ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಇರಿಯಣ್ಣಿ ಶಾಲೆಯಲ್ಲಿ ವಿದ್ಯಾಥರ್ಿಗಳ ಕೊಯ್ಲು ಹಬ್ಬ
ಮುಳ್ಳೇರಿಯ: ಇರಿಯಣ್ಣಿ ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಎನ್ಎಸ್ಎಸ್ ವಿದ್ಯಾಥರ್ಿಗಳು ಕೊಯ್ಲು ಹಬ್ಬ ನಡೆಸಿದರು.
ಕಾನತ್ತೂರು ಪಯರ್ ಪಳ್ಳ ನಾರಾಯಣಿ ಅಮ್ಮ ಅವರ ಒಂದು ಎಕ್ರೆಯಷ್ಟು ಭಂಜರು ಭೂಮಿಯಲ್ಲಿ ವಿದ್ಯಾಥರ್ಿಗಳು ಭತ್ತದ ಕೃಷಿ ಮಾಡಿದ್ದರು. ಊರಿನ ಕೃಷಿ ಸಂಸ್ಕೃತಿಯನ್ನು ಉಳಿಸಲು, ಭತ್ತದ ಕೃಷಿಯ ಬಗ್ಗೆ ತಿಳಿಯಲು ಇಲ್ಲಿ ಏಳನೇ ಬಾರಿಗೆ ವಿದ್ಯಾಥರ್ಿಗಳು ಕೃಷಿ ಮಾಡುತ್ತಿದ್ದಾರೆ. ಭತ್ತವನ್ನು ಬಿತ್ತಿ, ನೇಜಿ ನೆಟ್ಟು, ಕಳೆ ಕಿತ್ತು ಎನ್ಎಸ್ಎಸ್ ಸ್ವಯಂ ಸೇವಕರು ಕೃಷಿಯನ್ನು ಪೋಷಿಸುವಲ್ಲಿ ಯಶಸ್ವಿಯಾದರು. ಮುಳಿಯಾರು ಕೃಷಿ ಭವನದಿಂದ ಲಭಿಸಿದ ಜ್ಯೋತಿ ಭತ್ತದ ಬೀಜವನ್ನು ಭತ್ತದ ಕೃಷಿಗೆ ಉಪಯೋಗಿಸಲಾಯಿತು. ಸಂಪೂರ್ಣವಾಗಿ ಜೈವಿಕ ಗೊಬ್ಬರವನ್ನು ಉಪಯೋಗಿಸಲಾಯಿತು.
ಡಿಸೆಂಬರ್ ತಿಂಗಳಲ್ಲಿ ನಡೆಯುವ ಎನ್ಎಸ್ಎಸ್ ಸಪ್ತದಿನ ಶಿಬಿರಕ್ಕೆ ಮತ್ತು ಬಡ್ಸ್ ಶಾಲೆಯಲ್ಲಿ ನಡೆಯುವ ಹುತ್ತರಿ ಹಬ್ಬಕ್ಕೆ ಈ ಭತ್ತದ ಅಕ್ಕಿಯನ್ನು ಉಪಯೋಗಿಸಲಾಗುವುದು. ಕೊಯ್ಲು ಕಾರ್ಯಕ್ರಮವನ್ನು ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಂದ್ರನ್, ಶೋಭಾ ಪಯೋಲಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ವಾಸು, ಪ್ರಾಂಶುಪಾಲ ಪಿ.ವಿ.ಶಶಿ, ಸಜೀವನ್ ಉಪಸ್ಥಿತರಿದ್ದರು.

