ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಪೆಣರ್ೆಯಲ್ಲಿ ನೆರವೇರಿದ ಸಾಮೂಹಿಕ ವಿವಾಹ
ಕುಂಬಳೆ: ಕುಂಬಳೆ ಸಮೀಪದ ಸೀತಾಂಗೋಳಿ ಬಳಿಯ ಪೆಣರ್ೆ ಶ್ರೀಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ವಾಣಿಯ ಯಾ ಗಾಣಿಗ ಸಮುದಾಯದ ಅತಿ ವಿಶಿಷ್ಟ ಸಾಮೂಹಿಕ ವಿವಾಹ ಹಾಗು ಚಪ್ಪರ ಮದುವೆ ಕಾರ್ಯಕ್ರಮಗಳು ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ಶನಿವಾರ ನೆರವೇರಿತು.
ವಾಣಿಯ ಯಾ ಗಾಣಿಗ ಸಮುದಾಯದ ಅತಿ ಶ್ರದ್ದಾ ಕೇಂದ್ರವಾದ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ವಾಷರ್ಿಕವಾಗಿ ಎರಡು ಬಾರಿ ಸಾಮೂಹಿಕ ವಿವಾಹ ನಡೆಯುತ್ತಿದ್ದು ಈ ವರ್ಷದ ಎರಡನೇ ಸಾಮೂಹಿಕ ವಿವಾಹ ಶನಿವಾರ ನಡೆಯಿತು. 16 ಯುವ ಜೋಡಿಗಳು ಶಾಸ್ತ್ರೋಕ್ತವಾಗಿ ಹಸೆಮಣೆಗೇರಿದರು.
ಜೊತೆಗೆ ಮಹತ್ವಪೂರ್ಣ ಚಪ್ಪರ ಮದುವೆ ಶನಿವಾರ ಬೆಳಿಗ್ಗೆ ನೆರವೇರಿತು. 27 ಪ್ರಾಯಪೂರ್ಣರಾಗದ ಹುಡಿಗಿಯರು ಈ ಬಾರಿ ಚಪ್ಪರ ಮದುವೆ ಸೇವೆ ನೆರವೇರಿಸಿದರು. ಕಾಸರಗೊಡು ದಕ್ಷಿಣ ಕನ್ನಡದ ಮಂಗಳುರು, ಸುಳ್ಯ, ಪುತ್ತೂರು,ವಿಟ್ಲ, ಮಡಿಕೇರಿ, ಉಡುಪಿ ಜಿಲ್ಲೆಗಳ ಸುಮಾರು 15 ಸಾವಿರಕ್ಕಿಂತಲೂ ಮಿಕ್ಕಿದ ಭಕ್ತರು ಪಾಲ್ಗೊಂಡರು.ಕ್ಷೇತ್ರದ ಆಚಾರ ಸ್ಥಾನಿಕರು, ಕಾರ್ನವರ್ ಗಳು ಭಾಗವಹಿಸಿ ನಿದರ್ೇಶನ ನೀಡಿದರು. ಕ್ಷೇತ್ರಕ್ಕೆ ತಲುಪಿದವರಿಗೆ ಬೆಳಿಗ್ಗೆನಿಂದಲೇ ಕ್ಷೇತ್ರದ ವತಿಯಿಂದ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.



