ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ವಲಯೋತ್ಸವ
ಬದಿಯಡ್ಕ : ಮುಳ್ಳೇರಿಯ ಮಂಡಲದ ಪೆರಡಾಲ ಹವ್ಯಕ ವಲಯೋತ್ಸವವು ಇತ್ತೀಚೆಗೆ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜರಗಿತು. ಬೆಳಗ್ಗೆ ಧ್ವಜಾರೋಹಣ, ಶಂಖನಾದ ಗುರುವಂದನೆಯೊಂದಿಗೆ ಪ್ರಾರಂಭವಾಯಿತು. ವೇದಮೂತರ್ಿ ಪಟ್ಟಾಜೆ ವೆಂಕಟೇಶ್ವರ ಭಟ್ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿಕೊಟ್ಟರು.
ವೇ.ಮೂ. ಪರಮೇಶ್ವರ ಭಟ್ ಪಳ್ಳತ್ತಡ್ಕ ಇವರು ಧಾಮರ್ಿಕ ಪ್ರವಚನವನ್ನು ನೀಡುತ್ತಾ ಶ್ರದ್ಧಾ ಭಕ್ತಿಯಿಂದ ಗುರುದೇವತಾ ಸೇವೆಯನ್ನು ಕೈಗೊಂಡಲ್ಲಿ ಪರಮಾತ್ಮನ ಅನುಗ್ರಹವಿರುತ್ತದೆ. ಧಾಮರ್ಿಕತೆಗೆ ಮಹತ್ವವನ್ನು ನೀಡಿ, ಧರ್ಮ ಉಳಿದರೆ ಮಾತ್ರ ನಮ್ಮ ಸಂಸ್ಕಾರ ಉಳಿಯಲು ಸಾಧ್ಯ ಎಂದರು. ಮಂಡಲ ಕಾರ್ಯದಶರ್ಿಗಳಾದ ಬಾಲಸುಬ್ರಹ್ಮಣ್ಯ ಸರ್ಪಮಲೆ ಉಪಸ್ಥಿತರಿದ್ದರು. ವಲಯ ಹಾಗೂ ಮಂಡಲ ಮಾತೃ ವಿಭಾಗ ನೇತೃತ್ವದಿಂದ 25ಕ್ಕು ಹೆಚ್ಚಿನ ಮಾತೆಯರಿಂದ ಕುಂಕುಮಾರ್ಚನೆ ಹಾಗೂ ಭಜನೆ ಜರಗಿತು.
ಅಪರಾಹ್ನ ಮಹಾಸಭೆಗೆ ಮಂಡಲ ಶಿಷ್ಯಮಾಧ್ಯಮ ಪ್ರಧಾನ ಮಹೇಶ್ ಸರಳಿ ಹಾಗೂ ಮಂಡಲ ಬಿಂದು-ಸಿಂಧು ಪ್ರಧಾನ ದೇವಕೀ ಪನ್ನೆ ಮಠದ ಸೇವಾಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಗುರಿಕ್ಕಾರರಾದ ಮೀಸೆಬೈಲು ರಾಮಭಟ್ ಮತ್ತು ಪಟ್ಟಾಜೆ ನಾರಾಯಣ ಭಟ್, ರಾಮಾಯಣ ಪಾರಾಯಣ ಮಾಡಿರುವ ವ್ಯಕ್ತಿಗಳಾದ ಪೆಮರ್ುಖ ವೆಂಕಟ್ರಮಣ ಭಟ್ ಮತ್ತು ಧಮರ್ೇಶ ಮಲ್ಲಡ್ಕ ಇವರನ್ನು ಗುರುತಿಸುವಿಕೆ ಕಾರ್ಯವನ್ನು ಮುಳ್ಳೇರಿಯ ಮಂಡಲ ಅಧ್ಯಕ್ಷ ಫ್ರೊ.ಟಿ. ಕೃಷ್ಣಭಟ್ ನೆರವೇರಿಸಿದರು ಅಲ್ಲದೇ ಶ್ರೀ ಗುರುಗಳ ಆಶಯವನ್ನು ವಿವರವಾಗಿ ತಿಳಿಸಿದರು. ಮಂಡಲ ಮಾತೃವಿಭಾಗ ಕುಸುಮಾ ಪೆಮರ್ುಖ, ಮಂಡಲ ವಿದ್ಯಾಥರ್ಿ ವಾಹಿನಿ ಪ್ರಧಾನರಾದ ಕೇಶವ ಪ್ರಸಾದ ಎಡೆಕ್ಕಾನ ಉಪಸ್ಥಿತರಿದ್ದರು. ಪೆರಡಾಲ ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀ ಕಾರ್ಯಕರ್ತರು, ಶಿಷ್ಯವೃಂದ ಹಾಗೂ ಮಾತೆಯರು ಪಾಲ್ಗೊಂಡರು. ವಲಯ ಕಾರ್ಯದಶರ್ಿ ಮುರಳಿ ಪಟ್ಟಾಜೆ ಅತಿಥಿಗಳನ್ನು ಪರಿಚಯಿಸಿದರು. ವಲಯ ಅಧ್ಯಕ್ಷ ಶ್ರೀಹರಿ ಪೆಮರ್ುಖ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಥರ್ಿವಾಹಿನಿ ಪ್ರಧಾನ ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಣೆಗೈದರು. ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆಯು ಮುಕ್ತಾಯವಾಯಿತು.


