ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 21, 2017
ಮಂಗಳೂರಲ್ಲಿ ಮಲಯಾಳಂ ಚಿತ್ರದ ಶೂಟಿಂಗ್
ಮಂಗಳೂರು: ಮಲಯಾಳಂನಲ್ಲಿ ಹೊಸ ಚಿತ್ರವೊಂದು ಬರುತ್ತಿದೆ. ಅದುವೇ 'ಕಾಯಂಕುಲಂ ಕೊಚ್ಚುನ್ನಿ' ಎಂಬ ಮಲಯಾಳಂ ಸಿನಿಮಾ. ಇದನ್ನು ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಿಮರ್ಾಣ ಮಾಡಲಾಗುತ್ತಿದೆ.
ಮಲಯಾಳಂನ ಬಹು ನಿರೀಕ್ಷಿತ ಸಿನೆಮಾ ಕಾಯಂಕುಲಂ ಕೊಚ್ಚುನ್ನಿಯ ಬಹುತೇಕ ಚಿತ್ರೀಕರಣ ಕಡಲನಗರಿಯ ಮಂಗಳೂರಿನಲ್ಲಿ ನಡೆಯುತ್ತಿದೆ. ಮಲಯಾಲಂನ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿರುವ ನಿವಿನ್ ಪೌಳಿ ಚಿತ್ರದ ನಾಯಕ. ಇವರು ಕೂಡಾ ಕರಾವಳಿಯಲ್ಲಿಯೇ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಮಂಗಳೂರು ಹೊರವಲಯದ ಮುಡಿಪುವಿನಿಂದ ತುಸು ದೂರದಲ್ಲಿರುವ ಬಂಟ ಕುಟುಂಬದ ಪ್ರತಿಷ್ಠಿತ ಮನೆತನವಾದ ನಾರ್ಯಗುತ್ತುವಿನ ಹಳೆಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜೊತೆಗೆ ಫರಂಗಿಪೇಟೆ ಸೇರಿದಂತೆ ಅನೇಕ ನದಿ ತಿರ ಮತ್ತು ದ್ವೀಪಗಳಲ್ಲಿ ದೊಡ್ಡ ಮಟ್ಟಿನ ಸೆಟ್ ಹಾಕಿ ಶೂಟಿಂಗ್ ನಡೆಸಲಾಗುತ್ತಿದೆ. ಚಿತ್ರಕ್ಕೆ ಇತ್ತೀಚೆಗೆ ಮಂಜೇಶ್ವರ ಸಮೀಪದ ಉದ್ಯಾವರದಲ್ಲಿ ಶುಭಮುಹೂರ್ತ ನಡೆಸಿ ಚಿತ್ರೀಕರಣ ಕೆಲವು ಭಾಗಗಳು ದಾಖಲಾಗಿದ್ದವು.
ರೋಶನ್ ಆ?ಯಂಡ್ರೋಸ್ ಈ ಚಿತ್ರದ ನಿದರ್ೇಶಕ. ಬಾಬ್ಬಿ ಹಾಗೂ ಸಂಜಯ್ ನೇತೃತ್ವದಲ್ಲಿ ನೈಜ ಜೀವನ ಆಧಾರಿತ ಘಟನೆಯನ್ನು ಆಧರಿಸಿ ಕಾಯಂಕುಲಂ ಕೊಚ್ಚುನ್ನಿ ಚಿತ್ರ ನಿಮರ್ಿಸಲಾಗಿದೆ. ಶ್ರೀಮಂತ ವ್ಯಕ್ತಿಗಳಿಂದ ಹಣ ದರೋಡೆ ಮಾಡಿ ಅದನ್ನು ಬಡ ಜನರಿಗೆ ಹಂಚುವ ಕೆಲಸ ಕೊಚ್ಚುನ್ನಿಯ ಕಥಾವಸ್ತುವನ್ನು ಈ ಸಿನೆಮಾ ಹೊಂದಿದೆ.


