ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಇಂದು ಯಕ್ಷಗಾನ ತಾಳಮದ್ದಳೆ `ವೀರಮಣಿ ಕಾಳಗ'
ಕಾಸರಗೋಡು: ಸಾಮಾಜಿಕ - ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ನ.19 ರಂದು ಮಧ್ಯಾಹ್ನ 2.45 ರಿಂದ ಪಿಲಿಕುಂಜೆಯಲ್ಲಿರುವ ಕಾಸರಗೋಡು ಮುನ್ಸಿಪಲ್ ಕಾನರೆನ್ಸ್ ಹಾಲ್ನಲ್ಲಿ ವೀರಮಣಿ ಕಾಳಗ ಯಕ್ಷಗಾನ ತಾಳಮದ್ದಳೆ ಜರಗಲಿದೆ.
ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ, ಯಕ್ಷಗಾನ ಕಲಾವಿದ ಸಂಕಬೈಲು ಸತೀಶ ಅಡಪ ಭಾಗವಹಿಸುವರು.
ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ್ ಅಮ್ಮಣ್ಣಾಯ, ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆಯಲ್ಲಿ ಲವಕುಮಾರ್ ಐಲ, ಕಲಾವಿದರಾಗಿ ಜಬ್ಬಾರ್ ಸಮೋ ಸಂಪಾಜೆ(ವೀರಮಣಿ), ಸುಣ್ಣಂಬಳ ವಿಶ್ವೇಶ್ವರ ಭಟ್(ಹನುಮಂತ), ವಾಸುದೇವ ರಂಗ ಭಟ್(ಈಶ್ವರ) ಮತ್ತು ತಾರಾನಾಥ ಬಲ್ಯಾಯ(ಶತ್ರುಘ್ನ) ಭಾಗವಹಿಸುವರು.

