ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ಮೊಗೇರು ವಿನಲ್ಲಿ ಶತಚಂಡಿಕಾ ಯಾಗ, ಸಭಾಭವನ ಉದ್ಘಾಟನೆ, ಶ್ರೀಗಳ ಮೊಕ್ಕಾಂ ಇಂದು
ಪೆರ್ಲ: ರಾಜಾಪುರ,ಬಾಲಾವಲೀಕಾರ್ ಸಾರಸ್ವತ ಬ್ರಾಹ್ಮಣರ ಶ್ರದ್ದಾ ಕೇಂದ್ರವಾದ ಅಡ್ಕಸ್ಥಳ ಸಮೀಪದ ಮೊಗೇರು ಶ್ರೀದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಮದ್ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನ ಹಾಗು ಉಪಸ್ಥಿತಿಯಲ್ಲಿ ಇಂದಿನಿಂದ (ನ. 19) 23ರ ವರೆಗೆ ವೇದಮೂತರ್ಿ ಪಾಲೆಚ್ಚಾರು ಬಾಲಕೃಷ್ಣ ಭಟ್ ರವರ ನೇತೃತ್ವದಲ್ಲಿ ಶ್ರೀಶತಚಂಡಿಕಾ ಯಾಗ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜೊತೆಗೆ ನೂತನವಾಗಿ ನಿಮರ್ಿಸಿದ ಸಭಾಂಗಣದ ಉದ್ಘಾಟನೆ ನೆರವೇರಲಿದೆ.
ಕಾರ್ಯಕ್ರಮದ ಅಂಗವಾಗಿ ನ. 19 ರಂದು ಬೆಳಿಗ್ಗೆ 7ಕ್ಕೆ ನಿತ್ಯಪೂಜೆ, 8ಕ್ಕೆ ದೇವತಾ ಪ್ರಾರ್ಥನೆ, ಕೂಷ್ಮಾಂಡಹೋಮ ಸಹಿತ ಪ್ರಾಯಶ್ಚಿತ ವಿಧಿವಿಧಾನಗಳು, ಗಾಯತ್ರೀ ಜಪ, ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳ ಆರಾಧನೆ ನಡೆಯಲಿದೆ. 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು, ಅಪರಾಹ್ನ 2.30ಕ್ಕೆ ಮಕ್ಕಳ ಯಕ್ಷಗಾನ ತಂಡದಿಂದ ಸುದರ್ಶನ ವಿಜಯ ಬಯಲಾಟ ನಡೆಯಲಿದೆ. 3 ಗಂಟೆಗೆ ಅಡ್ಕಸ್ಥಳದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ಹೊರಟು ಕ್ಷೇತ್ರಕ್ಕೆ ಆಗಮಿಸುವುದು. ಸಂಜೆ 5ಕ್ಕೆ ನೂತನ ಸಭಾಭನವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಭಜನೆ, ನಿತ್ಯಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ವಿತರಣೆ ನಡೆಯುವುದು.
ನ.20 ರಂದು ಬೆಳಿಗ್ಗೆ 7ಕ್ಕೆ ಪ್ರಾಥಃಸ್ಮರಣೆ, ಗಣಪತಿಪೂಜನ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ, ಮಹಾಸಂಕಲ್ಪ, ಆಚಾರ್ಯಋತ್ವಿಗ್ವರಣ, ಮಧುಪರ್ಕಪೂಜೆ, ದೇವತಾ ಸ್ಥಾಪನೆ, ಸಪ್ತಶತಿ ಪಾರಾಯಣ, ಸಗ್ರಹ ಗಣಪತಿ ಅರ್ಥರ್ವ ಶೀರ್ಷ ಪುರಶ್ಚರಣ ಹವನ, 10 ಕ್ಕೆ ಭಜನೆ, 10.30ಕ್ಕೆ ಭಿಕ್ಷಾ ಸಂಕಲ್ಪ, 11.30ಕ್ಕೆ ಪೂಣರ್ಾಹುತಿ, ಮಂಗಳಾರತಿ, ಭವಾನಿಶಂಕರ ವದೇವರ ಪೂಜೆ, ಪ್ರಸಾದ ವಿತರಣೆ, ನಡೆದು, ಅಪರಾಹ್ನ 2ಕ್ಕೆ ಪಾದಪೂಜೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳು 3 ರಿಂದ ನಡೆಯಲಿದೆ. 6ಕ್ಕೆ ಭಕ್ತಿಸಂಗೀತ-ದಾಸ ಸಂಕೀರ್ತನೆ, 7ಕ್ಕೆ ದುಗರ್ಾಪರಮೇಶ್ವರಿ ದೇವಿ ಪೂಜೆ, ವಿಶೇಷ ಹೂವಿನ ಪೂಜೆ, ಭವಾನಿ ಶಂಕರ ದೇವರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

