ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಸಾಮಾಜಿಕ ಜವಾಬ್ದಾರಿಯುತ ಮಾಧ್ಯಮಗಳಿಗೆ ಗೌರವಾಧಾರಗಳು ಎಂದಿಗೂ ಇವೆ-ಪ್ರೊ.ಎಸ್.ಜಿ.ಸಿದ್ದರಾಮಯ್ಯ.
ಕನ್ನಡ ಕೈರಳಿ ದಶಮಾನೋತ್ಸವ ಉದ್ಘಾಟನೆ-ವಿಶೇಷ ಸಂಚಿಕೆ ಬಿಡುಗಡೆ.
ಉಪ್ಪಳ: ಗ್ರಾಮೀಣ ಪ್ರದೇಶದ ಜನಸಾಮಾನ್ಯರು, ಸೌಹಾರ್ಧತೆ, ಆಧ್ರ್ರ ಭಾವನೆಯಿಂದ ಕುಟುಂಬ ಸಮಾಜ ಕಟ್ಟಿದವರಾಗಿದ್ದು, ಮಾಧ್ಯಮಗಳು ಇಂತಹ ಭಾವಗಳನ್ನು ಪಸರಿಸುವಲ್ಲಿ ಮುಂಚೂಣಿಯಲ್ಲಿರಬೇಕು. ರಾಜಕೀಯ ಸೀಮಿತ ದೃಷ್ಟಿಕೋನಗಳು ಜನರೆಡೆಯಲ್ಲಿ ವಿಷ ಬೀಜ ಬಿತ್ತುವ ಮೂಲಕ ಅಸ್ತಿರತೆಗೆ ಪ್ರಯತ್ನಿಸುತ್ತಿದ್ದು, ಈ ಬಗೆಗೂ ಮಾಧ್ಯಮಗಳು ಜಾಗೃತರಾಗಿರಬೇಕು ಎಂದು ಕನರ್ಾಟಕ ಸರಕಾರದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಗ್ರ ಗಡಿನಾಡಿನ ಕನ್ನಡಿಗರ ಮುಖವಾಣಿ ಕನ್ನಡ ಕೈರಳಿಯ ದಶಮಾನೋತ್ಸವ ಹಾಗೂ ವಿಶೇಷ ಸಂಚಿಕೆಯನ್ನು ಮಂಗಳವಾರ ಉಪ್ಪಳದ ವ್ಯಾಪಾರಿ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜವಾಬ್ದಾರಿಯನ್ನು ಉಳಿಸಿಕೊಂಡ ಮುದ್ರಣ ಮಾಧ್ಯಮಗಳಿಗೆ ಗೌರವಾಧಾರಗಳಿದ್ದು, ಓದುಗರು ಉಳಿಸಿ ಬೆಳೆಸುತ್ತಾರೆ. ಗಡಿನಾಡಿನಲ್ಲಿ ಕನ್ನಡ ಪ್ರಜ್ಞೆಯನ್ನು ಪಸರಿಸುವಲ್ಲಿ ಪತ್ರಿಕೆಗಳು ಮಹತ್ತರವಾದ ಜವಾಬ್ದಾರಿ ನಿರ್ವಹಿಸುತ್ತಿದ್ದು, ಸಾಮಾಜಿಕ ಬದ್ದತೆಗಳಿಗನುಗುಣವಾಗಿ ಬೆಳೆಯುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಹೊರನಾಡಿನ ಕನ್ನಡ ಸೊಗಡುಗಳನ್ನು ಬೆಳೆಸುವಲ್ಲಿ ವಿಶಿಷ್ಟವಾದ ಕರ್ಮ ನಿರತವಾಗಿರುವ ಮಾಧ್ಯಮಗಳು ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಸೌಹಾರ್ಧತೆಯೊಳಗೆ ಬದ್ದತೆಯಿಂದ ಸಮಾಕ ಕಟ್ಟುವ ಕಾಯಕ ಸಮೃದ್ದಿಯೆಡೆಗೆ ಕೊಂಡೊಯ್ದು ನೆಮ್ಮದಿಯೊದಗಿಸುವುದು ಎಂದು ಅವರು ತಿಳಿಸಿದರು.
ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕನರ್ಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದಶರ್ಿ ಡಾ.ಕೆ.ಮುರಳೀಧರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಬ್ಲಾ.ಪಂ. ಸದಸ್ಯ ಕೆ.ಆರ್.ಜಯಾನಂದ, ಕನರ್ಾಟಕ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಕೇರಳ ಅರಣ್ಯ ನಿಗಮ ನಿದರ್ೇಶಕ ಬಿ.ವಿ.ರಾಜನ್, ಕನರ್ಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಯೆಯ್ಯಾಡಿ, ಕನರ್ಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕಿ ಕೊತ್ತ ಕೃಷ್ಣವೇಣಿ ಹೈದರಾಬಾದ್, ಮಂಗಲ್ಪಾಡಿ ಗ್ರಾ.ಪಂ.ಸದಸ್ಯೆ ಸುಜಾತಾ ಶೆಟ್ಟಿ ಉಪಸ್ಥಿತರಿದ್ದು ಶುಭಹಾರೈಸಿದರು. ಅಝೀಂ ಮಣಿಮುಂಡ ಸ್ವಾಗತಿಸಿ, ಕೇಳು ಮಾಸ್ತರ್ ಅಗಲ್ಪಾಡಿ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಝಡ್ ಎ.ಕಯ್ಯಾರ್, ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.



