಕೂಟ ಸಭೆಯಲ್ಲಿ ಪ್ರಶ್ನಿಸಿದೆ. ಸಾಮಾನ್ಯವಾಗಿ ಕ್ರಮಗಳು ಪೂತರ್ಿಗೊಂಡ ಬಳಿಕವೇ ಸೆಲ್ನ ಅಂಗೀಕಾರಕ್ಕಾಗಿ ಪಟ್ಟಿಯನ್ನು ಮಂಡಿಸಲಾಗುತ್ತಿದೆ. ಎಂಡೋಸಲ್ಫಾನ್ ದುರಂತವನ್ನೇ ಮರೆಮಾಚಲಿರುವ ಪ್ರಯತ್ನದ ಅಂಗವಾಗಿ ನಡೆಸುವ ಇಂತಹ ಯತ್ನಗಳನ್ನು ವಿರೋಧಿಸಬೇಕೆಂದು ಸಭೆ ನಿರ್ಧರಿಸಿತು. ಡಿಸೆಂಬರ್ 10 ರಂದು ಮಾತೆಯರು ನಡೆಸಲಿರುವ ಅನಿದರ್ಿಷ್ಟಾವಧಿ ಅಹನರ್ಿಶಿ ನಿರಾಹಾರ ಸತ್ಯಾಗ್ರಹದಲ್ಲಿ ಈ ವಿಷಯವನ್ನು ಮುಂದಿಡುವುದಾಗಿ ಸಭೆಯಲ್ಲಿ ನೀರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮುನೀಸ್ ಅಂಬಲತ್ತರ ಅಧ್ಯಕ್ಷತೆ ವಹಿಸಿದರು. ನಾರಾಯಣನ್ ಪೆರಿಯ, ಡಾ.ಅಂಬಿಕಾಸುತನ್ ಮಾಂಗಾಡ್, ಪಿ.ಮುರಳೀಧರನ್, ವಿಮಲಾ ಫ್ರಾನ್ಸಿಸ್, ಗೋವಿಂದನ್ ಕಯ್ಯೂರು ಮೊದಲಾದವರು ಮಾತನಾಡಿದರು.


